Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ) ಅಧ್ಯಕ್ಷರಾದ ನಂಜಯ್ಯ ಮಠ ರವರು ಶಿವಮೊಗ್ಗ ನಗರ ವಿಮಾನ ನಿಲ್ದಾಣದಲ್ಲಿ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
ಶನಿವಾರ ಸಂಜೆ ಶಿವಮೊಗ್ಗ ನಗರಕ್ಕೆ ಆಗಮಿಸಿ,ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ತಿಂಗಳ 7 ಮತು 8ರಂದು ತಾವು ಮತ್ತೊಮ್ಮೆ ಆಗಮಿಸಲಿದ್ದು ಅದರೊಳಗಾಗಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಸಂಪೂರ್ಣ ಗೊಳಿಸಬೇಕೆಂದು ಕಾಮಗಾರಿಗೆ ಸಂಬಂಧಪಟ್ಟ ಇಲಾಖೆ ಅಽಕಾರಿಗಳು ಗುತ್ತಿಗೆದಾರರಿಗೆ ಸೂಚಿಸಿದರು.
ಜೂನ್ ತಿಂಗಳ ಮೊದಲನೇ ವಾರದಲ್ಲಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ಭರವಸೆಯನ್ನು ಅಽಕಾರಿಗಳು ನೀಡಿದರು. ಇದರ ಜೊತೆಗೆ ಇಂಡಿಗೋ ವಿಮಾನ ಸಂಸ್ಥೆ ಪ್ರಯಾಣವನ್ನು ನಿಲ್ಲಿಸಿರುವುದು ಈ ನೈಟ್ ಲ್ಯಾಂಡಿಂಗ್ ವಿಚಾರಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ, ನೈಟ್ ಲ್ಯಾಂಡಿಂಗ್ ಕಾಮಗಾರಿಗೆ ಸಂಪೂರ್ಣ ರಾಜ್ಯ ಸರ್ಕಾರವೇ ಹಣವನ್ನು ನೀಡಿದ್ದು,
ಇಂಡಿಗೋ ವಿಮಾನವು ಕೇಂದ್ರ ಸರ್ಕಾರದ ಅಸ್ತಿತ್ವದಲ್ಲಿರುವುದರಿಂದ ಪೈಲೆಟ್‌ಗಳ ಕೊರತೆಯಿಂದ ಚಾಲನೆ ಯನ್ನು ನಿಲ್ಲಿಸಿರುತ್ತದೆ ಎಂದು ಅವರು ಹೇಳಿದರು.
Shivamogga Airport ಶಿವಮೊಗ್ಗ ನಗರದಲ್ಲಿ ನೈಟ್ ಲ್ಯಾಂಡಿಂಗ್ ವಿಚಾರವಾಗಿ ಹಲವು ವರದಿಗಳು ಬಂದಿದ್ದವು.
ಈ ಸಂಬಂಧ ನೈಟ್ ಲ್ಯಾಂಡಿಂಗ್ ಚಾಲನೆಗೆ ಇಂಡಿಗೋ ವಿಮಾನ ಸಂಸ್ಥೆ ಹಾಗೂ ಇನ್ನುಳಿದ ಅನೇಕ ವಿಮಾನ ಸಂಸ್ಥೆ ಗಳೊಂದಿಗೆ ಚರ್ಚಿಸಿ ಶಿವಮೊಗ್ಗ ನಗರಕ್ಕೆ ವಿಮಾನದ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು
