Thursday, August 6, 2026
Thursday, August 6, 2026

ಹಳೆಯ ನೆನಪು ನೋಡಿದರೆ ವಿದ್ಯಾರ್ಥಿಜೀವನ ಬಂಗಾರದ ಜೀವನ ಎಂಬುದು ಅರ್ಥವಾಗುತ್ತದೆ- ಪ್ರಾಂಶುಪಾಲ ವಿಜಯ ಕುಮಾರ್

Date:

ಸ್ನೇಹ ಮಿಲನದಂತಹ ಕಾರ್ಯಕ್ರಮಗಳು ಮನುಷ್ಯರ ಭಾವನೆಗಳನ್ನು ಬಾಂಧವ್ಯಗಳನ್ನು ಜೀವಂತವಾಗಿಟ್ಟುಕೊಳ್ಳುವಲ್ಲಿ ಸಹಾಯಕವಾಗುತ್ತದೆ ಎಂದು ಪ್ರಾಂಶುಪಾಲ ವಿಜಯ್‌ಕುಮಾರ್ ಹೇಳಿದರು.
ಅವರು ಕಂಟ್ರಿಕ್ಲಬ್‌ನಲ್ಲಿ ಆಯೋಜಿಸಿದ್ದ 2009 ಮತ್ತು 2010 ನೇ ಸಾಲಿನ ಬಿ.ಎಡ್ ವಿದ್ಯಾರ್ಥಿಗಳ ಗುರುವಂದನಾ ಮತ್ತು ಸ್ನೇಹಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ನೇಹಮಿಲನ ಕಾರ್ಯಕ್ರಮಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದು ಸ್ವಾಗತಾರ್ಹಕೂಡ. ಯಾವುದೋ ತರಗತಿಗಳಲ್ಲಿ ನಾವೆಲ್ಲ ಒಟ್ಟಾಗಿ ಓದಿರುತ್ತೇವೆ. ಕಲಿತು ನಕ್ಕು, ನಲಿದಿರುತ್ತೇವೆ. ನಂತರ ನಮ್ಮ ನಮ್ಮ ಜೀವನದ ದಾರಿಗಳನ್ನು ನಾವು ಹುಡುಕಿಕೊಳ್ಳುತ್ತೇವೆ. ಆದರೆ ನಮ್ಮ ಹಳೇಯ ನೆನಪುಗಳನ್ನು ನೋಡುತ್ತಾ ಹೋದರೆ ವಿದ್ಯಾರ್ಥಿ ಜೀವನ ಬಂಗಾರದ ಜೀವನ ಎಂಬುದು ನಮಗೆ ಅರ್ಥವಾಗುತ್ತದೆ. ಈಗಾಗಲೇ ಬದುಕಿನ ಬಹುಭಾಗವನ್ನು ಕಳೆದಿರುವ ನಮಗೆ ನಮ್ಮ ಬಾಲ್ಯದ ನೆನಪುಗಳು ಮರಳಿ ಬಂದು ನಮ್ಮ ವಯಸ್ಸು ಚಿಕ್ಕದಾಗುತ್ತದೆ. ಇದೊಂದು ಸುಂದರ ಕಾರ್ಯಕ್ರಮ. ಆದರೆ ಜೊತೆಗೆ ಓದಿದ ಸಹಪಾಠಿಗಳನ್ನು ಸೇರಿಸುವುದೇ ಒಂದು ಬಹುದೊಡ್ಡ ಕೆಲಸ ಎಂದರು.
ರುದ್ರಮ್ಮ ಮಾತನಾಡಿ, ಹಳೇಯ ನೆನಪುಗಳು ಹೊಸ ನೆನಪುಗಳನ್ನು ನೀಡಿ ಮನಸ್ಸನ್ನು ಮುದಗೊಳಿಸುತ್ತದೆ. ವಯಸ್ಸು ಜಾಸ್ತಿ ಆಯಿತು, ಮಕ್ಕಳಾದವು, ಕೂದಲು ಬೆಳ್ಳಗಾಯಿತು, ಜವಾಬ್ದಾರಿ ಜಾಸ್ತಿಯಾಯಿತು ಎಂದುಕೊಳ್ಳುತ್ತಿರುವಾಗಲೇ ಕಾಲೇಜಿನಲ್ಲಿ ಹಾಜರಿ ಹಾಕಿದಾಗ ಬಂದಿದ್ದೇನೆ ಗುರುಗಳೇ ಎನ್ನುವ ಸಂಭ್ರಮ ನೆನಪಾಗಿ ಈ ಸ್ನೇಹದ ಹೂ ಎಂದೂ ಬಾಡಲ್ಲ ಎನಿಸುತ್ತದೆ ಎಂದರು.
ನಾವೆಲ್ಲಾ 2009-2010ರ ಬಿ.ಎಡ್.ನಲ್ಲಿ ಓದುತ್ತಿರುವ ಹಳೇಯ ವಿದ್ಯಾರ್ಥಿಗಳು ಆಗ ಮೊಗ್ಗಾಗಿ ಶಾಲೆಗೆ ಬಂದಿದ್ದೆವು ಈಗ ಹೂವಾಗಿ ಅರಳಿದ್ದೇವೆ. ಮತ್ತೆ ಒಂದೆಡೆ ಸೇರಿ ಕಂಪು ಸೂಸಿಸುತ್ತಿದ್ದೇವೆ. ಯಾರೋ ಟೀಚರ್ ಆಗಿದ್ದಾರೆ, ಮತ್ಯಾರೋ ರೈತರಾಗಿದ್ದಾರೆ, ರಾಜಕಾರಣಿಗಳಾಗಿದ್ದಾರೆ, ಅಫೀಸಿನಲ್ಲಿ ಕೆಲಸ ಮಾಡುತ್ತಿದ್ದಾರೆ, ಬದುಕು ನಮ್ಮನ್ನು ಎಲ್ಲೋ ಎಳೆದುಕೊಂಡು ಹೋಗಿದೆ. ಈಗ ನಾವೆಲ್ಲಾ ಒಟ್ಟಾಗಿದ್ದೇವೆ. ಈ ಸೊಗಸೇ ಚೆಂದ ಎಂದರು.
ಕಾರ್ಯಕ್ರಮದಲ್ಲಿ ಅಂದಿನ ಪ್ರಾಧ್ಯಾಪಕರುಗಳಾದ ನಂಜಾನಾಯ್ಕ್, ನಾಗರಾಜ್, ಪ್ರಶಾಂತ್, ಮೋಹನ್ ಸೇರಿದಂತೆ ಹಲವರಿದ್ದರು. ಕಾರ್ಯಕ್ರಮವನ್ನು ಆಗಿನ ವಿದ್ಯಾರ್ಥಿ ನಾಯಕರಾಗಿದ್ದ ಶೇಖರ್ ನಾಯ್ಕ (ಲಂಬು), ನಾಗೇಶ್, ಮಣಿಕಂಠ ಮುಂತಾದವರು ಭಾಗವಹಿಸಿದ್ದರು. ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿ ನಲಿದರು. 16 ವರ್ಷದ ವಿದ್ಯಾರ್ಥಿ ಜೀವನ ನಂತರ ತಮ್ಮ ಬದುಕಿನ ಬದಲಾವಣೆಗಳ ಕುರಿತು ಪರಸ್ಪರ ಹಂಚಿಕೊಂಡರು. ಇದರ ಜೊತೆಗೆ ಅವರ ಕುಟುಂಬ ವರ್ಗದವರೂ ಸೇರಿ ಮತ್ತಷ್ಟು ಖುಷಿಗೊಂಡಿತು. ಇದೊಂದು ಜೀವಕೋಶದ ಅನುಭವವನ್ನು ಪಡೆಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jog Falls ಪ್ರತೀ ಶನಿವಾರ & ಭಾನುವಾರ ರಸ್ತೆ ಸಾರಿಗೆ ನಿಗಮದಿಂದಸಿಗಂದೂರು- ಜೋಗ ಪ್ರವಾಸಿ ಪ್ಯಾಕೇಜ್ ಘೋಷಣೆ.

Jog Falls ಪ್ರಸ್ತುತ ಮಳೆಗಾಲದಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ವಿಶ್ವವಿಖ್ಯಾತ ಜೋಗ್‌ಫಾಲ್ಸ್...

Shivamogga News ಥಣ್ಣಗಾಗುತ್ತಿರುವ ಸಚಿವಾಕಾಂಕ್ಷಿತನ..…ಶಿವಕೌಶಲ

Shivamogga News ರಾಜಕೀಯದಲ್ಲಿ ಸ್ಥಿರತೆ ಯಾವತ್ತಿಗೂ ನಿರೀಕ್ಷಿಸಲಾಗದು ಎಂಬ ಮುತ್ಸದ್ದಿಗಳ ಮಾತಿದೆ....