S.N. Channabasappa ಡಾ.ರಾಜ್‌ಕುಮಾರ್ ಸಿನಿಮಾಗಳು ಜೀವನ ಪಾಠದಂತಿದ್ದು, ಅವರ ಪ್ರತಿ ಪಾತ್ರ ಸಮಾಜವನ್ನು ತಿದ್ದುವ ರೀತಿಯಲ್ಲಿವೆ ಹಾಗೂ ಬದುಕಿಗೆ ಶಕ್ತಿ ತುಂಬುವುದರೊAದಿಗೆ ಜಾಗೃತಿ ಮೂಡಿಸುವಂತಿವೆ ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ಸ್ಮರಿಸಿದರು.
ಜಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಶುಕ್ರವಾರ ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ಪದ್ಮಭೂಷಣ ಮತ್ತು ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ, ಕನ್ನಡದ ವರನಟ ಡಾ.ರಾಜ್ ಕುಮಾರ್‌ರವರ 97 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವತಾ ಮನುಷ್ಯ, ಕಸ್ತೂರಿ ನಿವಾಸ, ಸತ್ಯ ಹರಿಶ್ಚಂದ್ರ, ಸತ್ಯಕ್ಕೆ ಸಾವಿಲ್ಲ, ಹೀಗೆ ಅವರ ಎಲ್ಲ ಸಿನಿಮಾಗಳು ಕೌಟುಂಬಿಕ ಮೌಲ್ಯ, ಸಾಮಾಜಿಕ ಜವಾಬ್ದಾರಿ ಮತ್ತು ದುಶ್ಚಗಳನ್ನು, ಅನಿಷ್ಟ ಪದ್ದತಿಗಳನ್ನು ವಿರೋಧಿಸುವ, ನಿಸ್ವಾರ್ಥ ಸೇವೆ, ತ್ಯಾಗದ ಗುಣಗಳು, ದುಡಿಮೆ ಗೌರವ ತರುವ ತತ್ವಗಳನ್ನು ಹೊಂದಿದ್ದು ಬಂಗಾರದ ಮನುಷ್ಯ ಚಿತ್ರ ನೋಡಿದ ಹಲವಾರು ಯುವಕರು ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆಂದು ಸ್ಮರಿಸಿದರು.
ಅವರ ಸಿನೆಮಾಗಳಲ್ಲಿ ವಿಶೇಷವಾಗಿ ಕನ್ನಡ ಭಾಷಾ ಪ್ರೇಮ, ದೇಶ ಭಕ್ತಿಯನ್ನು ಕಾಣಬಹುದು. ಹಾಗೂ ಮಾನವೀಯ ಗುಣಗಳೊಂದಿಗೆ ಸರಳತೆಯನ್ನು ಕಾಣಬಹುದಾಗಿದೆ.
ರಾಜ್ ಕುಮಾರ್ ಎಂದರೆ ಒಂದು ಸಂಸ್ಕೃತಿ, ಜೀವನ, ಸಾಹಿತ್ಯ ಎಲ್ಲವೂ ಆಗಿದ್ದು ಅವರು ಕಲಾ ಕ್ಷೇತ್ರಕ್ಕೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬAತೆ ಎಲ್ಲಾ ಹಂದರದಲ್ಲೂ ಅವರು ಅಭಿನಯಿಸಿದ್ದಾರೆ . ಸಮಾಜದ ಅಂಕುಡೊAಕನ್ನು ಕಲೆಯ ಮೂಲಕ ತಿದ್ದುವ ಕೆಲಸ ಮಾಡಿದ್ದಾರೆ.
ಡಾ.ರಾಜ್ ಕುಮಾರ್ ಕಲಾಭಿಮಾನಿಗಳ ಆರಾಧ್ಯದೈವ. ಅವರ ಸಿನಿಮಾ ಹಾಡುಗಳೆಂದರೆ ಜೀವನ ಸಂದೇಶ ಸಾರುವ ಅರ್ಥ ಗರ್ಭಿತ ಗಾಥೆಗಳು. ಅವರನ್ನು ಅಪಹರಿಸಿದ್ದ ಕಾಡುಗಳ್ಳ ವೀರಪ್ಪನ್ ಮನಸ್ಸನ್ನು ಸಹ ಗೆದ್ದ ವ್ಯಕ್ತಿಯಾರಾದರೂ ಇದ್ದರೆ ಅದು ರಾಜ್ ಕುಮಾರ್ ಎಂದರು.
ಮನುಕುಲಕ್ಕೆ ಅಗತ್ಯವಾದ ಸತ್ಯ, ಪ್ರಾಮಾಣಿಕತೆ, ದಯೆ, ಪ್ರೀತಿ, ದೇಶಭಕ್ತಿ ಹೀಗೆ ಎಲ್ಲಾ ಸಂಗತಿಗಳು ಅವರ ಸಿನಿಮಾಗಳಲ್ಲಿ ಇದೆ. ಗೋಕಾಕ್ ವರದಿ ಚಳುವಳಿ ವೇಳೆ ಡಾ. ರಾಜ್ ಕುಮಾರ್ ಶಿವಮೊಗ್ಗಕ್ಕೆ ಬಂದಿದ್ದರು. ಕನ್ನಡ ನೆಲ, ಜಲ ಭಾಷೆಗೆ ಅಪಮಾನ ಆಗಬಾರದು, ಅದನ್ನು ಸಹಿಸುವುದಿಲ್ಲ ಎನ್ನುತ್ತಿದ್ದರು. ಅಣ್ಣಾವ್ರು ಶಿವಮೊಗ್ಗಕ್ಕೆ ಬಂದಾಗ ಅವರ ಮೆರವಣಿಗೆ ಮಾಡಲಾಗಿತ್ತು, ಆಗ ಇಡೀ ಭದ್ರಾವತಿ ಜನ ಪ್ರವಾಸಿ ಮಂದಿರಕ್ಕೆ ರಾಜ್ ಕುಮಾರ್ ರವರ ದರ್ಶನ ಮಾಡಲು ಬಂದಿದ್ದರು ಎಂದು ಸ್ಮರಿಸಿದರು.
ಡಾ. ರಾಜ್ ಕುಮಾರ್ ಅವರನ್ನು ವಿರೋಧ ಮಾಡಿದವರು ಯಾರೂ ಇಲ್ಲ. ಅವರೊಬ್ಬ ಅಜಾತಶತೃ. ಅವರು ಕರ್ನಾಟಕಕ್ಕೆ ದೊಡ್ಡ ಆಸ್ತಿ. ಅವರು ಹಾಕಿಕೊಟ್ಟಿರುವ ಆದರ್ಶದ ಮಾರ್ಗದಲ್ಲಿ ಜೀವನವನ್ನು ನಡೆಸೋಣ. ಮುಂದಿನ ದಿನಗಳಲ್ಲಿ ಇನ್ನಷ್ಟು ಅದ್ದೂರಿಯಾಗಿ ಜನ್ಮ ದಿನವನ್ನು ಆಚರಣೆ ಮಾಡೊಣ ಎಂದರು.
ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕಳವಕಟ್ಟಿ ಮಾತನಾಡಿ, ಡಾ.ರಾಜ್ ಕುಮಾರ್ ರವರದ್ದು ಮೇರು ವ್ಯಕ್ತಿತ್ವ. ಅವರು ಲಕ್ಷಾಂತರ ಜನರಿಗೆ ಆದರ್ಶಪ್ರಾಯರಾಗಿದ್ದು, ಅವರ ಸಿನಿಮಾಗಳು ಮನರಂಜನೆ ಮಾತ್ರವಲ್ಲದೇ ಸಮಾಜಕ್ಕೆ ಹಲವಾರು ಉತ್ತಮ ಸಂದೇಶಗಳನ್ನು ನೀಡಿವೆ.
S.N. Channabasappa 2006 ರ ಏ 12 ರಂದು ರಾಜ ಕುಮಾರ್‌ರವರು ಅಗಲಿದ ದಿನವಾಗಿದ್ದು ಅದಾದ ನಾಲ್ಕು ದಿನ ನಂತರ ನನಗೆ ಐಎಎಸ್ ಸಂದರ್ಶನ ಇತ್ತು. ಸಂದರ್ಶಕರು ನನಗೆ, ಒಬ್ಬ ನಟ ನಿಧನ ಆಗಿದ್ದಕ್ಕೆ ನಿಮ್ಮ ರಾಜ್ಯದಲ್ಲಿ ಅಷ್ಟು ಗಲಾಟೆ ಮಾಡಿದ್ದಾರೆ ಇದಕ್ಕೆ ಕಾರಣವೇನೆಂದು ಕೇಳಿದರು. ಆಗ ನಾನು ಡಾ. ರಾಜ ಕುಮಾರ್ ಅವರ ಕುರಿತು ಹೇಳಿದಾಗ ಅವರು ಡಾ. ರಾಜ್ ಕುಮಾರ್ ಅವರ ಬಗ್ಗೆ ತಿಳಿದುಕೊಳ್ಳಲು ಪುಸ್ತಕಗಳಿದ್ದರೆ ತಿಳಿಸಿ ತಾವು ಓದುವುದಾಗಿ ತಿಳಿಸಿದರು. ಈ ಘಟನೆ ನನ್ನ ಜೀವನದಲ್ಲಿ ಚಿರಸ್ಮರಣೆಯಾಗಿ ಉಳಿದಿರುತ್ತದೆ ಎಂದು ತಿಳಿಸಿದ ಅವರು ಐಎಎಸ್ ಅಧಿಕಾರಿಯಾದ ರಾಮಚಂದ್ರರವರು ದಿನಕ್ಕೆ ಎರಡು ಚಲನಚಿತ್ರಗಳನ್ನು ನೋಡುವ ಮೂಲಕ ಕನ್ನಡ ಕಲಿತಿದ್ದೇನೆ ಎಂದು ತಿಳಿಸಿದ ಪ್ರಸಂಗವನ್ನು ಹಂಚಿಕೊAಡರು.
ಜಿ.ಪಂ ಉಪ ಕಾರ್ಯದರ್ಶಿ ಸುಜಾತ ಮಾತನಾಡಿ, ಹಿಂದೆ ಸಿನೆಮಾ ಒಂದು ಅತ್ಯುತ್ತಮ ಮಾಧ್ಯಮವಾಗಿತ್ತು. ಡಾ.ರಾಜ್ ಕುಮಾರ್ ರವರ ಸಿನೆಮಾಗಳು ಕೇವಲ ಮನರಂಜನೆಗೆ ಸೀಮಿತವಾಗದೇ ಸಮಾಜಕ್ಕೆ ಪೂರಕವಾದ ಮೌಲ್ಯಗಳನ್ನು ಸಾರುವಲ್ಲಿ ಯಶಸ್ವಿಯಾಗಿವೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ರಾಜ್ಯಾಧ್ಯಕ್ಷ ಡಾ.ಹೆಚ್ ಸುರೇಶ್ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆಯು ಡಾ.ರಾಜ್ ಕುಮಾರ್‌ರವರ ಜನ್ಮ ದಿನಾಚರಣೆಯನ್ನು ಸರ್ಕಾರದ ವತಿಯಿಂದ ನಡೆಸಿಕೊಡಲು ಹೋರಾಟ ನಡೆಸಿತ್ತು, ಅದಕ್ಕೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಣ್ಣಾವ್ರ ಜನ್ಮದಿನಾಚರಣೆಯನ್ನು ಘೋಷಿಸಿರುವುದು ಸಂತಸದ ವಿಷಯವಾಗಿದ್ದು ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ. ಮುಂಬರುವ ದಿನಗಳಲ್ಲಿ ಎಲ್ಲರೂ ಕೈಜೋಡಿಸಿ ಅದ್ದೂರಿಯಾಗಿ ಡಾ.ರಾಜ್ ಕುಮಾರ್ ಜನ್ಮ ದಿನಾಚರಣೆಯನ್ನು ಆಚರಿಸೋಣವೆಂದ ಅವರು ಕನ್ನಡ ನಾಡು ನುಡಿಗೆ ಸಿನೆಮಾ ಮಾಧ್ಯಮದ ಮೂಲಕ ಚಿರಸ್ಮರಣೀಯ ಕೊಡುಗೆ ನೀಡಿದ ರಾಜ್ ಕುಮಾರ್‌ರವರ ಪುತ್ಥಳಿಯನ್ನು ನಗರದಲ್ಲಿ ಸ್ಥಾಪಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕರಾದ ಭಾಗ್ಯ ಎಂ.ಟಿ, ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ಜಿಲ್ಲಾಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಕೆ ಬಿ, ರಾಜ್‌ಕುಮಾರ್ ಗೀತೆಗಳನ್ನು ಗಾಯನ ಮಾಡಿದ ಸಾಹಿತಿಗಳಾದ ಡಾ.ಶಶಿಕಾಂತ್ ಜೈನ್ ಮತ್ತು ಎಂಸಿಎ ವ್ಯವಸ್ಥಾಪಕ ಸಿದ್ದೇಶ್, ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಜರಿದ್ದರು.
S.N. Channabasappa ಡಾ.ರಾಜ್ ಅವರ ಸಿನಿಮಾ, ಪಾತ್ರಗಳು ಸಮಾಜ ತಿದ್ದುವ ರೀತಿಯಲ್ಲಿವೆ- ಎಸ್.ಎನ್.ಚನ್ನಬಸಪ್ಪ.
Date:
