Wednesday, April 22, 2026
Wednesday, April 22, 2026

Ministry of Culture Government of India ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಭಾಶೋಧ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಶಿವಮೊಗ್ಗದ ಸಾನ್ವಿ ಸಾಲಿಯಾನ್

Date:

Ministry of Culture Government of India ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದಡಿ ಬರುವ ಸಾಂಸ್ಕೃತಿಕ ಸಂಪನ್ಮೂಲಗಳು ಮತ್ತು ತರಬೇತಿ ಕೇಂದ್ರ (ಸಿಸಿಆರ್ ಟಿ) ನೀಡುವ 2025-26ನೇ ಸಾಲಿನ ರಾಷ್ಟ್ರಮಟ್ಟದ ಸಾಂಸ್ಕೃತಿಕ ಪ್ರತಿಭಾ ಶೋಧ ವಿದ್ಯಾರ್ಥಿವೇತನ(ಸಿಟಿಎಸ್ಎಸ್)ಕ್ಕೆ ಶಿವಮೊಗ್ಗದ ಗೀತ ನೃತ್ಯ ಕಲಾ ಕುಟೀರದ ವಿದ್ಯಾರ್ಥಿನಿ ಸಾನ್ವಿ ಸಾಲಿಯಾನ್ ಆಯ್ಕೆಯಾಗಿದ್ದಾಳೆ.
ಸಿಸಿಆರ್ ಟಿಯು ಪ್ರತೀ ವರ್ಷ ಅಳಿವಿನಂಚಿನಲ್ಲಿರುವ ವಿರಳವಾದ ಸಾಂಪ್ರದಾಯಿಕ ಕಲೆಗಳಿಗೆ ಒತ್ತು ನೀಡಿ ಸಾಂಸ್ಕೃತಿಕ ಕ್ಷೇತ್ರಗಳಾದ ಸಂಗೀತ, ನೃತ್ಯ, ನಾಟಕ, ಚಿತ್ರಕಲೆ, ಶಿಲ್ಪಕಲೆ, ಸಾಹಿತ್ಯ ಕಲೆಗಳಲ್ಲಿ 10ರಿಂದ 14 ವರ್ಷದೊಳಗಿನ ಮಕ್ಕಳಿಗೆ ವಿಶೇಷ ತರಬೇತಿ ನೀಡುವ ಉದ್ದೇಶದಿಂದ ವಿದ್ಯಾರ್ಥಿ ವೇತನ ನೀಡುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಗರಿಷ್ಟ 650 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಈ ವರ್ಷ ಆಯ್ಕೆಯಾದ 634 ವಿದ್ಯಾರ್ಥಿಗಳಲ್ಲಿ ಸಾನ್ವಿ ಸಾಲಿಯಾನ್ ಒಬ್ಬಳಾಗಿದ್ದು, ಭರತನಾಟ್ಯದಲ್ಲಿ ವಿಶೇಷ ತರಬೇತಿಗೆ ಈ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಗೀತ ನೃತ್ಯ ಕಲಾ ಕುಟೀರದ ನೃತ್ಯಗುರು ವಿದುಷಿ ಶ್ರೀಮತಿ ಕವನ ಭಾರ್ಗವ್ ಶಿಷ್ಯೆಯಾಗಿರುವ ಈಕೆ ಕಳೆದ ವರ್ಷ ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಶೇ. 86.75 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ್ದಳು.
ಶಿವಮೊಗ್ಗದ ಪೊದಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ಈಕೆ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ, ಸತೀಶ್ ಕುಮಾರ್ ಅಂಡಿಂಜೆ ಮತ್ತು ಶ್ರೀಮತಿ ವಿನಯಾ ದಂಪತಿಯ ಪುತ್ರಿ.
Ministry of Culture Government of India ವಿವಿಧ ಕಡೆ ಭರತನಾಟ್ಯ ಪ್ರದರ್ಶನ ನೀಡಿರುವ ಈಕೆ ಭರತನಾಟ್ಯ, ಭಾಷಣ, ಚಿತ್ರಕಲೆ ಮತ್ತು ಕಥೆ ಹೇಳುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾಳೆ. ಯಕ್ಷಗಾನ ಕಲಾವಿದೆಯೂ ಆಗಿರುವ ಈಕೆ ಯಕ್ಷಗುರು ಐನಬೈಲು ಪರಮೇಶ್ವರ ಹೆಗಡೆಯವರಿಂದ ಯಕ್ಷಗಾನ ತರಬೇತಿ ಪಡೆದು ಅನೇಕ ಕಡೆ ಪ್ರದರ್ಶನ ನೀಡಿದ್ದಾಳೆ. ಈಕೆಯ ಸಾಧನೆಗೆ ನೃತ್ಯಗುರುಗಳು, ಶಿಕ್ಷಕರು ಮತ್ತು ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Chennasappa ಪೆಹಲ್ಗಾಮ್ ದುರಂತ. ಹುತಾತ್ಮ ಮಂಜುನಾಥ್ ಅವರನ್ನ ಸ್ಮರಿಸಿ, ಪ್ರಣಾಮ ಸಲ್ಲಿಸಿದ ಶಾಸಕ‌ ಚೆನ್ನಿ

S.N. Chennasappa ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ...

Dr. Ambedkar ನಿರಾಶ್ರಿತರ ಕೇಂದ್ರದಲ್ಲಿ ಸೌರಮಾನ ಯುಗಾದಿ ಮತ್ತು ಡಾ.ಅಂಬೇಡ್ಕರ್ ದಿನಾಚರಣೆ

Dr. Ambedkar ಸೌರಮಾನ ಯುಗಾದಿ ಹಾಗೂ ಅಂಬೇಡ್ಕರ್ ಜಯಂತಿ ಪ್ರಯುಕ್ತ, ನಿರಾಶ್ರಿತರ...

CM Siddharamaiah ಮಾನವನಿಂದ ಪ್ರಕೃತಿಯ ಮೇಲಿನ ದಬ್ಬಾಳಿಕೆ ನಿಲ್ಲಬೇಕು- ಮುಖ್ಯಮಂತ್ರಿ ಸಿದ್ಧರಾಮಯ್ಯ

CM Siddharamaiah ಸಕಲ ಜೀವರಾಶಿಗಳಿಗೂ ವಾಸಿಸಲು ಯೋಗ್ಯವಿರುವ ಏಕೈಕ ಗ್ರಹ ಭೂಮಿ....