Tuesday, April 21, 2026
Tuesday, April 21, 2026

B.Y. Raghavendra ಕ್ರಾಂತಿಕಾರಿ ಬಸವಣ್ಣನವರ ದಾರಿಯಲ್ಲಿ ಸಾಗುವ ಸಂಕಲ್ಪ ಮಾಡೋಣ- ಬಿ.ವೈ.ರಾಘವೇಂದ್ರ

Date:

B.Y. Raghavendra ಕಾಯಕ- ದಾಸೋಹ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಸಾರಿದ ಬಸವಣ್ಣನವರ
ಒಂದಾದರೂ ವಚನವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಲಭಿಸುತ್ತದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಹೇಳಿದರು.
ಜಿಲ್ಲಾಡಳಿತ, ಜಿ.ಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಕುವೆಂಪು ರಂಗ ಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವಮಾನವ, ಮಹಾನ್ ಮಾನವತಾವಾದಿ, ಸಾಂಸ್ಕೃತಿಕ ನಾಯಕ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು‌ ಮಾತನಾಡಿದರು.
ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳನ್ನು ಸಾರಿ, ಸಮಾಜದ ದಿಕ್ಕನ್ನು ಬದಲಾಸಯಿಸಿದ ಕ್ರಾಂತಿಕಾರಿ ಯುಗಪುರುಷನ ಜಯಂತಿಯಂದು ನಾವು ಅವರ ದಾರಿಯಲ್ಲಿ‌ ಸಾಗುವ ಸಂಕಲ್ಪ‌ ಮಾಡಬೇಕು.
ಸಾರ್ವತ್ರಿಕವಾಗಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ ವಿಶ್ವದ ಮೊದಲ ಸಂಸತ್ತು ಎಂದರೆ ಅದು ಬಸವಣ್ಣನವರು ಸ್ಥಾಪಿಸಿದ ‘ಅನುಭವ ಮಂಟಪ’. ಅವರು
ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿಕೊಟ್ಟಿದ್ದಾರೆ.
ಜಾಗತಿಕ ಸಮಸ್ಯೆಗಳಿಗೆ ಬಸವಣ್ಣವರ ವಚನಗಳು ಲಸಿಕೆ ಇದ್ದಂತೆ.
ಯುವಜನತೆ ಪ್ರಸ್ತುತದಲ್ಲಿ‌ಮೊಬೈಲ್ ಗೀಳಿಗೆ ತುತ್ತಾಗುತ್ತಿದ್ದು,
ಮಾನಸಿಕ ಖಿನ್ನತೆ ಅವರಲ್ಲಿ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ನಮ್ಮ ಮಕ್ಕಳಿಗೆ ವಚನಗಳನ್ನು ತಿಳಿಸುವ ಪ್ರಯತ್ನ ಮಾಡಿದಲ್ಲಿ ವೈದ್ಯರ ಅವಶ್ಯಕತೆ ಅಷ್ಟಾಗಿ ಇರುವುದಿಲ್ಲ ಎಂದರು.
B.Y. Raghavendra ಭದ್ರಾವತಿಯ ಆಧ್ಯಾತ್ಮಿಕ ಚಿಂತಕರು ಹಾಗೂ ಮನೋಚಿಕಿತ್ಸಕರಾದ ಡಾ. ಸಂತೋಷ್ ಕುಮಾರ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮನುಕುಲದ ಉದ್ದಾರಕ್ಕಾಗಿ ಜನಿಸಿದವರ ದಿನವನ್ನು ಜಯಂತಿ ಎನ್ನಲಾಗುತ್ತದೆ. ಅಜ್ಞಾನದ ಮೇಲೆ ಜ್ಞಾನದ ವಿಜಯ, ಸ್ವಾರ್ಥದ ಮೇಲೆ ಪರೋಪಕಾರದ ಜಯ, ಕತ್ತಲ ಮೇಲೆ ಬೆಳಕಿನ ಜಯ ಗಳಿಸಿರುವವರ, ದ್ವೈತ ಗೆದ್ದು ಅದ್ವೈತ ಸಾಧಿಸಿದವರ ಜಯಂತಿಯನ್ನು ಆಚರಿಸುತ್ತೇವೆ.
ಆತ್ಮಾವಲೋಕನ‌ ಮಾಡಿಕೊಳ್ಳುವ ದಿನ ಇದಾಗಿದ್ದು ಬಸವೇಶ್ವರರ ಒಂದಾದರೂ ವಚನವನ್ನು ಅಳವಡಿಸಿಕೊಂಡಲ್ಲಿ‌ ಈ ದಿನ ಸಾರ್ಥಕವಾಗುತ್ತದೆ ಎಂದ ಅವರು ಎಲ್ಲರಲ್ಲಿಯೂ ಆತ್ಮ ಸಾಕ್ಷಾತ್ಕಾರ ಜಾಗೃತಗೊಳಿಸಿ ಸಮಾಜ ತಿದ್ದುವ ಕೆಲಸವನ್ನು ಮಹನೀಯರು ಮಾಡುತ್ತಾ ಬಂದಿದ್ದಾರೆ ಎಂದರು.
ಬಸವಣ್ಣನವರು ಜಗತ್ತಿಗೆ ನೀಡಿದ ಅತ್ಯಂತ ದೊಡ್ಡ ಕೊಡುಗೆ ‘ಕಾಯಕವೇ ಕೈಲಾಸ’. ದೇಹ, ಮನಸ್ಸು, ಆತ್ಮದ ತಲ್ಲೀನತೆಯಿಂದ ಮಾಡುವ ಕೆಲಸ ಕಾಯಕ. ಕೆಲಸ ಯಾವುದಾದರೂ ಇರಲಿ, ಅದನ್ನು ಪ್ರಾಮಾಣಿಕವಾಗಿ ಮಾಡುವುದೇ ದೇವರ ಸೇವೆ ಎಂಬುದು ಅವರ ತತ್ವವಾಗಿತ್ತು. ಮಾನವೀಯತೆ, ಧಾರ್ಮಿಕ ತಳಹದಿ ಹೊಂದಿರುವ ಹಾಗೂ ಆತ್ಮ ಸಾಕ್ಷಾತ್ಕರದೆಡೆಗೆ ಕೊಂಡೊಯ್ಯುವುದೇ ನಿಜ ಕಾಯಕ. ಕೆಲಸ ಯಾವುದೇ ಇರಲಿ, ಅದನ್ನು ಶ್ರದ್ದೆ, ಪ್ರಾಮಾಣಿಕಯಿಂದ ಮಾಡುತ್ತಾ ಅತ್ಯುನ್ನತ ತಲ್ಲೀನತೆಯ ಸ್ಥಿತಿಗೆ ತಲುಪುವುದೇ ಕೈಲಾಸ ಎಂದ ಅವರು ಕೇವಲ ದುಡಿಯುವುದಷ್ಟೇ ಅಲ್ಲ, ಗಳಿಸಿದ್ದರಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಹಿತಕ್ಕಾಗಿ ನೀಡಬೇಕು ಎಂಬ ‘ದಾಸೋಹ’ ಭಾವನೆಯನ್ನು ಅವರು ಬಿತ್ತಿದರು.
ಅಹಂಕಾರವಿಲ್ಲದೇ, ಪ್ರತಿಫಲದ ಅಪೇಕ್ಷೆ ಇಲ್ಲದೇ ತಾನು ಸೇವಕ ಎಂಬ ಮನೋಭಾವದಿಂದ ನೀಡುವುದೇ ದಾಸೋಹ ಎಂದಿದ್ದಾರೆ ಬಸವಣ್ಣ ಹಾಗೂ ಎಲ್ಲರಲ್ಲಿಯೂ ಶಿವನಿದ್ದಾನೆಂಬ ತತ್ವ ಸಾರಿದ್ದಾರೆ ಎಂದು ತಿಳಿಸಿದ ಅವರು ನಾವು ನಮ್ಮ ಜೀವನದಲ್ಲಿ
ಕಾಯಕ ಮತ್ತು ದಾಸೋಹ ತತ್ವಗಳನ್ನು ಅಳವಡಿಕೊಳ್ಳೋಣವೆಂದು ಕರೆ ನೀಡಿದರು.
ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳು ಹಾಗೂ ಬಸವ ಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅಧ್ಯಕ್ಷ ತೆ ವಹಿಸಿದ್ದರು.
ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್, ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಚೇತನ್ ಕೆ, ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್,
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ,
ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಎಸ್ ಎಸ್ ಜ್ಯೋತಿಪ್ರಕಾಶ್, ಗೌರವ ಕಾರ್ಯದರ್ಶಿಗಳಾದ ಎಸ್ ಪಿ ದಿನೇಶ್,
ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಸಮಾಜದ ಮುಖಂಡರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bharat Scouts and Guides ಕೃಷಿ ಕ್ಷೇತ್ರ ಮಾಹಿತಿಯಿಂದ ವಿದ್ಯಾರ್ಥಿಗಳು ಪರಿಪೂರ್ಣರಾಗಲು ಸಾಧ್ಯ- ಕೆ.ರವಿ

Bharat Scouts and Guides ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಯ ಬಗ್ಗೆ...

Klive special Article “ಶಂಕರಂ ಲೋಕ ಶಂಕರಂ” ಎನ್.ಜಯಭೀಮ್ ಜೊಯ್ಸ್, ಶಿವಮೊಗ್ಗ

Klive special Article ಶ್ರೀಶಂಕರಾಚಾರ್ಯ ಗುರುಗಳು (ಶ್ರೀಶಂಕರಜಯಂತಿಯ ಸಂದರ್ಭದಲ್ಲಿ)ಪ್ರತಿವರ್ಷ ವೈಶಾಖಮಾಸದ...

RM Manjunath Gowda ಹುಲಿಕಲ್ ಘಾಟಿ ಪ್ರಕರಣ.ಇಂಜಿನಿಯರುಗಳೇ ಹೊಣೆ. ಎಫ್ ಐ ಆರ್ ದಾಖಲಿಸಲು ಎಸ್ ಪಿ.ಅವರಿಗೆ ಮನವಿ ಮಾಡುವೆ- ಆರ್.ಎಂ.ಮಂಜುನಾಥ ಗೌಡ.

RM Manjunath Gowda ಹುಲಿಕಲ್ ಘಾಟಿ ಪ್ರಕರಣದಲ್ಲಿ ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಮಕೆನಾಡು...

Graduation Day ಮ್ಯಾನೇಜ್ಮೆಂಟ್ ಪದವೀಧರರು ಶೈಕ್ಷಣಿಕ ಮತ್ತು ಔದ್ಯಮಿಕ ರಂಗದ ನಡುವಿನ ಸೇತುವೆ- ವಿನಯ್ ಪಾಟೀಲ್.

Graduation Day "ಜ್ಞಾನವು ಕೌಶಲ್ಯವಾಗದಿದ್ದಲ್ಲಿ ನಿರರ್ಥಕ" -ಬಾಪೂಜಿ ಎಂಬಿಎ ಪದವಿ ಪ್ರದಾನದಲ್ಲಿ ವಿನಯ್...