Thursday, September 17, 2026
Thursday, September 17, 2026

“ಶಿಖಂಡಿ” ಚಿತ್ರಕ್ಕಾಗಿ ಶಿವಮೊಗ್ಗ ಆರ್.ಸುಮೀತ್ ಕಂಠದಲ್ಲಿ ಮೂಡಿದ ಹಾಡು ಎ2 ಮ್ಯೂಸಿಕ್ ಚಾನಲ್ ನಲ್ಲಿ ಕೇಳಿ

Date:

ಯುವ ಪ್ರತಿಭಾವಂತ ಗಾಯಕ ಶಿವಮೊಗ್ಗದ ಆರ್.ಸುಮಿತ್ ಧ್ವನಿಯಲ್ಲಿ ಶಿಖಂಡಿ ಚಿತ್ರದ ಮೊದಲ ಹಾಡು ಎ2 ಮ್ಯೂಸಿಕ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಶಿವಮೊಗ್ಗದ ಯುವ ಪ್ರತಿಭಾವಂತ ಗಾಯಕ ಆರ್.ಸುಮಿತ್ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಬಹು ನಿರೀಕ್ಷಿತ ಶಿಖಂಡಿ ಚಿತ್ರದ ಮೊದಲ ಹಾಡು ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸಂಗೀತಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಶಿವಮೊಗ್ಗದ ಯುವಕ ಆರ್.ಸುಮಿತ್ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಚಿತ್ರದ ನಿರ್ಮಾಪಕರಾಗಿ ಪೋಲ ಪ್ರವೀಣ್ ಕುಮಾರ್, ನಿರ್ದೇಶಕರಾಗಿ ವಿ.ಗುರುಮೂರ್ತಿ, ಸಹ ನಿರ್ದೇಶಕರಾಗಿ ಜಿ.ಎಂ.ದಯಾಶಂಕರ್ ಕಾರ್ಯನಿರ್ವಹಿಸಿದ್ದಾರೆ. ಕೆಜಿಎಫ್ ಸಾಹಿತಿ ಕಿನ್ನಲ್ ರಾಜ್ ಹಾಡಿನ ಸಾಹಿತ್ಯ ರಚಿಸಿದ್ದಾರೆ.
ಶಿವಮೊಗ್ಗದ ಪ್ರತಿಭೆ ಆರ್.ಸುಮಿತ್ ಜಿಲ್ಲೆಯ ಗಾಯಕ ಮೆಲೋಡಿ ರಮೇಶ್ ಅವರ ಪುತ್ರರಾಗಿದ್ದು, ಈ ಹಾಡಿನ ಮೂಲಕ ಸಿನಿ ಸಂಗೀತ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಜನರಿಗೆ ಹೆಮ್ಮೆಯ ವಿಷಯವಾಗಿದೆ. ಹಾಡಿನಲ್ಲಿ ಗಾಯಕ ಆರ್.ಸುಮಿತ್ ಅವರೊಂದಿಗೆ ಮಾದೇವ ಹಾಡಿನ ಖ್ಯಾತಿಯ ಹಿನ್ನಲೆ ಗಾಯಕಿ ಸ್ನೇಹಾ ರಾಘವನ್ ಸಹ ತಮ್ಮ ಮಧುರ ಧ್ವನಿ ನೀಡಿದ್ದಾರೆ. ಇಬ್ಬರ ಗಾಯನ ಹಾಡಿನ ಮೆಲೋಡಿಯನ್ನು ಮತ್ತಷ್ಟು ಮನಮುಟ್ಟುವಂತೆ ಮಾಡಿದೆ.
ಮುಖ್ಯ ಪಾತ್ರಗಳಲ್ಲಿ ಯುವರಾಜ್ ಮತ್ತು ಖ್ಯಾತಿ ಅಭಿನಯಿಸಿದ್ದು, ತೆಲುಗು ಬಿಗ್ ಬಾಸ್ ವಿಜೇತ ನಿಖಿಲ್ ಮಲಿಯಕ್ಕಲ್, ಮಜಾಭಾರತ ಖ್ಯಾತಿ ರಾಘವೇಂದ್ರ, ಕಾಮಿಡಿ ಕಿಲಾಡಿಗಳು ಖ್ಯಾತಿ ನಯನಾ, ಬಿಗ್ ಬಾಸ್ ಕನ್ನಡ ಸ್ಪರ್ಧಿ ನೀತು ವನಜಾಕ್ಷಿ, ದೀಪಕ್ ಶೆಟ್ಟಿ ಅಭಿನಯಿಸಿದ್ದಾರೆ. ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ಮೊದಲ ಹಾಡು ಶಿವಮೊಗ್ಗದ ಆರ್.ಸುಮಿತ್ ಅವರ ಧ್ವನಿಯಲ್ಲಿ ಸಂಗೀತಾಭಿಮಾನಿಗಳ ಮನಗೆಲ್ಲುತ್ತಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...