ಹೇಗಾದರೂ ಮಾಡಿ ಅಧಿಕಾರಕ್ಕೆ ಏರಬೇಕೆಂದು ಚುನಾವಣೆಗೂ ಮೊದಲು ಉಚಿತ ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್ ಪಕ್ಷ, ಅಧಿಕಾರಕ್ಕೆ ಬಂದ ತತಕ್ಷಣವೇ ತಮ್ಮ ಅವಾಸ್ತವಿಕ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಟಾನದ ಹೆಸರಿನಲ್ಲಿ ಕನ್ನಡಿಗರ ಮೇಲೆ ದಿನನಿತ್ಯ ತೆರಿಗೆ ಬರೆಯನ್ನು ಎಳೆಯಲಾರಂಭಿಸಿತು ಎಂದು ಆರ್.ಅಶೋಕ್ ನವರು ತಿಳಿಸಿದ್ದಾರೆ.
ಒಂದು ಕಡೆ ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳು ಸೊರಗಿ ಹೋಗಿದ್ದರೆ, ಮತ್ತೊಂದು ಕಡೆ ಗೃಹಜ್ಯೋತಿಯಿಂದ ವಿದ್ಯುತ್ ಕಂಪನಿಗಳು ₹43,000 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿ ಅಧ:ಪತನದ ಹಾದಿ ಹಿಡಿದಿವೆ. ಎಸ್ಕಾಂಗಳಿಗೆ ಬರಬೇಕಾದ ಗೃಹಜ್ಯೋತಿ ಯೋಜನೆಯ ₹12,500 ಕೋಟಿ ಬಾಕಿ ಉಳಿಸಿಕೊಂಡಿರುವುದೇ ರಾಜ್ಯ ಸರ್ಕಾರದ ದಿವಾಳಿತನಕ್ಕೆ ಸಾಕ್ಷಿಯಾಗಿದೆ.
ಅವಾಸ್ತವಿಕ ಗ್ಯಾರಂಟಿಗಳು ಸಾಲದ ಹೊರೆಯನ್ನು ಹೆಚ್ಚಿಸುತ್ತಿವೆ. ಆರ್ಥಿಕ ದಿವಾಳಿತನದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಆಡಳಿತ ಪಕ್ಷದ ಶಾಸಕರೇ ಅನುದಾನಕ್ಕಾಗಿ ಬೀದಿ ರಂಪಾಟ ಮಾಡುತ್ತಿದ್ದಾರೆ.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ರಾಜ್ಯದ ಅರ್ಥವ್ಯವಸ್ಥೆ ಸಂಪೂರ್ಣವಾಗಿ ನೆಲಕಚ್ಚುವ ಮುನ್ನ ಸರಿದೂಗಿಸಿ ಇಲ್ಲವೇ ಅಧಿಕಾರ ತ್ಯಜಿಸಿ, ಸರ್ಕಾರ ವಿಸರ್ಜಿಸಿ ಎಂದಿದ್ದಾರೆ.
