Saturday, October 10, 2026
Saturday, October 10, 2026

Madhu Bangarappa ಸೊರಬದಲ್ಲಿ ಪೊಲೀಸ್ ಇಲಾಖೆಗೆ ನೀಡಿದ ವಾಹನಗಳನ್ನವಿತರಿಸಿದ ಸಚಿವ ಮಧು ಬಂಗಾರಪ್ಪ.

Date:

Madhu Bangarappa  ಮಧು ಬಂಗಾರಪ್ಪನವರ ಮತಕ್ಷೇತ್ರ ಸೊರಬ ಜನತೆಯ ಸುರಕ್ಷತೆ ಹಾಗೂ ಸಾರ್ವಜನಿಕ ಸೇವೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಾಗೂ ವಿವಿಧ ಇಲಾಖೆಗಳ ಅನುದಾನದಡಿ ಮಂಜೂರಾದ ನಾಲ್ಕು ಹೊಸ ವಾಹನಗಳನ್ನು ಇಂದು ಸೊರಬ ಪೊಲೀಸ್ ಠಾಣೆಯ ಆವರಣದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರು ನೂತನ ವಾಹನವನ್ನು ಚಲಾಯಿಸಿದರು.

ಅವರೊಂದಿಗೆ ಪ್ರಯಾಣಿಸುವ ಮೂಲಕ ವಾಹನವನ್ನು ಅಧಿಕೃತವಾಗಿ ಚಾಲನೆ ಮಾಡಲಾಯಿತು.

Madhu Bangarappa ಪೊಲೀಸ್ ಇಲಾಖೆಗೆ ಹೊಸ ವಾಹನಗಳ ಸೇರ್ಪಡೆಯಿಂದಾಗಿ ಅಪರಾಧ ತಡೆ ಮತ್ತು ತುರ್ತು ಸಂದರ್ಭಗಳಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಲು ಅನುಕೂಲವಾಗಲೆಂದು ಸೊರಬ ಪೊಲೀಸ್ ಠಾಣೆಗೆ ಎರಡು ವಾಹನಗಳು, ಆನವಟ್ಟಿ ಭಾಗದ ಜನರ ಸುರಕ್ಷತೆಗಾಗಿ ಒಂದು ವಾಹನ ಹಾಗೂ ಪಶುಪಾಲನಾ ಇಲಾಖೆಗೆ ಒಂದು ವಾಹನ ಸೇರಿದಂತೆ ಒಟ್ಟು ನಾಲ್ಕು ವಾಹನಗಳನ್ನು ನೀಡಲಾಗಿದೆ. ಈ ವಾಹನಗಳು ಇಂದಿನಿಂದಲೇ ಕಾರ್ಯಾರಂಭ ಮಾಡಲಿವೆ.

ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...