Sunday, March 29, 2026
Sunday, March 29, 2026

Shivamogga News ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಮೋಹನ್ ಕುಮಾರ್ಅವಿರೋಧ ಆಯ್ಕೆ.

Date:

ಸತತ ಮೂರನೇ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಶ್ರೀ ಆರ್.ಮೋಹನ್ ಕುಮಾರ್ ಅವಿರೋಧ ಆಯ್ಕೆ

Shivamogga News ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘ ನಿ. ಶಿವಮೊಗ್ಗ ಈ ಸಹಕಾರಿ ಸಂಘದ 2026-2031ರವರೆಗಿನ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿಯ ಸಾಮಾನ್ಯ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಶ್ರೀ ಆರ್. ಮೋಹನ್ ಕುಮಾರ್ ರವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರು ಸ್ಥಾಪಿಸಿರುವ ಈ ಸಹಕಾರಿ ಸಂಘವು ಕಳೆದ 10 ವರ್ಷಗಳಿಂದ ಶ್ರೀ ಆರ್. ಮೋಹನ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಸರ್ಕಾರಿ ನೌಕರರಿಗೆ ಹಲವು ತರಹದ ಸಾಲ ಹಾಗೂ ಠೇವಣೆ ಸೌಲಭ್ಯಗಳನ್ನು ನೀಡುವುದರ ಮೂಲಕ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸಹಕಾರಿ ಸಂಘವು ಪ್ರಸಕ್ತ 80 ಕೋಟಿಗೂ ಅಧಿಕ ವಾರ್ಷಿಕ ವಹಿವಾಟನ್ನು ನಡೆಸುತ್ತಿದ್ದು. 30 ಕೋಟಿಗೂ ಅಧಿಕ ದುಡಿಯುವ ಬಂಡವಾಳವನ್ನು ಹೊಂದಿದೆ. ಕಳೆದ 5 ವರ್ಷವೂ ನಿರಂತರವಾಗಿ 01 ಕೋಟಿಗೂ ಅಧಿಕ ನಿವ್ವಳ ಲಾಭವನ್ನು ಹೊಂದುವ ಮೂಲಕ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುವಲ್ಲಿ ಅಧ್ಯಕ್ಷರು ಪ್ರಮುಖ ಪಾತ್ರ ವಹಿಸಿರುತ್ತಾರೆ. ಕಳೆದ 35 ವರ್ಷಗಳಿಂದ ಸಂಘಟನೆಯಲ್ಲಿ ಸೇವೆ ಸಲ್ಲಿಸಿ, ಅಪಾರ ಅನುಭವವನ್ನು ಹೊಂದಿರುವ ಆರ್.ಮೋಹನ್ ಕುಮಾರ್ ರವರು ಕಳೆದ ವರ್ಷ ನಡೆದ ಸರ್ಕಾರಿ ನೌಕರರ ಸಂಘದಲ್ಲಿನ ಚುನಾವಣೆಯಲ್ಲಿಯೂ ಸಹ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿ ನೌಕರರ ಪರವಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.

ಸತತ ಮೂರನೇ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆರ್. ಮೋಹನ್ ಕುಮಾರ್ ರವರು ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆಯ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತೆ ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಸಾಲ ಸೌಲಭ್ಯಗಳು ಹಾಗೂ ಉಳಿತಾಯ ಯೋಜನೆಗಳನ್ನು ಜಾರಿಗೆ ತರುವ ಅಪೇಕ್ಷೆಯನ್ನು ಹೊಂದಿದ್ದು, ಸಂಘದ ಸದಸ್ಯರ ಆರ್ಥಿಕ ಬೆಳವಣಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ನೂತನ ಯೋಜನೆಗಳನ್ನು ರೂಪಿಸುವ ಇಚ್ಛೆಯನ್ನು ಹೊಂದಿದ್ದಾರೆ.

Shivamogga News ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಶ್ರೀ ಆರ್.ಮೋಹನ್ ಕುಮಾರ್ ರವರು ಸೇರಿದಂತೆ ಉಪಾಧ್ಯಕ್ಷರಾಗಿ ಶ್ರೀ ಐ.ಬಿ.ಮೋಹನ್ ಕುಮಾರ್, ನಿರ್ದೇಶಕರಾಗಿ ಶ್ರೀ ಸಿ.ಎಸ್.ಷಡಾಕ್ಷರಿ, ಶ್ರೀ ಎಸ್.ಆರ್.ನರಸಿಂಹಮೂರ್ತಿ, ಡಾ.ಸಿ.ಎ.ಹಿರೇಮಠ, ಶ್ರೀ ಎನ್.ಎಂ.ರಂಗನಾಥ, ಶ್ರೀ ಡಿ.ವಿ.ಸತೀಶ್, ಶ್ರೀ ರಾಜು ಲಿಂಬು ಚವ್ಹಾಣ, ಶ್ರೀ ಟಿ.ಕೊಟ್ರೇಶ, ಶ್ರೀ ಪಿ.ಎಲ್.ಮಹೇಶ್, ಶ್ರೀ ಕೆ.ನರಸಿಂಹ ಶ್ರೀ ಜಿ.ಪ್ರವೀಣಕುಮಾರ್, ಶ್ರೀ ಎಂ.ಜಯ, ಶ್ರೀ ಎಸ್.ಪಿ.ರಾಜು, ಶ್ರೀ ಎಸ್.ಶೋಭಿತ್, ಶ್ರೀಮತಿ ರೇಖಾ ಎಸ್ ಹಾಗೂ ಶ್ರೀಮತಿ ಆಶಾ ಕೆ.ಎಂ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ 8000 ಹುದ್ದೆಗಳನ್ನ ಭರ್ತಿ ಮಾಡಲಾಗುವುದು,- ಸಿದ್ಧರಾಮಯ್ಯ.

CM Siddharamaih ಪೊಲೀಸ್ ಸೇವೆಯಲ್ಲಿ ಶಿಸ್ತು, ಸಂಯಮ, ಪ್ರಾಮಾಣಿಕತೆ, ಮಾನವೀಯತೆ ಬಹಳ ಮುಖ್ಯ....

Kuvempu University ಜೋನ್ ಲೀಲಾ ಮಾಡ್ತಾ ಅವರಿಗೆ ಪಿಎಚ್.ಡಿ. ಪದವಿ

Kuvempu University  ಎನ್.ಶಾಂತನಾಯ್ಕ ಮಾರ್ಗದರ್ಶನದಲ್ಲಿ ಜೋನ್ ಲೀಲಾ ಮಾಡ್ತಾ ಕಲಾ ಅಧ್ಯಯನ...

Shivamogga Police ಶಿವಮೊಗ್ಗ ಪೊಲೀಸ್ ಇಲಾಖೆಯ ಮೂವರಿಗೆ ಮುಖ್ಯಮಂತ್ರಿಗಳ ಪದಕ ಪುರಸ್ಕಾರ.

Shivamogga Police 2025ನೇ ಸಾಲಿನ ಮುಖ್ಯ ಮಂತ್ರಿಗಳ ಪದಕಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್...