Saturday, March 21, 2026
Saturday, March 21, 2026

DC shivamogga ಹಣದಾಸೆಗೆ ಸರ್ಕಾರಿ ದಾಖಕೆಗಳ ನಕಲಿ ಸೃಷ್ಟಿಸುವವರ ಬಗ್ಗೆ ಜಾಗರೂಕರಾಗಿರಿ- ‘ಡೀಸಿ ‘ಪ್ರಭುಲಿಂಗ ಕವಳಿಕಟ್ಟಿ.

Date:

DC shivamogga ಹಣದಾಸೆಗಾಗಿ ಸರ್ಕಾರಿ ದಾಖಲೆಗಳನ್ನು ನಕಲಿ ಮಾಡಿ, ಖಾಸಗಿ‌ ವ್ಯಕ್ತಿಗಳಿಗೆ ಜಮೀನು ಮಂಜೂರು ಮಾಡಲು ಪ್ರಯತ್ನಿಸುತ್ತಿದ್ದ ಸಾಗರ ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳ ವಿರುದ್ದ ಈಗಾಗಲೇ ಎಫ್ ಐ ಆರ್ ದಾಖಲಿಸಿ, ವಿಚಾರಣೆ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇಂತಹ ವಿಚಾರಗಳಿಂದ ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.

ಸಾಗರ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳು ಜಮೀನು ಮಂಜೂರು ಮಾಡಿಸುವುದಾಗಿ ಖಾಸಗಿ‌ ವ್ಯಕ್ತಿಗಳಿಂದ ಹಣ ಪಡೆದು ಸರ್ಕಾರಿ ದಾಖಲೆಗಳನ್ನು ನಕಲಿ ಮಾಡುತ್ತಿದ್ದ ಜಾಲವೊಂದನ್ನು ಸಾಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರು ಬಯಲಿಗೆಳೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಆರು ಜನ ಆರೋಪಿಗಳ ವಿರುದ್ದ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ವಿಚಾರಣೆ ಆರಂಭಿಸಲಾಗಿದೆ.
ಮಾರ್ಚ್ 18ರ ಬುಧವಾರ ಮಧ್ಯಾಹ್ನ ತಹಶೀಲ್ದಾರ್ ಕಚೇರಿಯ ದಾಖಲೆ ಕೊಠಡಿಯ ಮೇಲ್ವಿಚಾರಕರು ಹಳೆಯ ಮಂಜೂರಾತಿ ಪತ್ರಗಳನ್ನು ತಿದ್ದುಪಡಿ ಮಾಡುತ್ತಿರುವುದನ್ನು ತಹಶೀಲ್ದಾರ್ ಅವರು ಖುದ್ದಾಗಿ ಗಮನಿಸಿದ್ದಾರೆ.

DC shivamogga ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲು ನಕಲಿ ದಾಖಲೆ ಸೃಷ್ಟಿಸುವ ಕೆಲಸ ಇಲ್ಲಿ ನಡೆಯುತ್ತಿತ್ತು.

ಸಾಗರ ತಹಶಿಲ್ದಾರ್ ಕಚೇರಿಯಲ್ಲಿ ಈ ಕಾರ್ಯವೆಸಗುತ್ತಿದ್ದವರ ವಿರುದ್ದ ಸೂಕ್ತ ಕಾನೂನು ಕ್ರಮ‌ ಕೈಗೊಳ್ಳಲಾಗುತ್ತಿದ್ದು , ಹೀಗೆ ಯಾವುದೇ ಸರ್ಕಾರಿ ದಾಖಲೆಗಳನ್ನು ನಕಲು ಮಾಡಿ, ಜಮೀನು ಮಂಜೂರು ಮಾಡಲು ಬರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಅವರು ಮನವಿ‌ ಮಾಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Ripponpet News ಪೆಟ್ರೋಲ್ ಕೊರತೆ ಎಂಬ ಸುದ್ದಿ ನಂಬಿ ರಿಪ್ಪನ್ ಪೇಟೆಯ ‘ಬಂಕ್’ ಗಳಿಗೆ ಮುಗಿಬಿದ್ದ ಜನ.

Ripponpet News ರಿಪ್ಪನ್‌ಪೇಟೆಯ ಶಿವಮೊಗ್ಗ ರಸ್ತೆಯಲ್ಲಿರುವ ಹೆಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್...

Yakshagana ಶಿವಮೊಗ್ಗದ ವರದಾ ಐತಾಳ್ ಅವರಿಗೆ ಶಿವರಾಮ ಕಾರಂತ ಪ್ರತಿಷ್ಠಾನದಿಂದ “ಸಾಧಕಿ ಪ್ರಶಸ್ತಿ” ಪುರಸ್ಕಾರ.

Yakshagana ತಾll 15.03.2026 ರಂದು ಯಕ್ಷಗಾನ ದಲ್ಲಿ ಹೊಸಸಾಧ್ಯತೆಯ ಅನಾವರಣಕ್ಕಾಗಿ ಡಾllಶಿವರಾಮ...

Ramadan ಸಮಾಜದಲ್ಲಿ ಶಾಂತಿ – ಸೌಹಾರ್ದದಿಂದ ಬಾಳಬೇಕು- ಮೌಲಾನಾ ಮುಫ್ತಿ ತಪ್ಜಿಲ್ ಆಲಂ ಖಾಸ್ಮಿ

Ramadan ತಿಂಗಳು ಪೂರ್ತಿ ಉಪವಾಸ ವ್ರತ ಆಚರಣೆಯ ನಂತರ ಮುಸ್ಲಿಂ ಬಾಂಧವರು...

Chess ಮಾರ್ಚ್ 25 ರಿಂದ ಶಿವಮೊಗ್ಗದಲ್ಲಿ ಬೇಸಿಗೆ ರಜೆ ನಿಮಿತ್ತ ಚೆಸ್ ತರಬೇತಿ ಶಿಬಿರ.

Chess ಶಿವಮೊಗ್ಗ ನಗರದ ಯಾದವ ಸ್ಕೂಲ್ ಆಫ್ ಚೆಸ್ ಸಂಸ್ಥೆಯಿಂದ ಈ...