Wednesday, September 30, 2026
Wednesday, September 30, 2026

Women’s Day ಚಿತ್ರಕಲಾ ಸ್ಪರ್ಧೆ ಮಹಿಳೆಯರ ಸುಪ್ತ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ- ಎನ್.ಹೇಮಂತ್

Date:

Women’s Day ಮಹಿಳೆಯರ ಚಿತ್ರಕಲೆಯಲ್ಲಿ ‘ಪ್ರಕೃತಿ’ಯು ಅನಾವರಣಗೊಳ್ಳುತ್ತಿರುವುದು ಸಂತಸದ ವಿಷಯ. ಇಂತಹ ಚಿತ್ರಕಲೆ ಸ್ಪರ್ಧೆಗಳು ಮಹಿಳೆಯರಲ್ಲಿ ಸುಪ್ತವಾಗಿ ಅಡಗಿರುವ ಕಲೆ, ಕೌಶಲ್ಯಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಜಿ.ಪಂ. ಸಿಇಓ ಹೇಮಂತ್ ಎನ್ ತಿಳಿಸಿದರು.

ಭಾನುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಪ್ರಕೃತಿ ಎಂಬ ವಿಷಯ ಕುರಿತು ಮಹಿಳೆಯರಿಗೆ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರಕಲೆ ಕೇವಲ ಕಲೆ ಮಾತ್ರವಲ್ಲದೆ, ಮನಸ್ಸಿಗೆ ನೆಮ್ಮದಿ ಮತ್ತು ಆನಂದ ನೀಡುವ ಮಾರ್ಗವಾಗಿದೆ. ಆದ್ದರಿಂದ ಆಸಕ್ತಿ ಉಳ್ಳವರು ಹೆಚ್ಚೆಚ್ಚು ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಪಡಿಸಿಕೊಳ್ಳಬೇಕೆಂದು ತಿಳಿಸಿದ ಅವರು ಸ್ಪರ್ಧಾರ್ಥಿಗಳಿಗೆ ಶುಭ ಕೋರಿದರು.
74 ಸ್ಪರ್ಧಾರ್ಥಿಗಳು ಚಿತ್ರಕಲಾ ಸ್ಪರ್ಧೆಗೆ ನೋಂದಾಯಿಸಿಕೊಂಡಿದ್ದರು. ಸ್ಪರ್ಧಿಗಳಿಗೆ 22.5 ಅಳತೆಯ ಕ್ಯಾನ್ವಾಸನ್ನು ಆಯೋಜಕರಿಂದ ಒದಗಿಸಲಾಗಿತ್ತು.

Women’s Day ಕಾರ್ಯಕ್ರಮದಲ್ಲಿ ಜಿ.ಪಂ ಅಧಿಕಾರಿಗಳು, ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು.
ವಿಜೇತರು : ಮೊದಲ ಬಹುಮಾನ (ರೂ.8,000/-)ವನ್ನು ತೀರ್ಥಹಳ್ಳಿಯ ಪ್ರಕೃತಿ ಶೆಣೈ ಪಡೆದುಕೊಂಡರು. ದ್ವಿತೀಯ ಬಹುಮಾನ (ರೂ.6,000/-) ನ್ನು ತೀರ್ಥಹಳ್ಳಿಯ ಭಾವನಾ ಹೊಳ್ಳ ಪಡೆದುಕೊಂಡಿದ್ದು, ತೃತೀಯ ಬಹುಮಾನ (ರೂ.4,000/- )ವನ್ನು ತೀರ್ಥಹಳ್ಳಿಯ ಆಶಾ ಉಮೇಶ್ ಹಾಗೂ ಎರಡು ಸಮಾಧಾನಕರ ಬಹುಮಾನ(ತಲಾ ರೂ.2,000/-) ವನ್ನು ಶಿಕಾರಿಪುರದ ಹೇಮಲತಮ್ಮ, ಶಿವಮೊಗ್ಗದ ಮನ್ವಿತಾ ಆರ್, ಆನವಟ್ಟಿಯ ಶಾಲಿನಿ ನಾಯಕ್ ಮತ್ತು ವಿಶೇಷ ಬಹುಮಾನವನ್ನು ಶಿವಮೊಗ್ಗದ ಸೌಜನ್ಯ ಆರ್ ಕೆ ಪಡೆದರು. ವಿಜೇತರಿಗೆ ಮಾ.26 ರಂದು ನಡೆಯುವ ಕಾರ್ಯಕ್ರಮದಲ್ಲಿ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga ಕುಟುಂಬ ಮಿಲನದಿಂದ ಬಾಂಧವ್ಯ ವೃದ್ಧಿ, ಪ್ರತಿಭೆ ಅನಾವರಣ: ವಿಜಯಲಕ್ಷ್ಮಿ ಕಡಂಬ

JCI Shivamogga ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ ವತಿಯಿಂದ ಸ್ನೇಹ ಮಿಲನ...

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...