Monday, March 16, 2026
Monday, March 16, 2026

Madhu Bangarappa ಕೇವಲ ₹5 ಕ್ಕೆ ತಿಂಡಿ.₹10 ಕ್ಕೆ ಊಟ ಸಿಗಲಿದ್ದು ನಿರ್ಗತಿಕರು,ಕೂಲಿ ಕಾರ್ಮಿಕರು ಇಂದಿರಾ ಕ್ಯಾಂಟೀನ್ ಸೌಲಭ್ಯ ಬಳಸಿಕೊಳ್ಳಿ- ಮಧು ಬಂಗಾರಪ್ಪ

Date:

Madhu Bangarappa ಶಿಕಾರಿಪುರ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ “ಇಂದಿರಾ ಕ್ಯಾಂಟಿನ್” ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ‌ ಉದ್ಘಾಟಿಸಿದರು.
ನಂತರ ಮುಖಂಡರೊಂದಿಗೆ ಉಪಹಾರ ಸವಿದರು.
ಬಳಿಕ ವೇದಿಕೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಸಚಿವರು ಮಾತನಾಡಿದರು. 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದ ‘ಅನ್ನಭಾಗ್ಯ’ ಯೋಜನೆ ಇಂದಿಗೂ ಬಡವರ ಪಾಲಿಗೆ ಆಸರೆಯಾಗಿದೆ. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಿಂತಲೂ ಬಡವರ ಮತ್ತು ಹಸಿದವರ ಹಿತಾಸಕ್ತಿಗೆ ಆದ್ಯತೆ ನೀಡುತ್ತಾ ಬಂದಿದೆ. ಇಂದಿರಾ ಗಾಂಧಿಯವರ ಕಾಲದಿಂದಲೂ ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮ ಪಕ್ಷದ ಮೂಲ ಮಂತ್ರವಾಗಿದೆ.

ಮಾಜಿ ಮುಖ್ಯಮಂತ್ರಿಗಳು ನನ್ನ ತಂದೆ ಶ್ರೀ ಎಸ್. ಬಂಗಾರಪ್ಪನವರು ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದ್ದು, ಭೂರಹಿತರಿಗೆ ಭೂಮಿ ಮಂಜೂರು ಮಾಡಿದ್ದು ಹಾಗೂ ಗ್ರಾಮೀಣ ಕೃಪಾಂಕದಂತಹ ಐತಿಹಾಸಿಕ ತೀರ್ಮಾನಗಳು ಬಂಗಾರಪ್ಪನವರ ಬಡವರ ಪರ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಅವರ ಆಶಯದಂತೆಯೇ ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕೇವಲ ₹5ಕ್ಕೆ ತಿಂಡಿ ಹಾಗೂ ₹10ಕ್ಕೆ ಗುಣಮಟ್ಟದ ಊಟ ಸಿಗಲಿದ್ದು ಪಟ್ಟಣದ ನಿರ್ಗತಿಕರು, ಕೂಲಿ ಕಾರ್ಮಿಕರು ಮತ್ತು ಸಾರ್ವಜನಿಕರು ಈ ಇಂದಿರಾ ಕ್ಯಾಂಟಿನ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
. ಇದೇ ವೇಳೆ ಹೆಚ್ಚಿನ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು.

Madhu Bangarappa ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶ್ರೀ ವಿರೇಶ್, ತಹಶೀಲ್ದಾರ್ ಶ್ರೀಮತಿ ವಾಣಿ, ಪುರಸಭೆ ಮುಖ್ಯಾಧಿಕಾರಿ ಶ್ರೀ ಭರತ್ ಹಾಗೂ ಮುಖಂಡರುಗಳಾದ ಶ್ರೀ ಗೋಣಿ ಮಾಲತೇಶ್, ಶ್ರೀ ದರ್ಶನ್ ಉಳ್ಳಿ, ಶ್ರೀ ರಾಘವೇಂದ್ರ ನಾಯ್ಕ್, ಶ್ರೀಮತಿ ಪುಷ್ಪ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರುಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಯುಗಾದಿ…ಒಂದಿಷ್ಟು ಮಾಹಿತಿ- ಡಾ.ಹೆಚ್.ಪದ್ಮನಾಭ ಅಡಿಗ. ಶಿವಮೊಗ್ಗ

Klive Special Article ಬ್ರಹ್ಮನ ಸೃಷ್ಟಿಯ ಪ್ರಾರಂಭದದಿನ, ಬ್ರಹ್ಮನ ಪೂಜೆಯೇ ವಿಶೇಷ.ಈ...

Inner Wheel Shivamogga ಮಹಿಳಾ ದಿನಾಚರಣೆ: ಶಿವಮೊಗ್ಗದ ಸಾಧಕಿಯರಿಗೆ ಸನ್ಮಾನ

Inner Wheel Shivamogga ಇನ್ನರ್ ವ್ಹೀಲ್ ಶಿವಮೊಗ್ಗ ನಾರ್ಥ್ ವತಿಯಿಂದ ಅಂತಾರಾಷ್ಟ್ರೀಯ...