Saturday, March 7, 2026
Saturday, March 7, 2026

Information and Public Relations Department ಭೀಮ ಗಾಯನದ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಪರಿಣಾಮಕಾರಿ : ಚಂದ್ರಭೂಪಾಲ

Date:

Information and Public Relations Department ಅಂಬೇಡ್ಕರ್, ಬುದ್ದ ಮತ್ತು ಬಸವಣ್ಣನಂತಹವರು ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಹೋರಾಟ ನಡೆಸಿದ್ದನ್ನು ‘ಭೀಮ ಗಾಯನ’ದ ಮೂಲಕ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ಅಭಿಪ್ರಾಯಪಟ್ಟರು.
ಶಿವಮೊಗ್ಗ ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಿವಿಧ ಇಲಾಖೆ, ಸಂಘ ಸಂಸ್ಥೆಗಳು ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ‘ಭೀಮ ಗಾಯನ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತಿಹಾಸದುದ್ದಕ್ಕೂ ಗಾಯನದ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಾ ಬರಲಾಗಿದ್ದು ಹೋರಾಟದ ಅಂಶಗಳನ್ನು ಸ್ವರಗಳಲ್ಲಿ ಜೀವಂತಗೊಳಿಸಿ, ಜಾಗೃತಿ ಮತ್ತು ಸಮಾನತೆಯನ್ನು ಸಾರುವ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯುತ್ತಿರುಬೇಕು.
ಸಂವಿಧಾನವೆAಬ ಶ್ರೇಷ್ಟ ಗ್ರಂಥವನ್ನು ನಾವೆಲ್ಲರೂ ಓದಿ, ಇದರ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಅಭಿವೃದ್ದಿ ದಿಸೆಯಲ್ಲಿ ನಡೆಯಲು ಸಾಧ್ಯ. ಈ ಶ್ರೇಷ್ಟ ಗ್ರಂಥ ನಮ್ಮ ಬದುಕನ್ನು ರೂಪಿಸುವ ಸಾಧನವಾಗಿದ್ದು, ಸಮಾನತೆಯೇ ಇದರ ಮೂಲ ತತ್ವವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್‌ರವರು ಸಾಮಾಜಿಕ ನ್ಯಾಯದ ಎಲ್ಲ ಅಂಶಗಳನ್ನು ಸಂವಿಧಾನದಲ್ಲಿ ನೀಡಿ ಪ್ರಜಾಪ್ರಭುತ್ವದ ರೂಪ ನೀಡಿದ್ದಾರೆ ಎಂದರು.
ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಡಾ.ಬಿ,.ಆರ್.ಅಂಬೇಡ್ಕರ್‌ರವರು ಇಡೀ ದೇಶದ ನಾಯಕ. ನಮ್ಮ ಸಮಾಜಕ್ಕೆ ಅಗತ್ಯವಾದ ಚೌಕಟ್ಟನ್ನು ಹಾಕಿಕೊಟ್ಟ ಮಹಾಧುರೀಣರು. ಇವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಹಾಗೂ ದಲಿತ ಹೋರಾಟ, ದಲಿತ ನಾಯಕ ಎಂಬುದಕ್ಕೆ ಸೀಮಿತವಾಗದೆ, ನಾಗರೀಕ ಹೋರಾಟ, ನಾಗರೀಕ ನಾಯಕ ಎಂಬAತಾಗಬೇಕು.
ಇಂದಿನ ಭೀಮ ಗಾಯನದ ಉದ್ದೇಶ ಮನೋರಂಜನೆಯಲ್ಲ. ಬದಲಾಗಿ ಸಂಘರ್ಷದ ಹಾದಿಯಲ್ಲಿ ನಡೆದುಬಂದ ಹೋರಾಟದ ಹಾದಿಯನ್ನು ಗಾಯನದ ಜಾಗೃತಿ ಮೂಡಿಸುವ ಕಾರ್ಯಕ್ರಮ. ಅಂಬೇಡ್ಕರ್‌ರವರ ಅಗತ್ಯತೆ ನಮಗೆಲ್ಲಾ ಇದೆ. ಅವರು ಕಾರ್ಮಿಕ ಕಾನೂನು, ಆರ್ ಬಿ ಐ, ಇತರೆ ಕಾನೂನುಗಳು ಸೇರಿದಂತೆ ಸಾಮಾಜಿಕ ಸಾಮರಸ್ಯ ಮತ್ತು ಸರ್ವತೋಮುಖ ಅಭಿವೃದ್ದಿಯನ್ನು ನೀಡಿದ್ದಾರೆ.
Information and Public Relations Department ನಮ್ಮ ದೇಶದಲ್ಲಿ ಇತರೆ ದೇಶಗಳಂತೆ ಅರಾಜಕತೆ ಮೂಡಲು ಸಾಧ್ಯವಿಲ್ಲ. ಇದಕ್ಕೆ ಕಾರಣ ನಮ್ಮ ಸಂವಿಧಾನ. ಇದರಲ್ಲಿ ಎಲ್ಲ ಅಂಗಗಳಿಗೆ ಸ್ವಾತಂತ್ರö್ಯ ನೀಡಿ, ಉತ್ತಮ ತಂತ್ರ ನಿರ್ವಹಣೆಗೆ ಅವಕಾಶ ನೀಡಲಾಗಿದೆ. ಇದನ್ನು ನಾವು ಅಳವಡಿಸಿಕೊಂಡು ಪ್ರಗತಿ ಮತ್ತು ಸಾಮರಸ್ಯವನ್ನು ಸಾಧಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು. ಭೀಮ ಗಾಯನ ಕಾರ್ಯಕ್ರಮವನ್ನು ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ‘ಅಮ್ಮ ವಸುಂಧರೆ ಕಲಾತಂಡ’ದ ಕಲಾವಿದರು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, ಶಿವಮೊಗ್ಗ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷ ಮಧು ಹೆಚ್ ಎಂ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮೋಹನ್ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಾರುತಿ ಆರ್. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶೋಭಾ, ವಿವಿಧ ಸಮಾಜದ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga ಕ್ರೀಡೆಯಲ್ಲಿ ಸ್ಪರ್ಧಾಮನೋಭಾವ ಮುಖ್ಯ, ಸೋಲು-ಗೆಲುವು ಅಲ್ಲ : ಪ್ರಭುಲಿಂಗ ಕವಳಿಕಟ್ಟಿ

DC Shivamogga ಸೋಲು-ಗೆಲುವು ಮುಖ್ಯವಲ್ಲ. ಕ್ರೀಡೆಯಲ್ಲಿ ಭಾಗವಹಿಸುವಿಕೆ ಮತ್ತು ಸ್ಪರ್ಧಾ...

Shikaripura Horticulture Department ಉಚಿತ ತರಕಾರಿ ಬೀಜಗಳನ್ನು ಪಡೆಯಲು ಅರ್ಜಿ ಆಹ್ವಾನ

Shikaripura Horticulture Department ಶಿಕಾರಿಪುರ ತೋಟಗಾರಿಕೆ ಇಲಾಖೆಯು 2025-26 ನೇ ಸಾಲಿನ...

ಪತ್ರಿಕಾ ವಿತರಕ ಕಿರಣ್ ನಿಧನ

ಶಿವಮೊಗ್ಗ ನಗರದ ಹೊಸಮನೆ ಬಡಾವಣೆ ನಿವಾಸಿ ಪತ್ರಿಕಾ ವಿತರಕ ಕಿರಣ್(೩೫)...