Wednesday, March 4, 2026
Wednesday, March 4, 2026

ಇಲಾಖಾ ಅಧಿಕಾರಿಗಳ ನಡುವೆ ಸಮನ್ವಯತೆ ಸಾಧಿಸಲು ಕ್ರೀಡೆಗಳು ಸಹಕಾರಿ : ಎನ್.ಹೇಮಂತ್

Date:

ವಿವಿಧ ಇಲಾಖಾ ಅಧಿಕಾರಿ-ಸಿಬ್ಬಂಧಿಗಳ ನಡುವೆ ಸೌಹಾರ್ಧಯುತವಾಗಿ ಮತ್ತು ಸ್ನೇಹಪೂರ್ವಕವಾಗಿ ಕ್ರಿಕೇಟ್‌ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದು ಇಲಾಖೆ-ಇಲಾಖೆಗಳ ಮತ್ತು ಅಧಿಕಾರಿಗಳ ನಡುವೆ ಸ್ನೇಹ ಸಂಬಂಧಗಳು ಏರ್ಪಟ್ಟು ತಮ್ಮ ಕಾರ್ಯಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸುವಲ್ಲಿ ಪರೋಕ್ಷವಾಗಿ ಸಹಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌ಅವರು ಹೇಳಿದರು.
ಅವರು ಇಂದು ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಾರ್ಚ್‌07 ಮತ್ತು 08ರಂದು ಇಲಾಖೆಗಳ ನಡುವೆ ನಡೆಯಲಿರುವ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಟೆನ್ನಿಸ್‌ಬಾಲ್‌ಕ್ರಿಕೇಟ್‌ಪಂದ್ಯಾವಳಿಯ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ನಡೆಸಲಾಗುವ ಕ್ರೀಡೆ ಸ್ಪರ್ಧಾತ್ಮಕವಾಗಿರುವಂತೆ ಸಂತೋಷದಾಯಕವೂ ಆಗಿರಲಿ. ಆಸಕ್ತ ಎಲ್ಲಾ ನೌಕರರು ಸಕ್ರಿಯವಾಗಿ ಆಟದಲ್ಲಿ ಪಾಲ್ಗೊಂಡು ಸಂಭ್ರಮಿಸುವಂತೆ ಮನವಿ ಮಾಡಿದ ಅವರು, ಮುಂದಿನ ದಿನಗಳಲ್ಲಿ ಮಹಿಳಾ ನೌಕರರಿಗೂ ಆಟೋಟಗಳನ್ನು ಆಯೋಜಿಸುವಂತೆ ಅವರು ಆಯೋಜಕರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್‌ವರಿಷ್ಟಾಧಿಕಾರಿ ಬಿ.ನಿಖಿಲ್‌ಅವರು ಮಾತನಾಡಿ, ನೌಕರರಲ್ಲಿ ಪರಸ್ಪರರಲ್ಲಿ ಸಮನ್ವಯತೆ ಸಾಧಿಸುವಲ್ಲಿ ಕ್ರೀಡೆಗಳು ಸಹಕಾರಿಯಾಗಿವೆ ಎಂದ ಅವರು, ಉತ್ತಮ ಬಾಂಧವ್ಯಕ್ಕೆ ಮುನ್ನುಡಿಯಾಗಿದೆ. ಇದರಿಂದಾಗಿ ನೌಕರರಲ್ಲಿ ಉತ್ತಮ ವಾತಾವರಣ ನಿರ್ಮಾಣಗೊಂಡು ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಲು ಸಹಕಾರಿಯಾಗಲಿದೆ ಎಂದರು.
ರಾಜ್ಯದಲ್ಲಿಯೇ ಮಾದರಿ ಎನಿಸಬಹುದಾದ ರಾಜ್ಯ ಸರ್ಕಾರಿ ನೌಕರರ ಘಟಕವು ಶಿವಮೊಗ್ಗದಲ್ಲಿ ಸದಾ ಕ್ರಿಯಾಶೀಲವಾಗಿರುವುದು ಸಂಘದ ಅ‍ಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಕಾಲಿಕ ಚಿಂತನೆ, ಕಾರ್ಯಕ್ರಮಗಳ ಆಯೋಜನೆ ಉತ್ಕೃಷ್ಟವಾದುದಾಗಿದೆ. ಸಂಘದ ಪದಾಧಿಕಾರಿಗಳೊಂದಿಗೆ ಎಲ್ಲಾ ಇಲಾಖಾ ನೌಕರರು, ಅವರ ಕುಟುಂಬಗಳ ಅವಲಂಬಿತರು ಪಾಲ್ಗೊಳ್ಳುತ್ತಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ ಎಂದರು.
ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಪ್ರತಿ ನೌಕರರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಸೂಚಿಸಿದ ಅವರು ಕಡುಬೇಸಿಗೆಯಲ್ಲಿ ತಾಪಮಾನ ಹೆಚ್ಚಳದಿಂದಾಗಿ ದೇಹದಲ್ಲಿ ನಿರ್ಜಲೀಕರಣಗೊಂಡು ಆರೋಗ್ಯದ ಏರುಪೇರುಗಳಾಗಬಹುದು. ಆದ್ದರಿಂದ ದೈಹಿಕವಾಗಿ ಆರೋಗ್ಯದ ಕಡೆ ಗಮನಹರಿಸುವಂತೆ ಅವರು ಸೂಚಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಮೋಹನ್‌ಕುಮಾರ್‌ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘವು ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿಯದೇ ನೌಕರರ ಸೇವಾ ಸೌಲಭ್ಯವನ್ನು ದೊರಕಿಸಿಕೊಡುವಲ್ಲಿ ಸದಾ ಕಾರ್ಯಪ್ರವೃತ್ತವಾಗಿರುವಂತೆ ನೌಕರರ ಮತ್ತು ಅವರ ಕುಟುಂಬದ ಅವಲಂಬಿತರ ಆರೋಗ್ಯದ ಕುರಿತು ಆರೋಗ್ಯ ತಪಾಸಣಾ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕಾಲಕಾಲಕ್ಕೆ ಮನೋರಂಜನೆಗಾಗಿ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು, ಔತಣಕೂಟಗಳನ್ನು ಆಯೋಜಿಸುತ್ತಿದೆ. ಇದರಿಂದಾಗಿ ನೌಕರರಲ್ಲಿ ಉಲ್ಲಾಸದ ಭಾವ ಕಾಣಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಈಗಾಗಲೇ ಟೆನ್ನಿಸ್‌ಬಾಲ್‌ಕ್ರಿಕೇಟ್‌ಪಂದ್ಯಾವಳಿಗೆ ನೋಂದಾಯಿಸಿಕೊಂಡ 28ತಂಡಗಳಿಗೆ 28 ರೀತಿಯ ಕ್ಯಾಪ್‌ಗಳನ್ನು ಗಣ್ಯರು ವಿತರಿಸಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್‌ವಿ., ಉಪವಿಭಾಗಾಧಿಕಾರಿ ಸತ್ಯನಾರಾಯಣ್‌, ಆರ್.ಪಾಪಣ್ಣ, ಕೊಟ್ರೇಶ್‌, ರಂಗನಾಥ್‌, ರವಿ, ಸುಮತಿ, ದಿನೇಶ್‌ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಫ್ರೆಂಡ್ಸ್ ಸೆಂಟರ್‌ನಿಂದ ಹೋಳಿ ಆಚರಣೆ

ಫ್ರೆಂಡ್ಸ್ ಸೆಂಟರ್ ವತಿಯಿಂದ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ನೂರಾರು ಜನರು...

Public Library Department 2022ನೇ ಸಾಲಿನ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಪಟ್ಟಿ ಪ್ರಕಟ – ಆಕ್ಷೇಪಣೆ ಸಲ್ಲಿಸಲು ಅವಕಾಶ

2022ನೇ ವರ್ಷದಲ್ಲಿ ಪ್ರಥಮ ಮುದ್ರಣಗೊಂಡು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ...

Ayushman Bharat ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ‘Whistle Blower Policy’ ಜಾರಿ – ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶ

Ayushman Bharat ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಮುಖ್ಯ ಮಂತ್ರಿಗಳ ಆರೋಗ್ಯ...