Sunday, August 9, 2026
Sunday, August 9, 2026

ಮಲೆನಾಡು ಇತಿಹಾಸ ಮತ್ತು ಅಧ್ಯಯನ ವೇದಿಕೆಯ ಸರ್ವ ಸದಸ್ಯರ ಸಭೆ ಯಶಸ್ವಿ

Date:

ಮಲೆನಾಡು ಇತಿಹಾಸ ಮತ್ತು ಅಧ್ಯಯನ ವೇದಿಕೆಯ ಸರ್ವ ಸದಸ್ಯರ ಸಭೆ ಭಾನುವಾರ ಮಥುರಾ ಪ್ಯಾರಾಡೈಸ್ ಹೋಟೆಲ್ ನಲ್ಲಿ ನಡೆಯಿತು. ವೇದಿಕೆಯ ಅಧ್ಯಕ್ಷರಾದ ಡಾ. ಎಸ್. ಜಿ. ಸಾಮಕ್ ಅಧ್ಯಕ್ಷತೆ ವಹಿಸಿದ್ದರು.
ಸಭೆಯ ಆರಂಭದಲ್ಲಿ ಇತ್ತೀಚೆಗೆ ಅಗಲಿದ ಇತಿಹಾಸ ಸಂಶೋಧಕರೂ, ಪುರಾತತ್ವ ಇಲಾಖೆಯ ನಿರ್ದೇಶಕರೂ ಆಗಿದ್ದ ಶ್ರೀಯುತ ಟಿ.ಎಮ್. ಕೇಶವ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಳೆದ ವರ್ಷದಲ್ಲಿ ನಡೆದ ವೇದಿಕೆಯ ಚಟುವಟಿಕೆಗಳನ್ನು ಕುರಿತು ಚರ್ಚಿಸಲಾಯಿತು. ತಾಳಗುಂದ ಉತ್ಖನನ, ಅಲ್ಲಿ ದೊರೆತಿದ್ದ ಸಿಂಹ ಕತಾಂಜನ ಶಾಸನ ಕುರಿತು ಪುರಾತತ್ವ ಇಲಾಖೆ ಸೂಚನಾ ಫಲಕ ಹಾಕಲು ಈ ಹಿಂದೆ ಎಂ. ಪಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅದ ತೀರ್ಮಾನವನ್ನು ಮತ್ತೊಮ್ಮೆ ಜ್ಞಾಪಿಸಲು ತೀರ್ಮಾನಿಸಲಾಯಿತು. ಅದೇ ರೀತಿ ಪುರಂದರ ದಾಸರ ಜನ್ಮ ನೆಲೆಯಂದು ಬಿಂಬಿತವಾಗಿರುವ ಆರಗ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಿಸ್ತೃತ ಅಧ್ಯಯನ ಕೈಗೊಳ್ಳಬೇಕು ಬೇಕೆಂದು ನಿರ್ಣಯಿಸಲಾಯಿತು.
ಹಾಗೆಯೆ ಕಳೆದ ಸಾಲಿನಲ್ಲಿ ಮತ್ತು ಇದೇ 2026 ರಲ್ಲಿ ನಡೆದ ಹಂಪಿ ಉತ್ಸವದಲ್ಲಿ ಪ್ರಭಂಧ ಮಂಡಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಲಾಯಿತು.
ಕಾರ್ಯದರ್ಶಿ ದಿಲೀಪ್ ನಾಡಿಗ್ ಕಳೆದ ಸಾಲಿನ ಆಯ- ವ್ಯಯ ಮಂಡಿಸಿದರು. ಆದಿತ್ಯ ನಂಜವಳ್ಳಿ ವಂದನಾರ್ಪಣೆ ನೆರವೇರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ತೀರ್ಥಹಳ್ಳಿ ಬಳಿ ಗುಡ್ಡ ಕುಸಿತದಿಂದ ಸಾವಿನ ಅವಘಡ: ಸಚಿವ ಮಧು ಬಂಗಾರಪ್ಪ ಮೌಖಿಕ ಪರಿಶೀಲನೆ, ಪರಿಹಾರಕ್ಕೆ ಶೀಘ್ರ ಕ್ರಮ

Madhu Bangarappa ತೀರ್ಥಹಳ್ಳಿಯಲ್ಲಿ ಭೂಕುಸಿತದಿಂದ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ...

Madhu Bangarappa ಗ್ರಾಮೀಣರಲ್ಲಿ ವಿಬಿ-ಜಿ ರಾಮ್ ಜಿ ಯೋಜನೆ ಬಗ್ಗೆ ಮನವರಿಕೆ ಮಾಡಿ, ಹೆಚ್ಚಿನ ಜನಕ್ಕೆ ಕೆಲಸ ನೀಡಿ- ಮಧು ಬಂಗಾರಪ್ಪ

Madhu Bangarappa ಬರಗಾಲದ ಹಿನ್ನೆಲೆಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ...

DC Shivamogga ಹೋಂ ಸ್ಟೇ, ಹೊಟೆಲ್ & ರೆಸಾರ್ಟ್ಗಳಲ್ಲಿ ಮಾಹಿತಿ ಫಲಕ ಅಳವಡಿಕೆ ಕಡ್ಡಾಯ. ಪ್ರಭುಲಿಂಗ ಕವಳಿಕಟ್ಟಿ.

DC Shivamogga ಜಿಲ್ಲೆಯಲ್ಲಿರುವ ಎಲ್ಲಾ ಹೋಂಸ್ಟೇ, ಹೋಟೇಲ್, ರೆಸಾರ್ಟ್ ಹಾಗೂ ಇತರೆ ವಸತಿ...