Saturday, February 28, 2026
Saturday, February 28, 2026

Shiomga News ಯುವ ರೈತರು ನಗರದ ಆಕರ್ಷಣೆ,ನೌಕರಿ ,ವ್ಯಾಪಾರದ ನಿಮಿತ್ತ ಕೃಷಿಯಲ್ಲಿ ಆಸಕ್ತಿ ಕಡಿಮೆ-ಡಾ .ಮಲ್ಲಿಕಾರ್ಜುನ ಶಿವಾಚಾರ್ಯ

Date:

Shiomga News ಕೃಷಿ ಬಗ್ಗೆ ರೈತರ ಆಸಕ್ತಿ ಕಡಿಮೆ ಆಗಿರುವುದರಿಂದ ಕೃಷಿ ಹಿಂದೆ ಬಿದ್ದಿದೆ, ಯುವ ರೈತರು ನಗರ ಪ್ರದೇಶದ ಆಕರ್ಷಣೆ ಹಾಗೂ ನೌಕರಿಗೆ ವ್ಯಾಪರಕ್ಕೆ ಒತ್ತು ಕೊಡುವಷ್ಟು ಕೃಷಿಗೆ ಕೊಡದ ಕಾರಣ ಕೃಷಿ ಹಿನ್ನಲೆಗೆ ಬಿದ್ದಿದೆ ಎಂದು ಕಾಶಿ ಪೀಠದ ಜಗದ್ಗುರು ೧೦೦೮ ಡಾ.ಮಲ್ಲಿಕಾಜರ್‌ನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು ಬೇಸರ ವ್ಯಕ್ತಪಡಿಸಿದರು.

ಲಿಂ.ಶ್ರೀ ಮೃತ್ಯುಂಜಯ ಶಿವಾಚಾರ್ಯ ಶ್ರೀಗಳ ಪುಣ್ಯಾರಾಧನೆ ಹಾಗೂ ಲಿಂ.ಚAದ್ರಶೇಖರ ಶಿವಾಚಾರ್ಯ ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕೃಷಿಮೇಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನಮ್ಮ ಪೂರ್ವಜರ ಕಾಲದಲ್ಲಿ ಕೃಷಿ ಉನ್ನತ ಸ್ಥಾನ ಪಡೆದಿತ್ತು, ವ್ಯಾಪಾರ ಮಧ್ಯಮ, ನೌಕರಿ ಕೊನೆಯ ಸ್ಥಾನ ಪಡೆದಿತ್ತು, ಆದರೀಗ ವ್ಯಾಪಾರ, ಉದ್ಯೋಗ ಮೊದಲೆರಡು ಸ್ಥಾನ ಪಡೆದು ಕೃಷಿಯನ್ನು ಕೊನೆಯ ಸ್ಥಾನಕ್ಕೆ ತಳ್ಳಿದೆ ಎಂದು ಹೇಳಿದರು. ಒಂದು ಮನೆಯಲ್ಲಿ ಇಬ್ಬರು ಮಕ್ಕಳಿದ್ದು ಒಬ್ಬರು ಕೃಷಿಯನ್ನು, ಮತ್ತೊಬ್ಬರು ನೌಕರಿಯನ್ನು ಅವಲಂಬಿಸಿದ್ದರೆ, ನಾವು ನೌಕರಿ ಇರುವ ಮಗನನ್ನು ನೋಡುವ ರೀತಿಯೇ ಬೇರೆಯಾಗಿರುತ್ತದೆ. ಇದನ್ನು ಬಿಡಬೇಕು ಎಂದ ಅವರು, ಭೂಮಿ ರಾಸಾಯನಿಕ ಗೊಬ್ಬರಗಳಿಂದ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದ್ದು, ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವತ್ತ ರೈತರು ಗಮನಕೊಡಬೇಕು ಎಂದರು.

ಇದು ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಆಹಾರದ ಕೊರತೆ ಉಂಟಾಗಬಹುದು, ನಮ್ಮ ಯುವಕರು ಎಚ್ಚೆತ್ತುಕೊಳ್ಳದಿದ್ದರೆ ದೇಶದಲ್ಲಿ ಆಹಾರ ಭದ್ರತೆ ಕಾಡುವುದರಲ್ಲಿ ಅನುಮಾನವೇ ಇಲ್ಲ ಎಂದರು.

ಭೂಮಿತಾಯಿಯನ್ನು ನಂಬಿದರೆ ನಮಗೆ ಕೊನೆಯವರೆವಿಗೂ ಅನ್ನ ನೀಡಿ ಸಾಕುತ್ತಾಳೆ, ಆದರೆ ನಾವು ಭೂಮಿತಾಯಿಯನ್ನು ಮರೆತರೆ ಆಕೆ ಕೂಡ ನಮ್ಮ ಅನ್ನಕ್ಕೂ ಕಮಟಕ ಆಗಬಹುದು,ಆದ್ದರಿಂದ ಮನೆಯಲ್ಲಿ ಕೃಷಿಗೆ ಮೊದಲ ಆಧ್ಯತೆ ನೀಡಿ ಎಂದು ರೈತರಿಗೆ ಕರೆ ನೀಡಿದರು.

ಪೋಷಕರು ತಮ್ಮ ಮಕ್ಕಳ ವಿಷಯದಲ್ಲಿ ನೌಕರಿ ಮಾಡುವ ಹಾಗೂ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಮಕ್ಕಳಲ್ಲಿ ತಾರತಮ್ಯ ಮಾಡುತ್ತಿರುವುದು ಕಂಡು ಬರುತ್ತಿದೆ ಇದು ಸಲ್ಲದು ಎಂದು ಹೇಳಿದರು.

ಶಿಕ್ಷಣದಲ್ಲಿ ಹಾಗೂ ಇತರ ಜ್ಞಾನ ಅಪಾರವಿರುವ ಯುವಕ ನೌಕರಿ ಹಿಡಿಯುತ್ತಾನೆ, ಶಿಕ್ಷಣದಲ್ಲಿ ಜ್ಞಾನದಲ್ಲಿ ಹಿಂದುಳಿದವ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯವಾಗಿದೆ ಅಪಾರ ಜ್ಞಾನವಂತ ಕೃಷಿಯಲ್ಲಿ ತೊಡಗಿಸಿಕೊಂಡರೆ ಉತ್ತಮ ಎಂದು ಹೇಳಿದರು

Shiomga News ಪ್ರಾಸ್ತಾವಿಕವಾಗಿ ಮಾತನಾಡಿದ ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನಾ ಶಿವಾಚಾರ್ಯ ಸ್ವಾಮಿಜಿಗಳು, ಶ್ರೀಮಠದಿಂದ ಕೃಷಿಮೇಳ ಮಾಡುವ ಅವಶ್ಯಕತೆ ಇತ್ತೆ ಎಂದು ಕೆಲವ ಮನಸ್ಸಿನಲ್ಲಿದೆ ಆದರೆ ಇಂದು ರೈತನ ಬದುಕು ನಿಜಕ್ಕೂ ದುಸ್ತರವಾಗಿದೆ ಎಂಬುದನ್ನೆ ಎಲ್ಲರೂ ಅರಿಯಬೇಕು ಹಾಗಾಗಿ ಶ್ರೀಮಠ ರಾಜ್ಯಮಟ್ಟದ ಕೃಷಿಮೇಳ ನಡೆಸಿಅವರ ಬದುಕು ಹಸನಾಗಬೇಕು ಎಂದ ನಮ್ಮ ಆಶಯ ಎಂದರು.

ರೈತ ಎಂದೂ ತಮ್ಮ ನೆಮ್ಮದಿಯ ಜೀವನ ಸಾಗಿಸುತ್ತಾನೋ ಆಗ ಮಾತ್ರ ನಾವು ನೆಮ್ಮದಿಯಾಗಿರಲು ಸಾಧ್ಯ, ಹಾಗಾಗಿ ನಮ್ಮ ಶ್ರೀ ಮಠದಲ್ಲಿ ರಾಜ್ಯಮಟ್ಟದ ಕೃಷಿಮೇಳ ನಡೆಸಲು ಹಮ್ಮಿಕೊಂಡಿದ್ದೇವೆ ಎಂದ ಅವರು ಕೆಲವರು ಕೃಷಿಮೇಳ ನಡೆಸಲು ಸಮಯ ಅವಕಾಶ ಕಡಿಮೆ ಇದೆ ಎಂದು ಹೇಳಿದ್ದರೂ ಆದರೂ ನಾವು ಎಲ್ಲವನ್ನು ಅನುವು ಮಾಡಿಕೊಂಡು ಎಲ್ಲರ ಸಹಕಾರದಿಂದ ಕೃಷಿಮೇಳ ನಡೆಸುತ್ತಿದ್ದೇವೆ ಎಂದರು.ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್,ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಯಲುಸೀಮೆ ನಿಗಮ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಹಾಗೂ ಇತರರು ಕೃಷಿಮೇಳಕ್ಕೆ ಶಕ್ತಿಮೀರಿ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.

ಶಾಸಕ ಡಿ.ಜಿ.ಶಾಂತನಗೌಡ ಅವರು ಸ್ವಾಗತ ಭಾಷಣ ಮಾಡಿ, ಮಠ ಮಾನ್ಯಗಳು ಎಂದಿಗೂ ಧರ್ಮ,ಸಂಸ್ಕಾರ,ಮೌಲ್ಯಗಳ ಬಗ್ಗೆ ಮಾತನಾಡುತ್ತಾರೆ,ಆದರೆ ವಿಶೇಷವಾಗಿ ನಮ್ಮ ಹಿರೇಕಲ್ಮಠದಲ್ಲಿ ರೈತರ ಬಗ್ಗೆ ಚಿಂತಿಸಿ,ರೈತರ ಬದುಕು ದುಸ್ತಾರವಾಗದಂತೆ ನಾವು ನೋಡಿಕೊಳ್ಳಬೇಕು,ಅದು ನಮ್ಮ ಆಧ್ಯ ಕರ್ತವ್ಯ ಎಂದು ತಿಳಿದು ನಮ್ಮ ಶ್ರೀಗಳು ಕೃಷಿಮೇಳ ನಡೆಸಿ,ರೈತರಿಗೆ ಬೇಕಾದ ಕೃಷಿ ಪರಿಕರ ಹಾಗೂ ಆಧುನಿಕ ಬೇಸಾಯದ ಬಗ್ಗೆ ತಿಳಿಸಲು ಕೃಷಿಮೇಳ ನಡೆಸುತ್ತಿರುವ ನಮ್ಮ ಶ್ರೀಗಳು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.

ಹಿರೇಕೆರುರು ಶಾಸಕ ಯು.ಬಿ.ಬಣಕರ್ ಮಾತನಾಡಿ, ರೈತರಿಗೆ ಬಗ್ಗೆ ವೇದಿಕೆಗಳಲ್ಲಿ ಮಾತನಾಡುತ್ತೇವೆ ಆದರೆ ಅವರ ಸಮಸ್ಯೆಗಳನ್ನು ಬಗೆ ಹರಿಸುವ ಕಾರ್ಯಕ್ಕೆ ನಾವು ಮಗ್ನರಾಗಬೇಕಿದೆ.ರೈತರಿಗೆ ಹಾಲಿನ ಧರ ನಿಗದಿಮಾಡಿರುವುದನ್ನು ಬಿಟ್ಟರೆ ಬೇರೆ ಬೆಳೆಗಳಿಗೆ ಇನ್ನೂ ಧರ ನಿಗದಿ ಮಾಡಿಲ್ಲ,ನಮ್ಮ ಸರ್ಕಾರ ಕೂಡಲೆ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇವೆ ಎಂದರು.

ಜನಸAಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಬರುವ ದಿನಗಳಲ್ಲಿ ಹೆಚ್ಚು ಆಹಾರ ಬೆಳೆಯುವ ಕಡೆ ರೈತರು ಆಧುನಿಕ ಕೃಷಿ ಪರಿಕರಗಳ ಬಗ್ಗೆ ಅಧ್ಯಾಯನ ಮಾಡಬೇಕು ಎಂದು ತಿಳಿಸಿದರು.

ರಾಂಪುರ ಶ್ರೀಮಠದ ಶಿವಕುಮಾರ ಹಾಲಸ್ವಾಮಿಜಿ,ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಪ್ರಭು ಸಾರಂಗ ದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ರಟ್ಟೆಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ಮಾತನಾಡಿ, ಯಾವುದದರೂ ಕಾರ್ಯ ಮಾಡಿದರೆ ಅದಕ್ಕೊಂದು ಫಲ ಬೇಕು,ಅದನ್ನು ನಾವು ಸ್ವೀಕಾರ ಮಾಡಬೇಕು.ಹಾಗಾಗಿ ಈ ಕೃಷಿ ಮೇಳಕ್ಕೆ ಆಗಮಿಸಿ ಕೃಷಿ ವಿಚಾರಗಳ ಲಾಭ ಪಡೆಯಬೇಕು ಎಂದರು.

ಮಾಜಿ ಶಾಸಕ ವೈ ಸಂಪAಗಿ,ಬಯಲುಸೀಮೆ ನಿಗಮ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ,ಮಾಜಿ ಕಾಡ ಅಧ್ಯಕ್ಷ ನಗರದ ಮಹಾದೇವಪ್ಪ,ಮಾತನಾಡಿದರು.

ಅನ್ನ ಸಂತರ್ಪಣೆ ; ಶುಕ್ರವಾರ ಬೆಳಗ್ಗೆಯಿಂದಲ್ಲೇ ಉಪಹಾರ,ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸರದಿಯಲ್ಲಿ ನಿಂತು ಊಟ ಉಪಹಾರ ಮಾಡುತ್ತಿದ್ದುದ್ದು ಕಂಡು ಬಂತು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ,ಎಚ್.ಎ.ಉಮಾಪತಿ,ರೈತ ಮುಖಂಡ ಹಿರೇಮಠದ ಬಸವರಾಜಪ್ಪ,ಗ್ಯಾರಂಟಿ ಅನುಷ್ಟಾನ ಸಮಿತಿಯ ಅಧ್ಯಕ್ಷ ಎಚ್.ಗದ್ದಿಗೇಶ್, ಪುರಸಭೆ ಮಾಜಿ ಸದಸ್ಯ ಹೊಸಕೇರಿ ಸುರೇಶ್,ಅನ್ನದಾನಯ್ಯ,ಪಂಚಾಕ್ಷರಯ್ಯ,ವೀರಣ್ಣ,ದಿಡಗುರು ಪಾಲಕ್ಷಪ್ಪ,ವಾಸಪ್ಪ,ಕುಮಾರಸ್ವಾಮಿ,ಶಾಂತ ಸುರೇಶ್,ದಾನಪ್ಪ,ಲಾವಣ್ಯ, ಮಧುಗೌಡ,ಹಾಗೂ ಇತರರು ಇದ್ದರು.

ಎಚ್‌ಎನ್‌ಎಲ್ ಕೃಷಿಮೇಳ ಫೆ ೨೭ ಚಿತ್ರ೧ ; ಹೊನ್ನಾಳಿ ಹಿರೇಕಲ್ಮಠದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಕೃಷಿ ಮೇಳವನ್ನು ಕಾಶಿ ಪೀಠದ ಜಗದ್ಗುರು ೧೦೦೮ ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು ಹಾಗೂ ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.ರಾಂಪುರ ಶ್ರೀಮಠದ ಶಿವಕುಮಾರ ಹಾಲಸ್ವಾಮಿಜಿ,ಶಾಸಕ ಯು.ಬಿ.ಬಣಕಾರ್,ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ,ಎಚ್.ಬಿ.ಮAಜಪ್ಪ,ಎಚ್.ಎ.ಉಮಾಪತಿ,ರೈತ ಮುಖಂಡ ಹಿರೇಮಠದ ಬಸವರಾಜಪ್ಪ,ಗ್ಯಾರಂಟಿ ಅನುಷ್ಟಾನ ಸಮಿತಿಯ ಅಧ್ಯಕ್ಷ ಎಚ್.ಗದ್ದಿಗೇಶ್, ಪುರಸಭೆ ಮಾಜಿ ಸದಸ್ಯ ಹೊಸಕೇರಿ, ಜಿ ವಿಜಯ್ ಕುಮಾರ್.. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ.. ಉಪಾಧ್ಯಕ್ಷರು

ಬಿ.ಸುರೇಶ್, ನಾಗರಾಜ ಕತ್ತಗೆ ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಶಿವಮೊಗ್ಗದ ಶ್ರೀಮತಿ ನಿರ್ಮಲಾ ಮಹೇಂದ್ರ ಭೂಪಾಳಂ ನಿಧನ.

Shimoga News ನಗರದ ವಾಣಿಜ್ಯೋದ್ಯಮ ಕುಟುಂಬದ ದಿವಂಗತ ಮಹೇಂದ್ರ ಭೂಪಾಳಂ ಅವರ...

Shimoga News ಖಾಸಗಿ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವುದು ಶ್ಲಾಘನೀಯ- ಸಂಸದ ರಾಜಶೇಖರ ಹಿಟ್ನಾಳ್.

Shimoga News ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ವಿಕಲಚೇತನರಿಗೆ...