Thursday, July 23, 2026
Thursday, July 23, 2026

Rotary Club Shivamogga ಸೇವಾ ಮನೋಭಾವ ಬೆಳೆಸುತ್ತಿರುವ ರೋಟರಿ ಸೇವೆ ಶ್ಲಾಘನೀಯ: ಓಂಗಣೇಶ್ ಉಪ್ಪುಂದ

Date:

Rotary Club Shivamogga ರೋಟರಿ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸುವ ಮೂಲಕ ವಿಶ್ವಾದ್ಯಂತ ಸೇವಾ ಕಾರ್ಯ ನಡೆಸುತ್ತಿದೆ ಎಂದು ನಟ ಓಂಗಣೇಶ್ ಉಪ್ಪುಂದ ಹೇಳಿದರು.

ಶಿವಮೊಗ್ಗ ನಗರದ ಕಾಸ್ಮೋ ಕ್ಲಬ್‌ನಲ್ಲಿ ರೋಟರಿ ಕ್ಲಬ್ ವಲಯ 10 ಮತ್ತು 11ರ ವತಿಯಿಂದ ಆಯೋಜಿಸಿದ್ದ ವಿಶ್ವ ತಿಳವಳಿಕೆ ಮತ್ತು ಶಾಂತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲರನ್ನು ಒಳಗೊಂಡು ಸೇವಾ ಮನೋಭಾವ ಬೆಳೆಸುವ ಕೆಲಸ ಮಾಡುತ್ತಿರುವ ರೋಟರಿ ಸೇವೆ ಶ್ಲಾಘನೀಯ ಎಂದು ತಿಳಿಸಿದರು.

ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಎಲ್ಲರೂ ಒಟ್ಟಾಗಿ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು, ರೋಟರಿ ಸದಸ್ಯರ ಸಂಖ್ಯೆ ಹೆಚ್ಚಿಸುವಲ್ಲಿ ಆದ್ಯತೆ ನೀಡಬೇಕು ಎಂದು ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಅಧ್ಯಕ್ಷ ಪ್ರಕಾಶ್ ಮೂರ್ತಿ ಮಾತನಾಡಿ, ರೋಟರಿ ಸದಸ್ಯರ ವಿಸ್ತರಣೆಗೆ ರೋಟರ‍್ಯಾಕ್ಟ್ ಕ್ಲಬ್‌ಗಳ ವಿಸ್ತರಣೆ ಬಹು ಮುಖ್ಯ. ರೋಟರಿ ವಿಶ್ವ ತಿಳುವಳಿಕೆ ಮತ್ತು ಶಾಂತಿ ದಿನದಂದು ಸಂಸ್ಕೃತಿ, ರಾಷ್ಟ್ರ ಮತ್ತು ನಂಬಿಕೆಗಳಾದ್ಯಂತ ಜನರನ್ನು ಸಂಪರ್ಕಿಸಿವ ಏಕತೆ ಮನೋಭಾವವನ್ನು ನಾವು ಆಚರಿಸುತ್ತೇವೆ ಎಂದು ಹೇಳಿದರು.

ನಿಜವಾದ ಶಾಂತಿ ಇತರರಿಗೆ ತಿಳುವಳಿಕೆ. ಸಹಾನುಭೂತಿ ಮತ್ತು ಸೇವೆಯಿಂದ ಪ್ರಾರಂಭವಾಗುತ್ತದೆ ಎಂದು ರೋಟರಿ ನಮಗೆ ನೆನಪಿಸುತ್ತದೆ. ಒಂದುಗೊಡಿ ಕೆಲಸ ಮಾಡುವ ಮೂಲಕ ಮತ್ತು ಸೇವೆಯನ್ನು ಹೆಚ್ಚಾಗಿ ಮಾಡುವ ಮೂಲಕ ನಾವು ಸ್ನೇಹದ ಸೇತುವೆಗಳನ್ನು ನಿರ್ಮಿಸಿ ಭವಿಷ್ಯದ ಪೀಳಿಗೆಗೆ ಹೆಚ್ಚು ಶಾಂತಿಯುತ ಮತ್ತು ಭರವಸೆಯ ಜಗತ್ತನ್ನು ರಚಿಸಬಹುದು ಎಂದು ತಿಳಿಸಿದರು.

Rotary Club Shivamogga ರೋಟರಿ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಲಕ್ಷ್ಮಣ್ ಗೌಡ, ತರಬೇತುದಾರ ನಾಗರಾಜ್, ಸುರೇಶ, ವಲಯ ಕಾರ್ಯದರ್ಶಿ ಮೋಹನ್, ಜೆ.ರಾಧಾಕೃಷ್ಣ, ಶಂಕರ್, ಜಗದೀಶ ಸರ್ಜಾ, ರಂಗರಾಜನ್, ಕಿರಣಕುಮಾರ್, ಚಂದ್ರಶೇಖರ್, ಪ್ರಕಾಶ್ ಜಿ.ಎನ್., ಕಾರ್ಯದರ್ಶಿ ರಶ್ಮಿ, ಇವೆಂಟ್ ಕಾರ್ಯದರ್ಶಿ ಮಂಜುಳಾ ರಾಜು, ರೋಟರಿ ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

K. J.George ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯ ಹೋಟೆಲ್ ಗಳು, ಆತಿಥ್ಯ ಕೇಂದ್ರಗಳು ಹಂತಹಂತವಾಗಿ ಉನ್ನತೀಕರಣ : ಸಚಿವ ಕೆ.ಜೆ.ಜಾರ್ಜ್

K.J. George ರಾಜ್ಯದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಉದ್ದೇಶದಿಂದ,...

Kuvempu University ಕುವೆಂಪು ವಿವಿಯ ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Kuvempu University ಕುವೆಂಪು ವಿಶ್ವವಿದ್ಯಾಲಯವು 2026-27ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ,...