Thursday, February 26, 2026
Thursday, February 26, 2026

D.K. Shivakumar ಹಿಮೋಫೀಲಿಯ ಪೀಡಿತ ಒಬ್ಬ ರೋಗಿಗೆ ವರ್ಷಕ್ಕೆ ರೂ 5 ಲಕ್ಷ ಖರ್ಚಾಗುತ್ತದೆ : ಡೀಸಿಎಂ ಡಿ.ಕೆ.ಶಿವಕುಮಾರ್

Date:

D.K. Shivakumar ಹಿಮೋಫಿಲಿಯಾ ಅಪರೂಪದ ಕಾಯಿಲೆ. ಹಿಮೋಫಿಲಿಯಾ ರೋಗಿಗಳಿಗೆ ತಿಂಗಳಿಗೆ ಒಂದು ಇಂಜೆಕ್ಷನ್‌ ಕೊಡಬೇಕು, ವರ್ಷಕ್ಕೆ ಒಬ್ಬ ರೋಗಿಗೆ 5 ಲಕ್ಷ ರೂ. ಖರ್ಚಾಗುತ್ತದೆ. ಜನರಿಗೆ ಅನುಕೂಲವಾಗಲಿ ಎಂದು ಹಿಮೋಫಿಲಿಯಾ ರೋಗ ನಿರೋಧಕ ಚಿಕಿತ್ಸೆ ನೀಡಲು ನಮ್ಮ ಸರ್ಕಾರ ಮುಂದೆ ಬಂದಿದೆ. ಇಡೀ ದೇಶದಲ್ಲಿ ಯಾವ ಸರ್ಕಾರವೂ ಮಾಡದ ಕೆಲಸವನ್ನೂ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಹಿಮೋಫೀಲಿಯ ರೋಗಿಗಳಿಗೆ ವಿಶೇಷವಾಗಿ ಇರುವ ಅಂಬ್ಯುಲೆನ್ಸ್ ವಾಹನಗಳನ್ನ ಲೋಕಾರ್ಪಣಗೊಳಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.

ಹಿಮೋಫಿಲಿಯಾದಿಂದ ಬಳಲುತ್ತಿರುವ ಮಕ್ಕಳು ಹಾಗೂ ದೊಡ್ಡವರು ಯಾರೂ ಕೂಡ ವಿಶ್ವಾಸವನ್ನು ಕಳೆದುಕೊಳ್ಳಬಾರದು. ಈ ಕಾಯಿಲೆ ಬಂದ ಕೂಡಲೇ ನಮ್ಮ ಕೈಯಿಂದ ಏನೂ ಮಾಡಲು ಆಗುವುದಿಲ್ಲ ಎಂಬ ಭಾವನೆ ಬರಬಾರದು. ಎಷ್ಟೇ ಖರ್ಚಾದರೂ ಮಕ್ಕಳ ಜೊತೆಗೆ ಹಾಗೂ ಪೋಷಕರ ಜೊತೆಗೆ ಸರ್ಕಾರ ಇದೆ. ನಿಮ್ಮ ಬದುಕಿಗೆ ಹೊಸ ಶಕ್ತಿ ತುಂಬುವುದೇ ಸರ್ಕಾರದ ಉದ್ದೇಶವಾಗಿದೆ.

D.K. Shivakumar ನಮ್ಮ ಆರೋಗ್ಯ ಇಲಾಖೆ ಇಡೀ ದೇಶಕ್ಕೆ ಮಾದರಿಯಾಗಿದೆ. ಹಿಮೋಫಿಲಿಯಾ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗುವ ಮೂಲಕ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದೆ ಎಂದು ಉಪಮುಖ್ಯಮಂತ್ರಿಗಳು ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಕುರಿ/ ಮೇಕೆ ಘಟಕಕ್ಕೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ವಿಶೇಷ...

Akashavani Bhadravati ಆಕಾಶವಾಣಿ ಭದ್ರಾವತಿ ಈಗ ಎಫ್.ಎಮ್. ತರಂಗಾಂತರದಲ್ಲಿ ಎಂಟು ಜಿಲ್ಲೆಗಳ ಪ್ರಸಾರ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ: ಕೇಂದ್ರ ಸಚಿವ ಎಲ್.ಮುರುಗನ್

Akashavani Bhadravati ರೇಡಿಯೋ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಸಂವಹನ ಮಾಧ್ಯಮವಾಗಿದ್ದು ನೂತನವಾಗಿ...

CM Siddharamaiah ಸರ್ಕಾರಿ ನೇಮಕಾತಿ ಬಗ್ಗೆ ಈ ಸಲದ ಬಜೆಟ್ ನಲ್ಲಿ ತಿಳಿಸಲಾಗುವುದು: ಸಿದ್ಧರಾಮಯ್ಯ

CM Siddharamaiah ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ, ಯಾವುದೇ ಕೆಲಸವನ್ನು ಮಾಡದೇ,...

Rotary Club Shivamogga ಸೇವಾ ಮನೋಭಾವ ಬೆಳೆಸುತ್ತಿರುವ ರೋಟರಿ ಸೇವೆ ಶ್ಲಾಘನೀಯ: ಓಂಗಣೇಶ್ ಉಪ್ಪುಂದ

Rotary Club Shivamogga ರೋಟರಿ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸುವ ಮೂಲಕ...