Thursday, February 26, 2026
Thursday, February 26, 2026

Krishna Bhairegowda ಸಂಪೂರ್ಣ – ಸರಳ ಏಕೀಕೃತ ಭೂ- ನಿರ್ವಹಣಾ ವ್ಯವಸ್ಥೆಗೆ ಸರ್ಕಾರದ ದಿಟ್ಟ ಹೆಜ್ಜೆ- ಸಚಿವ ಕೃಷ್ಣ ಭೈರೇಗೌಡ

Date:

Krishna Bhairegowda ಭೂಮಿಗೆ ಸಂಬಂಧಿಸಿದ ಸರ್ಕಾರದ ಎಲ್ಲಾ ಸೇವೆಗಳನ್ನು ಒಂದೇ ವ್ಯವಸ್ಥೆಯ ಅಡಿಯಲ್ಲಿ ತರುವ ಮಹಾತ್ವಕಾಂಕ್ಷಿ ULMS (Unified Land Management System) ಯೋಜನೆಯ ಅನುಷ್ಠಾನಕ್ಕೆ ಸರ್ಕಾರದ ದೃಢ ಹೆಜ್ಜೆಯನ್ನು ಇಟ್ಟಿದೆ. ಈ ಕುರಿತಂತೆ ಎಲ್ಲಾಸಂಬಂಧಿಸಿದ (ಕಂದಾಯ, ನಗರಾಭಿವೃದ್ಧಿ, ನೋಂದಣಿ, ಲೋಕೋಪಯೋಗಿ, ನೀರಾವರಿ, ವಸತಿ, ಬೃಹತ್‌ ಮತ್ತು ಮಧ್ಯಮಕೈಗಾರಿಕಾ ಹಾಗೂ ಇತ್ಯಾದಿ ಇಲಾಖೆಗಳ) ಹಿರಿಯ ಅಧಿಕಾರಿಗಳ ಸಭೆಯನ್ನು ಮಾನ್ಯ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ULMS ಗಣಕೀಕೃತ ಏಕ ವ್ಯವಸ್ಥೆಯಡಿ ಸರ್ವೆ, ಭೂ ಪರಿವರ್ತನೆ, ಬಡಾವಣೆ ಪ್ಲಾನ್‌ ಮಂಜೂರಿ, ಮನೆ ಪ್ಲಾನ್‌ ಮಂಜೂರಿ, ನಿವೇಶನ ಮಾರಾಟ, ಇ-ಖಾತಾ ಸೃಜನೆ (ಸ್ಥಳೀಯಸಂಸ್ಥೆಯಲ್ಲಿ), ಆಸ್ತಿ ತೆರಿಗೆ ಸಂಗ್ರಹ, ಭೂಸ್ವಾಧೀನ ಹಾಗೂ ಇನ್ನೂ ಅನೇಕ ಭೂ ಸಂಬಂಧಿತ ಚಟುವಟಿಕೆಗಳನ್ನು ಸರಾಗ, ಸುಲಭ, ಪಾರದರ್ಶಕ ಮತ್ತು ಜನಸ್ನೇಹಿಯಾದ ಒಂದೇ ಆನ್‌ಲೈನ್‌ ವ್ಯವಸ್ಥೆಗೆತರುವ ಯೋಜನೆಯಾಗಿದೆ. ಇದರಿಂದ ಜನರಿಗೆ ಬೇರೆ ಬೇರೆ ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ ಭೂಮಿಗೆ ಸಂಬಂಧಿಸಿದ ಸೇವೆಗಳನ್ನು ಸರಳವಾಗಿ ಪಡೆದುಕೊಳ್ಳಬಹುದಾದ ಅತ್ಯಂತ ಪ್ರಮುಖ ಆಡಳಿತ ಸುಧಾರಣಾ ಕ್ರಮವಾಗಿದೆ.

ULMS ಮುಖಾಂತರ ಭೂ ಮಾಲಿಕತ್ವದ ಮೂಲ ದಾಖಲೆಗಳನ್ನು ದೃಢಪಡಿಸುವುದು, ಸರ್ವೆ ನಕ್ಷೆಯನ್ನು ಡಿಜಿಟಸೂಚಿಸಲಾಗಿದೆ ದಲ್ಲಿ ಒದಗಿಸುವುದು, ಭೂ ಪರಿವರ್ತನೆ, ಬಡಾವಣೆಗಳಅನುಮೋದನೆ, ಕಟ್ಟಡ ನಕ್ಷೆ ಅನುಮೋದನೆ, ಖಾತೆ ಪಡೆಯುವುದು ಇತ್ಯಾದಿ ಪ್ರಕ್ರಿಯೆಗಳನ್ನು ಏಕೀಕೃತ ನೇರ ಆನ್‌ಲೈನ್‌ ವ್ಯವಸ್ಥೆಯಡಿಯಲ್ಲಿ ತರಲಾಗುವುದು. ಇದರಿಂದ ಭೂಮಿ ಬಡಾವಣೆ ನಿವೇಶನದ ದಾಖಲೆಗಳು ಒಂದೇ ಕಡೆ ದೊರೆಯುವಂತಾಗುತ್ತದೆ. ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸರಾಗವಾಗಿ, ವಿವಿಧಕಛೇರಿ ಇಲಾಖೆಗಳಿಗೆ ಆನ್‌ಲೈನ್‌ನಲ್ಲಿ ಪ್ರತ್ಯೇಕ ಅರ್ಜಿಗಳನ್ನುಸಲ್ಲಿಸುವ ಅವಶ್ಯಕತೆ ಇಲ್ಲದೆ, ಸ್ವಯಂಚಾಲಿತವಾಗಿ ಕಡತ ಸಾಗುವವ್ಯವಸ್ಥೆ ಇದು. ಕಾಲಮಿತಿಯೊಳಗೆ ತೀರ್ಮಾನಿಸುವ ವ್ಯವಸ್ಥೆಯಿರುವುದರಿಂದ ವಿಳಂಬಕ್ಕೆ ಕಡಿವಾಣ ಬೀಳಲಿದೆ. ಈ ವ್ಯವಸ್ಥೆಯಿಂದ ನಕಲಿ/ಅಕ್ರಮ ಭೂ ವ್ಯವಹಾರಗಳಿಗೆ ಕಡಿವಾಣಬೀಳಲಿದೆ. ಹಾಗೆಯೇ ಇದು ಅಮಾಯಕರಿಗೆ ವಂಚನೆಯಿಂದ ರಕ್ಷಣೆ ನೀಡಲಿದೆ. ಇದರಿಂದ ಭೂ ವ್ಯವಹಾರ, ಮಾಲಿಕತ್ವದ ಗೊಂದಲಗೋಜುಗಳಿಗೆ ಮುಕ್ತಿ ನೀಡಿ ವ್ಯಾಜ್ಯಗಳನ್ನು ತಗ್ಗಿಸಿ, ಭೂಮಾಲಿಕತ್ವದ ಖಚಿತತೆ ಸಾಧಿಸಬಹುದು.

ಹಾಲಿ ವ್ಯವಸ್ಥೆಯಲ್ಲಿ ದಾಖಲೆಗಳ ಖಚಿತತೆ, ದೃಢೀಕರಣ ಸಮರ್ಪಕವಾಗಿ ಆಗುತ್ತಿಲ್ಲ ಮತ್ತು ಕಾಗದದಲ್ಲಿ ದೃಢೀಕರಣ ಮಾಡುವ ಪದ್ಧತಿ ನೈಜತೆಯನ್ನು ಖಾತ್ರಿಪಡಿಸುತ್ತಿಲ್ಲ. ಆನ್‌ಲೈನ್‌ ವ್ಯವಸ್ಥೆಯಲ್ಲಿ ಮೂಲ ದಾಖಲೆಗಳನ್ನು ನೇರವಾಗಿ ಅಧಿಕೃತ ಅಧಿಕಾರಿಯಿಂದ ಪಡೆಯಲಾಗುವುದು. ಬಲ್ಲ/ನಂಬಿಕಾರ್ಹ ಮೂಲ/ಅಧಿಕಾರಿ/ಪ್ರಾಧಿಕಾರದ ಮೂಲಕ ದಾಖಲೆ ಪಡೆಯಲಾಗುವುದರಿಂದ ಕಾಗದಗಳ ನೈಜತೆಯ ಅನುಮಾನಕ್ಕೆ ಮುಂದೆಅವಕಾಶವಿರುವುದಿಲ್ಲ. ಸರ್ವೆ ನಕ್ಷೆಯನ್ನು ಸಂಬಂಧಿಸಿದ ಅಧಿಕಾರಿನೇರವಾಗಿ ಒದಗಿಸಬೇಕಾಗಿರುತ್ತದೆ. ಇದರಿಂದ ಸ್ಪಷ್ಟ ಜವಾಬ್ದಾರಿ ನಿಗದಿಯಾಗುವುದರಿಂದ ತಪ್ಪುಗಳಿಗೆ ಕಡಿವಾಣ ಬೀಳಲಿದೆ. ಮೂಲ ದಾಖಲೆಗಳ ಅಸಲೀತನ ಖಾತರಿಪಡಿಸಿಕೊಂಡರೆ ಮುಂದೆ ಆಗಬಹುದಾದ ಅನೇಕ ತಕರಾರು, ವ್ಯಾಜ್ಯಗಳನ್ನು ತಪ್ಪಿಸಿನೆಮ್ಮದಿಯ ಮಾಲಿಕತ್ವ ನೀಡಬಹುದು.

Krishna Bhairegowda ದಾಖಲೆಗಳು ದೃಢೀಕೃತವಾದರೆ, ನಕಲಿ/ಅಕ್ರಮ/ವ್ಯಾಜ್ಯಗಳು ತಗ್ಗಿದರೆ ಭ್ರಷ್ಟಾಚಾರವೂ ತಗ್ಗುತ್ತದೆ. ಸರಾಗವಾಗಿ ಭೂ ವ್ಯವಹಾರ ನಡೆಸಲುಇದು ಸಹಕಾರಿಯಾದ ಹೆಜ್ಜೆ. ಇದರಿಂದ ಭೂಮಿಯ ನೈಜ ಆರ್ಥಿಕಮೌಲ್ಯ ಮತ್ತು ಆದಾಯ ಹೆಚ್ಚಾಗುತ್ತದೆ. ಇತರೆ ಆರ್ಥಿಕಚಟುವಟಿಕೆಗಳಿಗೂ ಪ್ರೋತ್ಸಾಹವಾಗುತ್ತದೆ ಹಾಗೂ ಆಡಳಿತ ಸರಳೀಕರಣವಾಗುತ್ತದೆ. ಒಂದೇ ಕಡೆ ಆಸ್ತಿ ವ್ಯವಹಾರ/ಖರೀದಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಲಭ್ಯವಾಗುವುದರಿಂದ ದಾಖಲೆ ಪರಿಶೀಲಿಸುವುದು/ದೃಢಪಡಿಸಿಕೊಳ್ಳುವುದು ಸುಲಲಿತವಾಗಲಿದೆ. ಈ ವ್ಯವಸ್ಥೆಯ ಮುಖಾಂತರ ಮುಂದಿನ ಪ್ರತಿಯೊಂದು ಭೂ ಆಸ್ತಿಗೆ ತನ್ನದೇ ಆದಂತ ಏಕಮಾತ್ರ ಭೂಮಿ ಗುರುತಿನ ಸಂಖ್ಯೆ (ULPIN) ಅಥವಾ ಭೂ ಆಧಾರ್‌ ನೀಡುವುದರಿಂದ ಸಂಪೂರ್ಣ ಪಾರದರ್ಶಕತೆ, ಖಚಿತತೆ, ಮಾಲಿಕತ್ವದ ಗ್ಯಾರಂಟಿ ನೀಡಬಹುದು.

ULMS ಭೂಮಿ ವ್ಯವಹಾರ, ನಕ್ಷೆ ಮಂಜೂರಾತಿ ಇಂತಹ ಚಟುವಟಿಕೆಗಳಿಗೂ ಮೀರಿದ ಹಲವು ಹೆಜ್ಜೆ ಮುಂದೆ ಹೋಗಿ ಭೂಸ್ವಾಧೀನ, ಆಸ್ತಿ ತೆರಿಗೆ, ಮಾಸ್ಟರ್‌ ಪ್ಲಾನ್‌, ನಗರಾಭಿವೃದ್ಧಿ ಪ್ರಾಧಿಕಾರಗಳ ನಿವೇಶನ ಹಂಚಿಕೆ ಹೀಗೆ ಅನೇಕ ಸೇವೆ/ಚಟುವಟಿಕೆಗಳನ್ನು ಏಕ ವ್ಯವಸ್ಥೆಗೆ ತರಲಿದೆ. ಇದರಿಂದ ಭೂಸ್ವಾಧೀನ ತ್ವರಿತಗೊಳ್ಳಲಿದೆ ಮತ್ತು ಈ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ವವ್ಯವಸ್ಥಿತ ಅಕ್ರಮಗಳಿಗೂ ಕಡಿವಾಣ ಬೀಳಲಿದೆ. ಆಸ್ತಿ ತೆರಿಗೆವ್ಯವಸ್ಥೆಯಲ್ಲಿರುವ ತಾರತಮ್ಯಗಳು ಅಂದರೆ ಅಸ್ತಿ ತೆರಿಗೆ ವಂಚನೆ, ಕಡಿಮೆ ಪಾವತಿಸುವುದು ಇವುಗಳನ್ನು ಸರಿಪಡಿಸಿ, ಗ್ರಾಮಪಂಚಾಯ್ತಿ ಮತ್ತು ನಗರಾಡಳಿತ ಸಂಸ್ಥೆಗಳನ್ನು ಆರ್ಥಿಕ ವಾಗಿಬಲಪಡಿಸುವುದು ಸಾಧ್ಯವಾಗಲಿದೆ.
ಇಂದು ಅನೇಕರಿಗೆ ಭೂ ಮಾಲಿಕತ್ವದ ವ್ಯವಸ್ಥೆ ಆರ್ಥಿಕ ಶಕ್ತಿಮತ್ತು ನೆಮ್ಮದಿ ನೀಡುವುದರ ಬದಲಿಗೆ ಗೊಂದಲ, ಅನಿಶ್ಚಿತತೆ, ವ್ಯಾಜ್ಯಗಳು ಗೂಡಾಗಿ ಪರಿಣಮಿಸಿದೆ. ಹಾಲಿ ವ್ಯವಸ್ಥೆ ಆಸ್ತಿಗಳಆರ್ಥಿಕ ಮೌಲ್ಯ, ಆದಾಯ, ಉತ್ಪಾದನೆಯನ್ನು ತಗ್ಗಿಸುತ್ತಿದೆ.ಜನಗಳಿಗೆ ನೆಮ್ಮದಿಯಿಲ್ಲ ಮತ್ತು ಸಮಾಜಕ್ಕೆ ಲಾಭವಿಲ್ಲ.

ದೇಶದ ನ್ಯಾಯಾಲಯಗಳಲ್ಲಿರುವ ಶೇ. 50ಕ್ಕೂ ಹೆಚ್ಚು ವ್ಯಾಜ್ಯಗಳು ಭೂಮಿ/ಮಾಲಿಕತ್ವ ಸಂಬಂಧಿಸಿದವುಗಳು. ಈ ಭೂವ್ಯಾಜ್ಯಗಳಿಂದ ಮತ್ತು ಅನಿಶ್ಚಿತತೆಯಿಂದ ನಾವು ಭೂ ಗ್ಯಾರಂಟಿಯಡಿಗೆ ಸಾಗಲು ULMS ಪರಿಣಾಮಕಾರಿ ಮಾರ್ಗವಾಗಲಿದೆ. ಇದರಿಂದ ಜನಗಳ ಕೇಂದ್ರಿತ, ಜನಪರ ಆಡಳಿತ ಸುಧಾರಣೆ ಸಾಧ್ಯ. ಈ ಏಕೀಕೃತ ವ್ಯವಸ್ಥೆಯನ್ನು ಸಂಬಂಧಿಸಿದ ಎಲ್ಲಾ ಇಲಾಖೆಗಳು ಮುಂದಿನ 6 ತಿಂಗಳುಗಳಲ್ಲಿ ಅನುಷ್ಠಾನಕ್ಕೆ ತರಬೇಕೆಂದು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡರ ಕಾರ್ಯಾಲಯ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಕುರಿ/ ಮೇಕೆ ಘಟಕಕ್ಕೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ವಿಶೇಷ...

Akashavani Bhadravati ಆಕಾಶವಾಣಿ ಭದ್ರಾವತಿ ಈಗ ಎಫ್.ಎಮ್. ತರಂಗಾಂತರದಲ್ಲಿ ಎಂಟು ಜಿಲ್ಲೆಗಳ ಪ್ರಸಾರ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ: ಕೇಂದ್ರ ಸಚಿವ ಎಲ್.ಮುರುಗನ್

Akashavani Bhadravati ರೇಡಿಯೋ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಸಂವಹನ ಮಾಧ್ಯಮವಾಗಿದ್ದು ನೂತನವಾಗಿ...

CM Siddharamaiah ಸರ್ಕಾರಿ ನೇಮಕಾತಿ ಬಗ್ಗೆ ಈ ಸಲದ ಬಜೆಟ್ ನಲ್ಲಿ ತಿಳಿಸಲಾಗುವುದು: ಸಿದ್ಧರಾಮಯ್ಯ

CM Siddharamaiah ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ, ಯಾವುದೇ ಕೆಲಸವನ್ನು ಮಾಡದೇ,...

Rotary Club Shivamogga ಸೇವಾ ಮನೋಭಾವ ಬೆಳೆಸುತ್ತಿರುವ ರೋಟರಿ ಸೇವೆ ಶ್ಲಾಘನೀಯ: ಓಂಗಣೇಶ್ ಉಪ್ಪುಂದ

Rotary Club Shivamogga ರೋಟರಿ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸುವ ಮೂಲಕ...