Friday, June 5, 2026
Friday, June 5, 2026

S.N.Channabasappa ನಗರದೇವತೆಯ ಜಾತ್ರೆಯನ್ನು ಅಚ್ಚುಕಟ್ಟಾಗಿ ಎಲ್ಲರ ಸಹಕಾರದಿಂದ ಆಚರಿಸೋಣ-ಶಾಸಕ ಎಸ್.ಎನ್‌.ಚನ್ನಬಸಪ್ಪ

Date:

​​S.N.Channabasappa ನಮ್ಮ ಶಿವಮೊಗ್ಗ ನಗರದ ಅಧಿದೇವತೆ, ಶ್ರೀ ಕೋಟೆ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಅತ್ಯಂತ ಸನಿಹದಲ್ಲಿದ್ದು, ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಈ ವೈಭವದ ಜಾತ್ರೆಯನ್ನು ಅಚ್ಚುಕಟ್ಟಾಗಿ ಮತ್ತು ಯಶಸ್ವಿಯಾಗಿ ನಡೆಸೋಣ ಎಂದು ಶಾಸಕ ಎಸ್.ಎನ್ ಚನ್ನಬಸಪ್ಪ ಕರೆನೀಡಿದರು.

ಜಾತ್ರೆ ನಡೆಸುವ ನಿಟ್ಟಿನಲ್ಲಿ ಇಂದು ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಸಿದ್ಧತಾ ಸಭೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್ .ಎನ್. ಚನ್ನಬಸಪ್ಪ ಪಾಲ್ಗೊಂಡಿದ್ದರು.

​ಇದೇ ಸಂದರ್ಭದಲ್ಲಿ, ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತಾದಿಗಳ ಕುಡಿಯುವ ನೀರಿನ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ನೂತನ ಬೋರ್‌ವೆಲ್ ಅನ್ನು ಉದ್ಘಾಟಿಸಿದರು.

ಭಕ್ತರಿಗೆ ಯಾವುದೇ ರೀತಿಯ ಮೂಲಸೌಕರ್ಯದ ಕೊರತೆಯಾಗದಂತೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲು ಸಮಿತಿಯೊಂದಿಗೆ ಶಾಸಕ ಚೆನ್ನಿ ಸೂಚಿಸಿದರು.

S.N.Channabasappa ಈ​ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿಯಾದ ಶ್ರೀಮತಿ ಶಾರದಾ ಪೂರ್ಯನಾಯ್ಕ್, ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಶ್ರೀ ಎಸ್.ಕೆ. ಮರಿಯಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎನ್. ಮಂಜುನಾಥ್, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಶ್ರೀ ಪ್ರಭಾಕರ್ ಪಿ, ಪ್ರಮುಖರಾದ ಶ್ರೀ ಜ್ಞಾನೇಶ್ವರ್ ಸೇರಿದಂತೆ ಸಮಿತಿಯ ಗೌರವಾನ್ವಿತ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga Malnad “ನನ್ನ ಆಯ್ಕೆ- ಪ್ಲಾಸ್ಟಿಕ್ ಮುಕ್ತ ಭವಿಷ್ಯ ” ಪರಿಸರ ದಿನದ ವಿಶೇಷಜೆಸಿಐ ಸಂಸ್ಥೆಯಿಂದ” ಸಸ್ಟೈನಬಲ್ ಸಿಪ್ಪಿಂಗ್” ಕಾರ್ಯಕ್ರಮ.

JCI Shivamogga Malnad ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಪ್ಲಾಸ್ಟಿಕ್...

JCI Shivamogga ಮಕ್ಕಳಿಗೆ ಹಣ್ಣುಗಳ ಸೇವನೆ ಬಗ್ಗೆ ಅರಿವು ಮೂಡಿಸಿ- ಉದಯ್ ಕಡಂಬ

JCI Shivamogga ಮಕ್ಕಳಿಗೆ ಹಣ್ಣುಗಳ ಸೇವನೆಯ ಮಹತ್ವವನ್ನು ಪರಿಚಯಿಸಬೇಕು ಎಂದು ಉದ್ಯಮಿ...

Klive Special Article ಪರಿಸರ ದಿನ: ನಮ್ಮೊಳಗೇ ಹಲವು ಬದಲಾವಣೆ ಬೇಕು. ಲೇಖನ:ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ

Klive Special Article ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.ಪರಿಸರ ಪ್ರಕೃತಿದತ್ತವಾದದ್ದು,ಅದನ್ನು...