Thursday, February 19, 2026
Thursday, February 19, 2026

Karnataka Badminton Association ಅಖಿಲ ಭಾರತ ಬ್ಯಾಡ್ಮಿಂಟನ್ ಪಂದ್ಯಾವಳಿ. ಶಿವಮೊಗ್ಗದ ಪವನ್ – ಪುನೀತ್ ಚಾಂಪಿಯನ್ಸ್

Date:

Karnataka Badminton Association ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ ಬೆಂಗಳೂರಿನ ವಸಂತ ನಗರದಲ್ಲಿ 8 ದಿನ ನಡೆದ ಯೋನೆಕ್ಸ್-ಸನ್‌ರೈಸ್ ಅಖಿಲ ಭಾರತ ಸೀನಿಯರ್-ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕರ್ನಾಟಕದ ಪವನ್ ಎಸ್ ಮತ್ತು ಪುನೀತ್ ಎಸ್. ಪುರುಷರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಪುರುಷರ ಡಬಲ್ಸ್ ವಿಭಾಗದಲ್ಲಿ ಕರ್ನಾಟಕದ ಪವನ್ ಎಸ್ ಮತ್ತು ಪುನಿತ್ ಎಸ್ ಜೋಡಿಯು ಕಮಲ್ ಕ್ರಿಶ್-ನಾನ್ ಎಸ್ ಮತ್ತು ಶಂಕರ್ ಪ್ರಸಾದ್ ಉದಯಕುಮಾರ್ ಜೋಡಿಯನ್ನು 21-16, 21-13
ಅಂತರದಿಂದ ಸೋಲಿಸಿ ಅಗ್ರಸ್ಥಾನ ಪಡೆದುಕೊಂಡರು.
ರಾಷ್ಟ್ರೀಯ ಸೀನಿಯರ್ಸ್ ಡಬಲ್ಸ್ ರ‌್ಯಾಂಕಿಂಗ್ ಷಟಲ್ ಬ್ಯಾಡ್ಮಿಂಟನ್ ನಲ್ಲಿ ಭಾಗವಹಿಸಿ, ಚಾಕ ಚಕ್ಕತೆಯ ಆಟದ ಪ್ರದರ್ಶನ ನೀಡಿ, ಡಬಲ್ಸ್ ನಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು.ಹಾಗೂ ಅತ್ಯಾಕರ್ಷಕ ಪಾರಿತೋಷಕ ಮತ್ತು ಬಂಗಾರದ ಪದಕವನ್ನು ಹಾಗೂ 1ಲಕ್ಷದ ಎರಡು ಸಾವಿರದ ಆರುನೂರು ರೂಗಳ ನಗದು ಬಹುಮಾನ ಪಡೆದು ಜಿಲ್ಲೆ ಮತ್ತು ರಾಜ್ಯಕ್ಕೆ ಹಾಗೂ ಸಂಸ್ಥೆಗೆ ಕೀರ್ತಿ ತಂದು ಕೊಟ್ಟಿರುತ್ತಾರೆ.
ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಅವಳಿ ಸಹೋದರರು,10ನೇ ತರಗತಿಯಲ್ಲಿ ವ್ಯಾಸಂಗಮಾಡುತ್ತಿದ್ದು, ಆಟದ ಜೊತೆಗೆ ಓದಿನಲ್ಲಿಯೂ ಮುಂದಿದ್ದಾರೆ. ಇವರಿಗೆ ಇನ್ನೂ 16 ವರ್ಷ ಮಾತ್ರ.ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಷಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಇವರು ಸಾಧಿಸಿದ ಶ್ರಮ ಅಪಾರ.
ಈ ಪ್ರತಿಭೆಗಳು ಶಿವಮೊಗ್ಗದ ಪುರಲೆಯ ವೆಂಕಟೇಶ ನಗರದಲ್ಲಿ ವಾಸವಿರುವ ಸುರೇಶ್ ಮತ್ತು ಶಕುಂತಲಾ ದಂಪತಿಗಳ ಪುತ್ರ ರಾಗಿರುವ ಅವಳಿ ಸಹೋದರರು ಪ್ರಾಥಮಿಕ ಹಂತದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.ಕ್ರೀಡಾ ರಂಗಕ್ಕೆ ಕಾಲಿಟ್ಟು ಹೆಚ್ಚು- ಕಡಿಮೆ 5 ವರ್ಷಗಳ ಈ ಅವಧಿಯಲ್ಲಿ ಅನೇಕ ಕ್ರೀಡಾಸ್ಪರ್ಧೆಳಲ್ಲಿ ಭಾಗವಹಿಸಿದ್ದು,ಹತ್ತು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹೀಗೆ ವಿವಿಧ ಷಟಲ್ ಬ್ಯಾಡ್ ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಯಶಸ್ಸು ಸಾಧಿಸುತ್ತಾ ಬಂದಿರುವ ಈ ಪ್ರತಿಭಾನ್ವಿತರು ಅಂತರಾಷ್ಟ್ರೀಯ ಕ್ರೀಡಾಪಟುವಾಗುವ ಆಸೆಯಿದೆ.
Karnataka Badminton Association ಅನೇಕ ರಾಜ್ಯ, ರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ, ಬಹುಮಾನಗಳನ್ನು ಸಂಪಾದಿಸಿರುವ ಅವಳಿ ಸಹೋದರರು ಕ್ರೀಡೆಯಲ್ಲಿ ತಮ್ಮ ತಪ್ಪು ಒಪ್ಪುಗಳನ್ನು ತಿದ್ದಿ ಸೂಕ್ತ ಮಾರ್ಗದರ್ಶನ ನೀಡಿದ ಬೆಂಗಳೂರಿನ ಸೆಲೆನೈಟ್ ಸ್ಪೋರ್ಟ್ಸ್ ಅಕಾಡೆಮಿಯ ತರಬೇತುದಾರ ಶ್ರೀ ಮಧುಸೂಧನ್ ಅವರನ್ನು ಮತ್ತು ತನ್ನೆಲ್ಲ ಸಾಧನೆಗೆ ಬೆನ್ನು ತಟ್ಟಿದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ನಾದಮಯಾನಂದನಾಥ ಸ್ವಾಮೀಜಿ, ಪೋಷಕರು, ಬಿಜಿಎಸ್ ಶಾಲಾ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕ ವೃಂದದವರು ಸೂಕ್ತ ಮಾರ್ಗದರ್ಶನವನ್ನ ನೆನೆಯುತ್ತಾರೆ.
ಇದಲ್ಲದೇ ತಮ್ಮೆಲ್ಲಾ ಈ ಸಾಧನೆಗೆ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಸೂಕ್ತ ಹಾಗೂ ಸಕಾಲಿಕ ಮಾರ್ಗದರ್ಶನ, ಪ್ರೋತ್ಸಾಹ ತಮ್ಮಗಳ ಕ್ರೀಡಾಬದುಕಿಗೆ ದಾರಿ ತೋರಿಸಿತು ಎಂದು ಪವನ್, ಪುನೀತ್ ಪೂಜ್ಯರನ್ನು ಸ್ಮರಿಸುತ್ತಾರೆ.
ಭವಿಷ್ಯದಲ್ಲಿ ಭಾರತ ತಂಡದಲ್ಲಿ ಸ್ಥಾನಗಳಿಸಿ,ಉತ್ತಮ ಆಟಗಾರ ರಾಗಬೇಕು. ಒಲಂಪಿಕ್ಸ್ ನಂತಹ ಕ್ರೀಡಾಕೂಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸುವುದು ನಮ್ಮ ಮುಂದಿನ ಮಹಾನ್ ಗುರಿ ಎನ್ನುವ ಅವಳಿ ಸಹೋದರರಿಗೆ ಗುಡ್ ಲಕ್ ಹೇಳೋಣವೇ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Kannada and Culture ಫೆ.20. ಕವಿ ಸರ್ವಜ್ಞ ಜಯಂತಿ ಆಚರಣೆಗೆ ಜಿಲ್ಲಾಡಳಿತ ಸಜ್ಜು

Department of Kannada and Culture ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ...

Water Supply and Drainage Board ನಿರುದ್ಯೋಗಿಗಳಿಗೆ ಸಿಹಿಸುದ್ದಿ!. ...

Water Supply and Drainage Board ಶಿವಮೊಗ್ಗ ನಗರ ನೀರು ಸರಬರಾಜು...

State Legal Services Authority ಡಾ.ಹರೀಶ್ ದೇಲಂತ ಬೆಟ್ಟು, ಈಗ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರೇತರ ಸದಸ್ಯರು

State Legal Services Authority ರಾಜ್ಯ ಕಾನೂನು ಸೇವೆಗಳ ಪಾಧಿಕಾರದ ಅಧಿಕಾರೇತರ...