Friday, July 24, 2026
Friday, July 24, 2026

Shivaganga Yoga Center ಹಿಂದೂಗಳ ಪವಿತ್ರ ಹಬ್ಬ, ಶಿವರಾತ್ರಿ- ಎಸ್.ರುದ್ರೇಗೌಡ

Date:

Shivaganga Yoga Center ಹಿಂದುಗಳ ಬಹಳ ವಿಶೇಷವಾದ ಪವಿತ್ರ ಹಬ್ಬ ಮಹಾಶಿವರಾತ್ರಿ. ಈ ಪವಿತ್ರ ದಿನ ಮಾಡುವ ಎಲ್ಲಾ ಕೆಲಸಗಳು ಶಿವನಿಗೆ ಸಮರ್ಪಣೆ ಆಗುತ್ತವೆ ಎಂದು ಮಾಜಿ ಎಂಎಲ್‌ಸಿ, ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷ ಎಸ್.ರುದ್ರೇಗೌಡ ಹೇಳಿದರು.

ಕಲ್ಲಳ್ಳಿಯಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದ “ಸಂಪೂರ್ಣ ಯೋಗ ಆರೋಗ್ಯ ಧಾಮ ” ಆವರಣದಲ್ಲಿ ಇರುವ ಧ್ಯಾನಸಕ್ತ ಆದಿ ಯೋಗಿ ಶಿವನ ಮೂರ್ತಿಗೆ ಅರ್ಚನೆ, ಕ್ಷೀರಾಭಿಷೇಕ, ಬಿಲ್ವಾರ್ಚನೆ ಹಾಗೂ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶಾದ್ಯಂತ ಸಡಗರ ಸಂಭ್ರಮದಿಂದ ಮಹಾಶಿವರಾತ್ರಿಯನ್ನು ಭಕ್ತಿಯಿಂದ ಆಚರಣೆ ಮಾಡಲಾಗುತ್ತಿದೆ. ಯೋಗ, ಪ್ರಾಣಾಯಾಮ, ಧ್ಯಾನದ ಜೊತೆಗೆ ಶಿವನ ಪೂಜೆಯು ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ನೀಡುತ್ತದೆ. ಇಂತಹ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನಮ್ಮಲ್ಲಿ ಜೀವನೋತ್ಸಾಹ ಹೆಚ್ಚಿಸುತ್ತವೆ ಎಂದು ತಿಳಿಸಿದರು.

ಟ್ರಸ್ಟಿ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಅವರು ಯೋಗ ಕೇಂದ್ರದ ಎಲ್ಲಾ ಶಿಬಿರಾರ್ಥಿಗಳಿಗೆ ಹಾಗೂ ಯೋಗಪಟುಗಳಿಗೆ ಶಿವರಾತ್ರಿ ಹಬ್ಬದ ಶುಭಾಶಯಗಳು ತಿಳಿಸಿ ಶಿವಪೂಜೆಯಲ್ಲಿ ದಂಪತಿ ಸಮೇತ ಪಾಲ್ಗೊಂಡಿದ್ದರು. ಪ್ರೊ. ಎ.ಎಸ್.ಚಂದ್ರಶೇಖರ್ ಹಾಗೂ ಭಾರತಿ ಚಂದ್ರಶೇಖರ್ ಶಿವಪೂಜೆಯಲ್ಲಿ ಪಾಲ್ಗೊಂಡಿದ್ದರು.

ಶಿವನಿಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಹೂವಿನ ಅಲಂಕಾರಗಳನ್ನ ಮಾಡಿ ಭಕ್ತಿಯಿಂದ ಪೂಜಿಸಲಾಯಿತು. ನಂತರ ಎಲ್ಲರಿಗೂ ಪ್ರಸಾದ ವಿನಿಯೋಗ ಮಾಡಲಾಯಿತು.

ಯೋಗ ಶಿಕ್ಷಣಾರ್ಥಿಗಳೇ ತಯಾರಿಸಿದ ಸುಂದರವಾದ ಎಕ್ಕದ ಹೂವಿನ ಮಾಲೆ ಬಹುಆಕರ್ಷಿತವಾಗಿತ್ತು. ಅಭಿಷೇಕಗೊಂಡು ಭಸ್ಮ, ಗಂಧ, ಅರಿಶಿಣ, ಕುಂಕುಮ, ಬಿಲ್ವಪತ್ರೆ ಪುಷ್ಪಗಳಿಂದ ಅಲಂಕೃತವಾಗಿದ್ದ ಧ್ಯಾನಸ್ಥ ಶಿವನ ಮೂರ್ತಿ ದರ್ಶನ ಆಕರ್ಷಕವಾಗಿತ್ತು. ಬ್ರಾಹ್ಮಿ ಕಾಲದಲ್ಲೇ ಯೋಗ ಶಿಕ್ಷಣಾರ್ಥಿಗಳಿಂದ ಸಾಮೂಹಿಕ ಭಜನೆ ಭಕ್ತಿಗೀತೆಗಳಿಂದ ಮಹಾಶಿವರಾತ್ರಿಯಂದು ಭಕ್ತಿ ಸಮರ್ಪಣೆ ಆರಂಭವಾಗಿತ್ತು.

Shivaganga Yoga Center ಕಾರ್ಯಕ್ರಮದಲ್ಲಿ ಮಂತ್ರ ಸಹಿತ ಸಹಸ್ರ ಬಿಲ್ವಾರ್ಚನೆಯನ್ನು ನೆರೆದಿದ್ದಂತಹ ಭಕ್ತವೃಂದ, ಯೋಗ ಶಿಕ್ಷಣಾರ್ಥಿಗಳು, ವಿಶ್ವಸ್ಥ ಮಂಡಳಿ ಮತ್ತು ಪೋಷಕ ಸಮಿತಿ ಸದಸ್ಯರು ಮತ್ತು ಆಗಮಿಸಿದ ಎಲ್ಲಾ ಸಾರ್ವಜನಿಕರು ವೈಯಕ್ತಿಕವಾಗಿ ಆದಿ ಯೋಗಿ ಶಿವನ ಮೂರ್ತಿಗೆ ಪುಷ್ಪ ಬಿಲ್ವಾರ್ಚನೆಯೊಂದಿಗೆ ಭಕ್ತಿ ಸಮರ್ಪಿಸಿಲು ಅವಕಾಶ ನೀಡಲಾಯಿತು.

ಯೋಗಾಚಾರ್ಯ ಡಾ. ಸಿ.ವಿ. ರುದ್ರರಾಧ್ಯ, ಯೋಗ ಕೇಂದ್ರದ ಕಾರ್ಯದರ್ಶಿ ಎಚ್.ಎಮ್. ಚಂದ್ರಶೇಖರಯ್ಯ, ಯೋಗ ಶಿಕ್ಷಕರಾದ ಕಾಟನ್ ಜಗದೀಶ್, ನೀಲಕಂಠ ರಾವ್, ಜಿಎಸ್ ಓಂಕಾರ್ ಮೂರ್ತಿ, ಪರಿಸರ ನಾಗರಾಜ್. ರೋಟರಿ ಜಿ.ವಿಜಯಕುಮಾರ್. ವಿಜಯ ಬಾಯರ್, ನಾಗರತ್ನಮ್ಮ ಹಾಗೂ ಯೋಗಪಟುಗಳು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ನೀಟ್ ಗೊಂದಲ, ಪ್ರತಿಭಟನೆ : ರಾಷ್ಟ್ರವಿರೋಧಿ ಶಕ್ತಿಗಳ ಕರಾಳ ತಂತ್ರ- ಎಸ್.ಎನ್.ಚನ್ನಬಸಪ್ಪ

S.N. Channabasappa ದೆಹಲಿಯಲ್ಲಿ ಜಿರಳೆ ಪಕ್ಷದ ಹೆಸರಿನಲ್ಲಿ ನಡೆದದ್ದು ವಿದ್ಯಾರ್ಥಿಗಳ ಹೋರಾಟ...

K. J.George ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯ ಹೋಟೆಲ್ ಗಳು, ಆತಿಥ್ಯ ಕೇಂದ್ರಗಳು ಹಂತಹಂತವಾಗಿ ಉನ್ನತೀಕರಣ : ಸಚಿವ ಕೆ.ಜೆ.ಜಾರ್ಜ್

K.J. George ರಾಜ್ಯದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಉದ್ದೇಶದಿಂದ,...

Kuvempu University ಕುವೆಂಪು ವಿವಿಯ ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Kuvempu University ಕುವೆಂಪು ವಿಶ್ವವಿದ್ಯಾಲಯವು 2026-27ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ,...