Sunday, October 25, 2026
Sunday, October 25, 2026

Meggan Hospital Shivamogga ಶಿವಮೊಗ್ಗ ಹಿರಿಯ ಪ್ರಸೂತಿ ತಜ್ಞ ಡಾ.ಚಿನ್ನಯ್ಯ ನಿಧನ

Date:

Meggan Hospital Shivamogga ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ನಿವೃತ್ತ ವಸತಿ ವೈದ್ಯಾಧಿಕಾರಿಗಳು ಹಾಗೂ ಹಿರಿಯ ಪ್ರಸೂತಿ ತಜ್ಞರಾದ ಡಾ. ಎ.ಎಸ್.ಚಿನ್ನಯ್ಯ (88 ವರ್ಷ) ಅವರು ವಯೋಸಹಜ ಕಾರಣಗಳಿಂದ ಫೆ.12 ರಂದು ನಿಧನರಾಗಿದ್ದಾರೆ.

ಡಾ. ಎ.ಎಸ್.ಚಿನ್ನಯ್ಯ ಇವರು ಕೊಪ್ಪ ತಾಲ್ಲೂಕಿನ ಹರಿಹರಪುರ ಮೂಲದವರು. ಆ ಭಾಗದ ಅತೀ ಕಿರಿಯ ವೈದ್ಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಇವರು ಬೆಂಗಳೂರಿನ ಪ್ರತಿಷ್ಠಿತ ಬೌರಿಂಗ್ ಸಂಸ್ಥೆಯಲ್ಲಿ ಎಲ್.ಎಂ.ಪಿ (LMP) ಪದವಿ ಪಡೆದ ನಂತರ, 1966 ರಲ್ಲಿ ಮಣಿಪಾಲದ ಕೆ.ಎಂ.ಸಿ (KMC) ಯಲ್ಲಿ ಎಂಬಿಬಿಎಸ್ ಪೂರೈಸಿದರು. ಬಳಿಕ ಗುಲ್ಬರ್ಗಾ ವಿಶ್ವವಿದ್ಯಾಲಯದ ಅಡಿಯಲ್ಲಿ ಬಳ್ಳಾರಿಯ ಪ್ರಸೂತಿ ಶಾಸ್ತ್ರದಲ್ಲಿ ಎಂ.ಡಿ (MD) ಸ್ನಾತಕೋತ್ತರ ಪದವಿ ಪಡೆದರು.

ಡಾ. ಎ.ಎಸ್.ಚಿನ್ನಯ್ಯ ರವರು ದಶಕಗಳ ಕಾಲ ದಕ್ಷಿಣ ಕರ್ನಾಟಕದ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಮೊದಲು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೃತ್ತಿ ಜೀವನ ಆರಂಭಿಸಿ, ನಂತರ ಚಿಕ್ಕಮಗಳೂರಿನಲ್ಲಿಯೂ ಸೇವೆ ಸಲ್ಲಿಸಿದರು. ಬಳಿಕ ಮೆಗ್ಗಾನ್ ಆಸ್ಪತ್ರೆಗೆ ಮರಳಿ, ಅಲ್ಲಿಯೇ ವಸತಿ ವೈದ್ಯಾಧಿಕಾರಿಗಳಾಗಿ (RMO) ಸುದೀರ್ಘ ಸೇವೆ ಸಲ್ಲಿಸಿ 1994ರಲ್ಲಿ ನಿವೃತ್ತರಾದರು. ಶಿಸ್ತುಬದ್ಧ ಜೀವನ, ರೋಗಿಗಳ ಮೇಲಿನ ಕಾಳಜಿ ಹಾಗೂ ವೃತ್ತಿಪರತೆಗೆ ಇವರು ಹೆಸರಾಗಿದ್ದರು.

ಮೃತರು ಪುತ್ರಿಯರಾದ ಮಲ್ಲಿಕಾ, ಮಧುರ, ಒಬ್ಬ ಪುತ್ರ ಹಾಗೂ ಅಸಗೋಡು ಕುಟುಂಬದ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಪತ್ನಿ ಶ್ರೀಮತಿ ಲೀಲಾ ಅವರು ಈ ಹಿಂದೆಯೇ ದೈವಾಧೀನರಾಗಿದ್ದಾರೆ.

Meggan Hospital Shivamogga ಮೃತರ ಅಂತ್ಯಕ್ರಿಯೆಯು ಫೆ.14 ರ ಶನಿವಾರದಂದು 11:00 ಗಂಟೆಗೆ ಅವರ ಪೂರ್ವಜರ ನಿವಾಸವಾದ ಅಸಗೋಡು ಗ್ರಾಮದಲ್ಲಿ ನೆರವೇರಲಿದೆ ಎಂದು ಅಸಗೋಡು ಕುಟುಂಬದವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Hartalu Halappa ರಾಜ್ಯದಲ್ಲಿ ವಿದ್ಯುತ್ ಕೊರತೆ: ಸರ್ಕಾರದ ಅಸಮರ್ಥತೆ- ಮಾಜಿ ಸಚಿವ ಹರತಾಳು ಹಾಲಪ್ಪ ಗಂಭೀರ ಪ್ರಶ್ನೆ.

Hartalu Halappa ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ...

Shimoga Pes College ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನಾ ಪ್ರಬಂಧ ಮಂಡನೆ: ಎಂಬಿಎ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ.

Shimoga Pes College ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ ಪಿಇಎಸ್‌ಐಟಿ‌ಎಂ...

Rain In Shivamogga ಮಲೆನಾಡಿನ ಕಡೆ ಮಳೆ : ಹವಾಮಾನ ಸಾರಾಂಶ

Rain In Shivamogga ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು...