Car Accident ಹೆಗ್ಗೋಡು ಬಳಿ ಕಾರಿನ ಮೇಲೆ ಕಾಡುಕೋಣ ದಾಳಿ. ಹೆಗ್ಗೋಡು ಬಳಿ ಕಾಡುಕೋಣ ಹಾರಿ ಕಾರಿನ ಮುಂಭಾಗ ಜಖಂ ಆಗಿದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆಗ್ಗೋಡು ಬಳಿ ಘಟನೆ ಸಂಭವಿಸಿದೆ. ಕಾಡುಕೋಣದ ಹಿಂಡು ಏಕಾಏಕಿ ರಸ್ತೆ ಮೇಲೆ ಬಂದಿದ್ದರ ಪರಿಣಾಮವಾಗಿ ಕಾರಿನ ಮೂತಿ ನಜ್ಜುಗುಜ್ಜಾಗಿದೆ. ಕಾರು ಚಲಾಯಿಸುತ್ತಿದ್ದ ವೇಳೆ ರಸ್ತೆಯಲ್ಲಿ ಎದುರಿಗೆ ಬೇರೆ ಕಾರೊಂದು ಅಡ್ಡ ಬಂದ ಪರಿಣಾಮ ಕಾರು ಜಖಂ ಆಗಿದೆ. ಹರಿಹರಪುರದಿಂದ ಕಮ್ಮರಡಿ ಮಾರ್ಗವಾಗಿ ತೀರ್ಥಹಳ್ಳಿಗೆ ಬರುತ್ತಿದ್ದ ವೇಳೆ ಹಠಾತ್ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ವರದಿಯಾಗಿದೆ.
Car Accident ಹೆಗ್ಗೋಡು ಬಳಿ ಕಾರಿನ ಮೇಲೆ ಕಾಡುಕೋಣ ದಾಳಿ.
Date:
