Friday, May 15, 2026
Friday, May 15, 2026

Shimoga APMC ಫೆಬ್ರವರಿ 28 ರೊಳಗೆ ವರ್ತಕರ ಪರವಾನಗಿ ನವೀಕರಿಸಲು ಸೂಚನೆ

Date:

Shimoga APMC ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 2016 ರಿಂದ 2026 ನೇ ಸಾಲಿಗೆ ಲೈಸೆನ್ಸ್ ಪಡೆದ ವರ್ತಕರ ಪರವಾನಿಗೆ ಅವಧಿಯು 2026 ರ ಮಾರ್ಚ್ 31 ರಂದು ಮುಕ್ತಾಯಗೊಳಲ್ಲಿದ್ದು, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966 ರ ಕಲಂ 72 ಮತ್ತು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಾವಳಿ 1968 ರ ನಿಯಮ 76(ಎ) ಲೈಸೆನ್ಸ್ ನವೀಕರಿಸಲು ಇಚ್ಛಿಸುವ ಪೇಟೆಕಾರ್ಯಕರ್ತರು ನಿಗಧಿತ ಲೈಸೆನ್ಸ್ ಫಾರಂನ್ನು ಭರ್ತಿ ಮಾಡಿ, ನಿಗಧಿತ Shimoga APMC ಶುಲ್ಕ ಪಾವತಿಸಿ, ಅವಶ್ಯಕ ದಾಖಲೆಗಳೊಂದಿಗೆ ಫೆ. 28 ರೊಳಗಾಗಿ ಕಾರ್ಯದರ್ಶಿ, ಎಪಿಎಂಸಿ, ಶಿವಮೊಗ್ಗ ಮತ್ತು ಉಪ/ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಶಿವಮೊಗ್ಗ ಇವರಿಗೆ ಸಲ್ಲಿಸುವುದು. ಫೆ. 28 ರ ನಂತರ ಲೈಸೆನ್ಸ್ ಗಳನ್ನು ನವೀಕರಿಸಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ನಿಗಧಿತ ಅವಧಿಯೊಳಗೆ ಅರ್ಜಿ ಸಲ್ಲಿಸುವುದು, ತಪ್ಪಿದಲ್ಲಿ ವರ್ತಕರೇ ಹೊಣೆಗಾರರಾಗಿರುತ್ತೀರಿ ಹಾಗೂ ಸಮಿತಿಯಿಂದ ನಿಯಮಾನುಸಾರ ಕಾನೂನಾತ್ಮಕ ಕ್ರಮಗೊಳ್ಳಲಾಗುವುದು ಎಂದು ಕೃಷಿ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಮಯದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Forest Department ವಾಹನ ಸಂಚಾರದ ಹೆಚ್ಚಳ: ವನ್ಯಜೀವಿಗಳ ಮುಕ್ತ ಓಡಾಟಕ್ಕೆ ಅಡ್ಡಿಯಾಗಿ ಮಾನವ- ವನ್ಯಪ್ರಾಣಿ ಸಂಘರ್ಷ ಹೆಚ್ಚುತ್ತಿದೆ- ಕುಮಾರ್ ಪುಷ್ಕರ್

Karnataka Forest Department ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮಾನವ–ವನ್ಯಜೀವಿ...

H.K.Patil ಗದಗ ಜಿಲ್ಲೆ ಲಕ್ಕುಂಡಿ ಪುರಾತನ ವಸ್ತುಗಳನ್ನ ದೆಹಲಿ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ವೀಕ್ಷಿಸಿ ಮೆಚ್ಚಿದ ಸಚಿವ ಎಚ್.ಕೆ.ಪಾಟೀಲ್

H.K.Patil. ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಇಂದು ಸನ್ಮಾನ್ಯ ಪ್ರವಾಸೋದ್ಯಮ ಸಚಿವರಾದ...