Agricultural University ಕೃಷಿ ವಿಶ್ವವಿದ್ಯಾಲಯದಲ್ಲಿ ರೇಂಜರ್, ರೋವರ್ ಘಟಕ ಘಟಕ ಸ್ಥಾಪನೆ ಆಗುತ್ತಿರುವುದು ವಿಶೇಷ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಅರ್.ಸಿಂಧಿಯಾ ಹೇಳಿದರು.
ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಅಡಿಯಲ್ಲಿ ರೇಂಜರ್ ಮತ್ತು ರೋವರ್ ಘಟಕ ಉದ್ಘಾಟಿಸಿ ಮಾತನಾಡಿ, ಕೃಷಿ ವಿವಿಯ ಪರಿಸರ ಹೊಸ ಕಲಿಕೆಯ ಅನುಭವ ನೀಡುತ್ತದೆ. ಕೃಷಿ ವಿವಿಯಲ್ಲಿ ಕ್ಯಾಂಪ್ ಆಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
ಕುಲಸಚಿವ ಡಾ. ಕೆ.ಸಿ.ಶಶಿಧರ ಮಾತನಾಡಿ, ಕೃಷಿ ವಿವಿಗಳಲ್ಲಿ ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಈಗಾಗಲೇ ಪಠ್ಯದಲ್ಲಿ ಇವೆ. ಅದೇ ಮಾದರಿಯಲ್ಲಿ ರೇಂಜರ್ ಮತ್ತು ರೋವರ್ ಸೇರಿಸಲು ಸಾಧ್ಯ. ಈ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದರು.
ಕುಲಪತಿ ಡಾ. ಆರ್.ಸಿ.ಜಗದೀಶ ಮಾತನಾಡಿ, ನಾಯಕತ್ವ ಗುಣ ಬೆಳಸುವಲ್ಲಿ ರೇಂಜರ್ ಮತ್ತು ರೋವರ್ ಅತ್ಯುತ್ತಮ ಪಾತ್ರ ವಹಿಸಲಿದೆ. ನಮ್ಮ ವಿದ್ಯಾರ್ಥಿಗಳಿಗೆ ಇಂತಹ ಅವಕಾಶ ಕೊಡಬೇಕು ಎನ್ನುವದೇ ನನ್ನ ಗುರಿ ಎಂದರು.
ರೋವರ್ ಘಟಕದ ಮುಖ್ಯಸ್ಥರಾಗಿ ಡಾ. ಸತೀಶ್ ವೈ ಹಾಗೂ ರೇಂಜರ್ ಘಟಕದ ಮುಖ್ಯಸ್ಥರಾಗಿ ಡಾ. ಬಸಮ್ಮ ಆಲದ ಕಟ್ಟಿ ಅವರನ್ನು ವಿಶ್ವವಿದ್ಯಾಲಯ ನೇಮಕ ಮಾಡಿತು. ಬಸಮ್ಮ ಕಾರ್ಯಕ್ರಮ ಸಂಘಟಿಸಿದರು.
Agricultural University ಡಾ. ಹೇಮ್ಲಾನಾಯಕ್, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಶಿವಮೊಗ್ಗ ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಆಯುಕ್ತ (ರೋವರ್ ವಿಭಾಗ) ಕೆ.ರವಿ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ ಕೆ.ವಿ., ವಿಜಯಕುಮಾರ್, ವಿಶ್ವವಿದ್ಯಾಲಯದ ಡಾ ಸಿ.ಜೆ. ಶ್ರೀಧರ, ಡಾ. ರವಿಕುಮಾರ್ ಡಾ. ರಾಮಕೃಷ್ಣ ಹೆಗ್ಗಡೆ, ನಮ್ರತ, ಮಾನ್ಯ, ರಕ್ಷಿತ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಉಪಸ್ಥಿತರಿದ್ದರು.
Agricultural University ಕೃಷಿ ವಿವಿಯಲ್ಲಿ ರೇಂಜರ್, ರೋವರ್ ಘಟಕ ಉದ್ಘಾಟನೆ
Date:
