Thursday, March 19, 2026
Thursday, March 19, 2026

ಬಿದನೂರಿನ ಬೆಲ್ಲ, ಸವಿಯಿರಿ ಎಲ್ಲ

Date:

ಐತಿಹಾಸಿಕ ನಗರಿ, ಹಲವು ಪ್ರಥಮಗಳನ್ನು, ಕೌತುಕಗಳನ್ನೂ ತನ್ನ ಒಡಲಿನೊಳಗಿಟ್ಟುಕೊಂಡು ಇಂದಿಗೂ ಸಂಶೋಧಕರಿಗೆ, ಅಧ್ಯಯನಕಾರರಿಗೆ ಸವಾಲು ಒಡ್ಡುವ ಬಿದನೂರು(ವೇಣುಪು ರ) ದ ಮಾರಿ ಜಾತ್ರೆ. ಬಿದನೂರಿನ ಅರಸರು ಸಾಂಪ್ರದಾಯಿಕ ಶೈಲಿಯ ಹಬ್ಬವನ್ನು ಬಿಡದೆ ಆಚರಿಸಿದವರು, ವರುಷಕ್ಕೊಮ್ಮೆ ಮಾರಿ(ದಂಡಿನ ಮಾರಮ್ಮ) ಗೆ ಬಲಿ ನೈವೇದ್ಯಮಾಡಿ ಯುದ್ದಕಾಲದಲ್ಲಿ ಶತೃವಿನ ರಕ್ತದ ಕಲೆಯನ್ನು ತಮ್ಮ ಶಸ್ತ್ರದಲ್ಲಿ ಉಳಿಸಿಕೊಂಡವರು. ಗುಜರಿಪೇಟೆ ವೆಂಕಟರಮಣ, ಕಂಬದ ನರಸಿಂಹ, ಕಂಬದ ಆಂಜನೇಯರಂತೂ ಕಣ್ಮನ ತಣಿಸು ಮೂರ್ತಿಗಳು.

ಇನ್ನು ಕೆಳದಿ, ಬಿದನೂರು,(ನಗರ) ಕಪಿಲೆ ದುರ್ಗ(ಕವಲೇ ದುರ್ಗ ಕೆಳದಿ ಮನೆತನಕ್ಕೆ ಒಂದಕ್ಕೊಂದು ಬೆಸೆದ ಕೊಂಡಿ. ಕೆಳದಿಯನ್ನು ಸುಮಾರು ೩೦೦ ವರ್ಷಗಳ ಕಾಲ ಆಳಿದ ಹಿರಿಮೆ ಕೆಳದಿಯ ಅರಸುಮನೆತನದ್ದಾಗಿದೆ. ಕೆಳದಿ, ಇಕ್ಕೇರಿ, ನಗರ(ಬಿದನೂರು, ವೇಣುಪುರ) ಪ್ರಾಚೀನ ಕಾಲದ ನಗರಗಳು. ಈ ನಗರಗಳು ಶಿವಮೊಗ್ಗ ಜಿಲ್ಲೆಯ ಕಣ್ಣುಗಳು ಇದ್ದಂತೆ.

ಅಲ್ಲದೆ ಕೆಳದಿ ಅರಸರ ಬಿರುದಾವಳಿಗಳು ಹೀಗಿದೆ. ಪರಯಡವಮುರಾರಿ
ಕೋಟೆಕೋಲಾಹಲೇನ
ಪ್ರವಿಚಲಿತವಿಶುದ್ಧಾದ್ವೈತಸಿದ್ಧಾಂತಭೂಮ್ನಾ|
ಅಸಿಯುಗಲಭೃತಾ ಚ ವೈರಿಸಪ್ತಾಂಗಲಕ್ಷ್ಮೀ ಹರಹರಿತ ಪಟೋದ್ಯತ್ಕೇತನಶ್ರೀಯುತೇನ|
ಚೌಡಪ್ಪನಾಯಕ ಸಮುನ್ಮಿಷಿತಾನ್ಚವಾಯ
ದುಗ್ದಾಬ್ಧಿವೃದ್ದಿಕರಕೈರವಬಾಂಧವೇನ| ಏಕಾಂಗಿವೀರರಣರಂಗವಿಹಾರಧೀರ ದೋನೇಜ ಪಶ್ಚಿಮ ಸರಸ್ವದಧೀಶ್ವರೇಣ. ಇವುಗಳು ಬಿರುದುಗಳು.

ಸಿಸ್ತಿನ ಶಿವಪ್ಪನಾಯಕರ ಕಾಲದಲ್ಲಿ ಕೃಷಿಗೆ ಕೊಟ್ಟಷ್ಟು ಮಹತ್ವ ಬಹುಶಃ ಕನ್ನಡದ ಅರಸರು ಮತ್ಯಾರು ಕೊಟ್ಟಿಲ್ಲವೆಂದೇ ಹೇಳಬೇಕು.‌ಸಾಂಪ್ರದಾಯಿಕ ಬೆಳೆಗಳು, ನೀರಾವರಿ ಕಾಲುವೆ, ಆಲೆಮನೆಗಳು ಇವರ ಕಾಲದಲ್ಲಿ ಉನ್ನತಿ ಪಡೆಯಿತು.

ತಿಗಳರ ಕುಲದೇವರಾದ ಧರ್ಮರಾಯನ ಕರಗವನ್ನು ಮೊಟ್ಟಮೊದಲು ಆರಂಭಿಸಿದ್ದು
ಕೆಳದಿ ಅರಸು ಮನೆತನದ ಕಾಲದಿಂದಲೇ.

ಮರೆಯಾಗುತ್ತಿರುವ ಸಾಂಪ್ರದಾಯಿಕ ಆಲೆಮನೆಗಳು.

ಕಬ್ಬು ಭೂಮಿಯಲ್ಲಿ ಅವತರಿಸಿ ಅದರಿಂದ ಬೆಲ್ಲ ಮಾಡುವ ವಿಧಾನವನ್ನು ಮನುಷ್ಯ ಅದ್ಯಾವಾಗ ಕಂಡುಹಿಡಿದನೋ ಭಗವಂತನೇ ಬಲ್ಲ, ಅಂದಿನಿಂದಿಲೂ ಇಂದಿನವರೆಗೂ ಕಬ್ಬಿನ ಹಾಲಿನಿಂದ ಬೆಲ್ಲವನ್ನು ತಯಾರಿಸುತ್ತಲೇ ಇದ್ದಾರೆ. ಹಿಂದೆಲ್ಲಾ ಕೋಣವನ್ನು, ಎತ್ತನ್ನು ಕಟ್ಟಿ ಗಾಣವನ್ನು ಹೂಡಿ ಕಬ್ಬನ್ನು ಅರೆದು ರಸತೆಗೆದು ಭೂಮಿಯ ಆರೇಳು ಅಡಿಗಳ ಆಳದಲ್ಲಿ ಒಲೆಗಳನ್ನು ನಿರ್ಮಿಸಿ ಕಟ್ಟಿಗೆಗಳನ್ನು, ದಪ್ಪ ದಪ್ಪ ಕೊರಡನ್ನು ಹಾಕಿ ಹದವಾದ ಬೆಂಕಿಯನ್ನು ಮಾಡಿಕೊಂಡು ದೊಡ್ಡ ದೊಡ್ಡ ತಪ್ಪಲೆಗಳಿಗೆ ಹಾಲನ್ನು ಸುರಿದು ಹದವಾಗಿ ಕೈಯಾಡಿಸುತ್ತಾ ಹಾಲನ್ನು ಚೆನ್ನಾಗಿ ಕುದಿಸಿ ಪಾಕವನ್ನು ಮಾಡುತ್ತಲೇ ಅದನ್ನು ದೊಡ್ಡ ಹರಿವಾಣಕ್ಕೆ ಸುರಿದು ಆರಲು ಬಿಟ್ಟರೆ ಅದು ನೊರೆ ಬೆಲ್ಲವಾಗಿ ಅದನ್ನು ತಿನ್ನುವುದೇ ಒಂದು ಮಹದಾನಂದ. ನೊರೆಬೆಲ್ಲ, ಜೋನಿಬೆಲ್ಲ, ಅಚ್ಚು ಬೆಲ್ಲ, ವಾಲೆಬೆಲ್ಲ, ಶುಂಠಿ ಬೆರೆಸಿದ ಬೆಲ್ಲ ಎಲ್ಲವೂ ಸಾಂಪ್ರದಾಯಿಕ ರೀತಿಯಲ್ಲಿ ರಾಸಾಯನಿಕ ಮುಕ್ತವಾಗಿ ತಯಾರಾಗುತಿತ್ತು.

ಈಗ ಕೋಣ, ಎತ್ತಿನ ಬದಲು ಯಾಂತ್ರಿಕ ಮೋಟಾರು ಬಳಸಿ ಕಬ್ಬನ್ನು ಅರೆಯಲಾಗುತ್ತಿದೆ. ಕಬ್ಬನ್ನು ಹಲ್ಲಿನಲ್ಲಿ ಸಿಗಿದು ಕಚ್ಚಿ ತಿಂದು ರಸವನ್ನು ನುಂಗುವ ಕಲೆಯೂ ತಿಳಿಯದ ಇಂದಿನ ಪೀಳಿಗೆಗೆ ಸಾಂಪ್ರದಾಯಿಕ ಶೈಲಿಯ ಆಲೆಮನೆ ಎಂದರೇನೆಂದು ಚಿತ್ರದಲ್ಲಿ ಮಾತ್ರ ತೋರಿಸಬೇಕಾಗಿದೆ. ಕಬ್ಬುಡೊಂಕಾದರೇನು ಸಿಹಿ ಡೊಂಕೆ ವಿಠ್ಠಲ.

ವಿಶೇಷ ಧನ್ಯವಾದಗಳು:
ಚಿತ್ರ ಕೃಪೆ: ಡಾ. ಶಾಂತಾರಾಮ್ ಸಾಮಕ್,
ಶ್ರೀಕಂಠ ಶರ್ಮ,‌ಪತ್ರಕರ್ತರು,
ಹೊಸನಗರ

✍️ದಿಲೀಪ್ ನಾಡಿಗ್
6361124316

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...