Bhadravati VISL ವಿಐಎಸ್ ಎಲ್ ನಲ್ಲಿ ಸಂಸ್ಥಾಪಕರ ದಿನಾಚರಣೆ ಅತ್ಯುತ್ತಮ ಇಂಜೀನಿಯರ್, ರಾಜನೀತಿಜ್ಞ ಸರ್.ಎಮ್. ವಿಶ್ವೇಶ್ವರಾಯರವರ ಮಾರ್ಗದರ್ಶನ ಮತ್ತು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ನೇತೃತ್ವದಲ್ಲಿ ೧೯೧೮, ಜನವರಿ ೧೮ ರಂದು ಮೈಸೂರು ವುಡ್ ಡಿಸ್ಟಿಲೇಶನ್ ಮತ್ತು ಐರನ್ ವರ್ಕ್ಸ್ ಹೆಸರಿನಲ್ಲಿ ಭದ್ರಾವತಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
Bhadravati VISL ಆ ದಿನವನ್ನು ವಿಐಎಸ್ ಎಲ್ ನಲ್ಲಿ ಸಂಸ್ಥಾಪಕರ ದಿನವೆಂದು ಪ್ರತೀವರ್ಷ ಆಚರಿಸಲಾಗುವುದು. ಅದರಂತೆ ಈ ವರ್ಷವೂ ಸಹ ವಿಐಎಸ್ ಎಲ್ ಸ್ಥಾಪನೆಯ ವರ್ಷದ ಅಂಗವಾಗಿ ಸರ್. ಎಮ್. ವಿಶ್ವೇಶ್ವರಾಯರವರ ಪ್ರತಿಮೆಗೆ ದಿನಾಂಕ ೧೮.೦೧.೨೦೨೬ ರಂದು ಮಾಲಾರ್ಪಣೆ ಮಾಡುವ ಮೂಲಕ ವಿ.ಐ.ಎಸ್.ಎಲ್‌ನ ಸಮುದಾಯವು ತಮ್ಮ ಗೌರವ ವಂದನೆಗಳನ್ನು ಸಲ್ಲಿಸಿತು. ಶ್ರೀ ಅನುಪ್ ಕುಮಾರ್, ಕಾರ್ಯಪಾಲಕ ನಿರ್ದೇಶಕರು, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಬಿ. ವಿಶ್ವನಾಥ, ಮುಖ್ಯ ಮಹಾಪ್ರಬಂಧಕರು (ಮಾನವ ಸಂಪನ್ಮೂಲ), ಶ್ರೀ ಕೆ.ಬಿ. ಮಲ್ಲಿಕಾರ್ಜುನ, ಅಧ್ಯಕ್ಷರು, ಕಾರ್ಮಿಕರ ಸಂಘ ಮತ್ತು ಶ್ರೀ ಅಜಯ್ ಸೋಂಕುವಾರ್, ಅಧ್ಯಕ್ಷರು, ಅಧಿಕಾರಿಗಳ ಸಂಘ ಇವರುಗಳು ವಿಐಎಸ್ ಎಲ್ ಆವರಣದೊಳಗಿರುವ ಸರ್. ಎಮ್. ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಸ್ಥಾಪಕರಾದ ಸರ್. ಎಮ್. ವಿಶ್ವೇಶ್ವರಾಯರವರಿಗೆ ತಮ್ಮ ನಮ್ರತೆಯ ಗೌರವ ವಂದನೆಗಳನ್ನು ಸಲ್ಲಿಸಿದರು.
ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ಮಹಾಪ್ರಬಂಧಕ ಶ್ರೀ ನವೀನ್ ರಾಹುಲ್‌ರವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
