Thursday, June 18, 2026
Thursday, June 18, 2026

DC Shivamogga ಮಾದಕ ವಸ್ತು ಮಾರಾಟ ಸೇವನೆ, ಕಳ್ಳ ಸಾಗಣೆ ವಿರುದ್ಧ ಜನಜಾಗೃತಿ ಮಾಡೋಣ- ಪ್ರಭುಲಿಂಗ ಕವಳಿಕಟ್ಟಿ

Date:

DC Shivamogga ದೇಶದ ರಕ್ಷಣೆ, ಸ್ವಸ್ಥ ಸಮಾಜ ನಿರ್ಮಾಣ, ಭಾರತದ ಭವ್ಯಭವಿಷ್ಯಕ್ಕಾಗಿ ಮಾದಕ ವಸ್ತುಗಳ ವ್ಯಸನ, ಮಾರಾಟ ಮತ್ತು ಕಳ್ಳಸಾಗಾಣೆ ವಿರುದ್ಧ ಜನಜಾಗೃತಿಗೊಳಿಸಲು ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಂಕಲ್ಪ ಮಾಡುವಂತೆ ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ಪರಿವರ್ತನಾ ಟ್ರಸ್ಟ್, ಬೆಂಗಳೂರು, ಜಿಲ್ಲಾಡಳಿತ, ರೋಟರಿ ಸಂಸ್ಥೆ ಶಿವಮೊಗ್ಗದ ವಿವಿಧ ವಲಯಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಡ್ರಗ್ಸ್ ಮುಕ್ತ ಕರ್ನಾಟಕ ಜನಜಾಗೃತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಸಹಜ ಕುತೂಹಲದಿಂದ ನಿಧಾನವಾಗಿ ಆರಂಭಗೊಳ್ಳುವ ಮಾದಕ ವಸ್ತುಗಳ ಸೇವನೆ, ಕೊನೆಯಲ್ಲಿ ಚಟವಾಗಿ ಪರಿಣಮಿಸಲಿದೆ. ಇದರಿಂದಾಗಿ ಅಸಂಖ್ಯಾತ ಯುವಕ-ಯುವತಿಯರು ತಮಗೆ ಅರಿವಿಲ್ಲದೆಯೆ ಅಮೂಲ್ಯವಾದ ಭವಿಷ್ಯವನ್ನು ಯಾತನಾಮಯವಾಗಿಸಿಕೊಳ್ಳುತ್ತಿದ್ದಾರೆ ಎಂದರು.
ಮನೋರಂಜನೆ, ಹವ್ಯಾಸಿ ಕ್ಲಬ್ ಗಳು, ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಅಭಿವೃದ್ದಿಯಾದಂತೆ ಪರಿಸರದ ಮೇಲೆ ಆಗಿರುವ ಪ್ರಭಾವ, ಅದರ ಪರಿಣಾಮಗಳು ಗೋರವಾಗಿವೆ. ಇಂದಿನ ಯುವ ಪೀಳಿಗೆ ಮಾದಕ ವಸ್ತುಗಳ ಮೋಹಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ಕ್ರಮ ಅಗತ್ಯವಾಗಿದೆ. ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳದೆ ಇರುವಂತೆ ಯುವಕರ ಗಮನ ಕೇಂದ್ರೀಕರಿಸಬೇಕಾದ ಅಗತ್ಯವಿದೆ. ನೈತಿಕ ಸ್ವಭಾವವೂ ಬದಲಾಗದಂತೆ ನೋಡಿಕೊಳ್ಳಬೇಕಾದ ಅಗತ್ಯ ಸಮಾಜ ಹಾಗೂ ಪೋಷಕರ ಮೇಲಿದೆ ಎಂದರು.
ಮಾದಕ ವ್ಯಸನ ಎಂಬ ಮಾಯಾಜಾಲಕ್ಕೆ ಬೀಳುವ ಮೊದಲು ಅದನ್ನು ಬಲವಾಗಿ ಕಟ್ಟಿಹಾಕಬೇಕಾಗಿದೆ. ಅದಕ್ಕಾಗಿ ಇಡಿ ಸಮಾಜವೇ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ. ಜಾಗೃತ ಸಮಾಜ ನಿರ್ಮಿಸುವಲ್ಲಿ ಹಾಗೂ ಭಾರತದ ಭವಿಷ್ಯವನ್ನು ಸಂರಕ್ಷಿತಗೊಳಸುವ ರೂಪಿಸುವ ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರ ಭಾಗವಹಿಸುವಿಕೆ ಅಗತ್ಯವಾಗಿದೆ ಎಂದರು.
ಮಾದಕ ವಸ್ತು ವ್ಯವನಿಗಳನ್ನು ಮಾತ್ರವಲ್ಲದೇ ಅವರ ಮೂಲಕ ಇಡೀ ಸಮಾಜವನ್ನು ಆವರಿಸಿಕೊಂಡು ವಿನಾಶದಂಚಿಗೆ ಕೊಂಡೊಯ್ಯುತ್ತದೆ. ಭವ್ಯ ಇತಿಹಾಸ, ಸಾಂಸ್ಕೃತಿಕ-ಆಧ್ಯಾತ್ಮಿಕ ಪರಂಪರೆ ಹೊಂದಿರುವ ಈ ನಾಡಿನಲ್ಲಿ ಹಿರಿಯರ ಆಶಯದಂತೆ ನಡೆದುಕೊಳ್ಳುವ, ಅನುಸರಿಸುವ ಅಗತ್ಯವಿದೆ ಎಂದರು.
DC Shivamogga ಮದ್ಯ, ಮಾದಕ ವಸ್ತುಗಳ ನಿಯಂತ್ರಣ, ನಶೆ ಮುಕ್ತ ಸಮಾಜ ನಿರ್ಮಾಣ ಎಂಬ ಹೆಸರಿನಲ್ಲಿ ಅನೇಕ ಜನಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇವೆ. ಆದರೆ, ಇನ್ನೊಂದು ಕಡೆಯಲ್ಲಿ ಮದ್ಯದಂಗಡಿಗಳಿಗೆ ಸರ್ಕಾರವೇ ಪರವಾನಿಗೆ ನೀಡುತ್ತಿದೆ. ಎಂತಹ ವಿಪರ್ಯಾಸ. – ಎಸ್.ಎನ್.ಚನ್ನಬಸಪ್ಪ, ಶಾಸಕರು. ಶಿವಮೊಗ್ಗ ನಗರ.
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕಿಶ್ ಬಾನು , ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ.., ಚಂದ್ರಶೇಖರ್, ಹರ್ಷಕಾಮತ್, ಬಿ.ಜಿ.ಧನರಾಜ್, ಶ್ರೀಮತಿ ಭಾರತಿ ಚಂದ್ರಶೇಖರ್, ಸುದರ್ಶನ್, ಉದಯಕದಂಬ, ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...