Karate World Championships ಕರಾಟೆಯು ಆತ್ಮವಿಶ್ವಾಸ ಮತ್ತು ಕ್ರೀಡಾತ್ಮಕತೆ ಹೆಚ್ಚಿಸುವ ಕ್ರೀಡೆಯಾಗಿದೆ. 3ನೇ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ 2025ರ ಜನವರಿ 11ರಂದು ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ಈ ಕ್ರೀಡಾಕೂಟವನ್ನು ಸಹ್ಯಾದ್ರಿ ಶಿವಮೊಗ್ಗ ಡಿಸ್ಟಿಕ್ ಸ್ಪೋರ್ಟ್ಟ್ಸ್ ಕರಾಟೆ ಅಸೋಸಿಯೇಷನ್ ನ ಆಯೋಜಕರಾದ ಸೆನ್ಸೈ ನವೀನ್ , ಸೆನ್ಸೈ ಸಾಧಿಕ್ , ಸೆನ್ಸೈ ಮಂಜುನಾಥ್ ರವರು ಆಯೋಜಿಸಿರುತ್ತಾರೆ.
ಈ ಕ್ರೀಡಾಕೂಟಕ್ಕೆ1,200ಕ್ಕೂ ಹೆಚ್ಚು ಕ್ರೀಡಾ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ತಮಿಳುನಾಡು, ತೆಲಂಗಾಣ, ಪಂಜಾಬ್, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಸ್ಪರ್ಧಾಳುಗಳು ಆಗಮಿಸುತ್ತಿದ್ದಾರೆ. ಬರುವಂತಹ ಕ್ರೀಡಾಪಟುಗಳಿಗೆ ಊಟ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುವುದು. ಹಾಗೂ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜೇತರಾದಂತಹ ವಿದ್ಯಾರ್ಥಿಗಳಿಗೆ ಆಕರ್ಷಕವಾದ ಟ್ರೋಫಿ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ಈ ಮಹತ್ವದ ಚಾಂಪಿಯನ್‌ಶಿಪ್‌ನಲ್ಲಿ ಕ್ರೀಡಾಪಟುಗಳು ತಾವು ಪಡೆದ ಕೌಶಲ್ಯವನ್ನು ಪ್ರದರ್ಶಿಸಲು ತಯಾರಾಗಿದ್ದಾರೆ.
ಈ ಕ್ರೀಡೆಯು ಕ್ರೀಡಾ ಪ್ರಿಯರ ಮನ ಸೆಳೆಯಲಿರುವುದು ನಿಶ್ಚಿತ. ಕಾರ್ಯಕ್ರಮವನ್ನು ಉದ್ಘಾಟಿಸಲು ಗಣ್ಯ ಅತಿಥಿಗಳು ಆಗಮಿಸುತ್ತಿದ್ದು , ಈ ಮಹತ್ವದ ಕ್ಷಣವನ್ನು ಅನೇಕ ಗಣ್ಯರು ಗೌರವಿಸಲಿದ್ದಾರೆ.
Karate World Championships ಮಾನ್ಯ ಶಿಕ್ಷಣ ಸಚಿವರದ ಮಧು ಬಂಗಾರಪ್ಪ ನವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವರು. ಶಿವಮೊಗ್ಗ ಜಿಲ್ಲೆಯ ಶಾಸಕರಾದ ಬಿ.ಎಸ್. ಚೆನ್ನಬಸಪ್ಪನವರು, ಈ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸುತ್ತಾರೆ. ಡಿ.ಎಸ್.ಅರುಣ್ ಸರ್ , ವಿಧಾನ ಪರಿಷತ್ ಸದಸ್ಯರು ಶಿವಮೊಗ್ಗ ಹಾಗೂ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
ಈ ಚಾಂಪಿಯನ್‌ಶಿಪ್ ಕೇವಲ ಸ್ಪರ್ಧೆಗಷ್ಟೇ ಸೀಮಿತವಾಗಿರದೆ, ಏಕತೆ, ಶಿಸ್ತಿನ ಮತ್ತು ಶ್ರೇಷ್ಠತೆಯ ಹಬ್ಬವಾಗಿದೆ. ವಿವಿಧ ವಿಭಾಗಗಳಲ್ಲಿ ಸ್ಪರ್ಧಿಗಳು ತಮ್ಮ ಕೌಶಲ್ಯ, ಸಾಧನೆ ಮತ್ತು ಕ್ರೀಡಾತ್ಮಕತೆಯನ್ನು ಪ್ರದರ್ಶಿಸುತ್ತಾರೆ. ಸಹ್ಯಾದ್ರಿ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಈ ಕಾರ್ಯಕ್ರಮವನ್ನು ಸ್ಮರಣೀಯವಾಗಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ, ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನಗಳ ಮಹತ್ವವನ್ನು ಉತ್ತೇಜಿಸುತ್ತಿದೆ.
ಕರಾಟೆ ಪ್ರಿಯರು ಮತ್ತು ಕ್ರೀಡಾಭಿಮಾನಿಗಳು ಈ ಅದ್ಭುತ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸ್ಪರ್ಧೆಗಳ ರೋಮಾಂಚನ ಮತ್ತು ಪ್ರೇರಣಾದಾಯಕ ಕ್ಷಣಗಳನ್ನು ಸಾಕ್ಷಿಯಾಗಲು ಆಹ್ವಾನಿತರಾಗಿದ್ದಾರೆ.
