Sri Adi Chunchanagiri ಸಂಸ್ಕೃತಿ ಮತ್ತು ಸಂಸ್ಕಾರ ಮನುಷ್ಯನ ಜೀವನಕ್ಕೆ ಅಗತ್ಯವಾಗಿ ಬೇಕು ಎಂದು ಶಿವಮೊಗ್ಗ ಶಾಸಕರಾದ ಎಸ್. ಎನ್.ಚನ್ನಬಸಪ್ಪ ಅವರು ಅಭಿಪ್ರಾಯ ಪಟ್ಟರು.
ಅವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಂಯುಕ್ತ ಪ್ರೌಢಶಾಲೆ ಮತ್ತು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ,, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ,ಅದಕ್ಕೆ ಪೂರಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಮಾಡಿ, ಶ್ರೀ ಮಠವು ದೇಶಕ್ಕೆ ಮಾದರಿಯಾಗಿದೆ ಎಂದರು.
ದೇಶ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದ ಆಗತ್ಯತೆ ಇದೆ. ಅಂತಹ ಕೆಲಸವನ್ನು ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಮಾಡ್ತಾ
ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಶ್ರೀಮಠ ಶಿಕ್ಷಣದ ಜೊತೆ ಜೊತೆಗೆ, ಕ್ರೀಡೆ,ವಿಜ್ಞಾನ, ಕಲೋತ್ಸವ ಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರತಿಯೊಬ್ಬರಲ್ಲಿಯೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ.ಅಂತಹ ಪ್ರತಿಭೆಗಳನು ಗುರುತಿಸಿ ಪ್ರೋತ್ಸಾಹ ನೀಡಿದ್ದೇ ಆದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ.
ರಾಜ್ಯದಲ್ಲಿಯೇ ಮೊದಲ ಬಾರಿಗೆ ನಮ್ಮ ಸಂಸ್ಥೆಗೆ ಕೃಷಿ ಕಾಲೇಜು ಕೊಟ್ಟಿರುವುದು ಹೆಮ್ಮೆಯ ಸಂಗತಿ. ಕೃಷಿ ನಮ್ಮ ದೇಶದ ಬೆನ್ನೆಲುಬು, ಋಷಿ ಮತ್ತು ಕೃಷಿ ಈ ದೇಶದಲ್ಲಿ ಸಮೃದ್ಧಿಯಾಗಿದ್ದರೆ,ಎಲ್ಲವೂ ಸಮೃದ್ಧಿಯಾಗಲು ಸಾಧ್ಯ ಎಂದರು.
Sri Adi Chunchanagiri ಭಾರತೀಯ ಸಂಸ್ಕೃತಿಗೆ ಹೊಂದಿಕೊಳ್ಳುವಂಥ ಶಿಕ್ಷಣದ ವ್ಯವಸ್ಥೆ ನಮ್ನ ಮಕ್ಕಳಿಗೆ ಸಿಗುತ್ತಾಯಿದೆ. ಹಾಗಾಗಿ ನಮ್ಮ ಮಕ್ಕಳು ದಾರಿ ತಪ್ಪಲು ಸಾಧ್ಯವಿಲ್ಲ ಎಂದರು.
ಮಕ್ಕಳು ಕನಿಷ್ಠ ಪಕ್ಷ ದಿನಕ್ಕೊಮ್ಮೆಯಾದರೂ ಹಿರಿಯರನ್ನ, ಹೆತ್ತವರನ್ನು ಗೌರವಿಸುವುದನ್ನು, ನಮಸ್ಕರಿಸುವುದನ್ನು ಕಲಿಯಿರಿ, ಚೆನ್ನಾಗಿ ಓದಿ,ಸೋಮಾರಿತನ ಬಿಡಿ ಸಂಸ್ಕೃತಿ ಅರಿವು ನಿಮಗಿರಲಿ, ಮಕ್ಕಳಿಗೆ ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಶಾಖೆಯ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು, ಶ್ರೀ ಕ್ಷೇತ್ರ ಶಾಖೆಯ ಪೂಜ್ಯ ಶ್ರೀ ಸಂವಿಧಾನಂದನಾಥ ಸ್ವಾಮೀಜಿಯವರು,ಮಾಯಸಂದ್ರ ಶಾಖೆಯ ಪೂಜ್ಯ ಶ್ರೀ ರಾಜಯೋಗನಂದನಾಥ ಸ್ವಾಮೀಜಿಯವರು, ಸಂಪನ್ಮೂಲ ವ್ಯಕ್ತಿಗಳಾದ ಡಾ. ರಾಹುಲ್ ದೇವರಾಜ್, ಅಧಿಕೃತ ಫಿನಿಶರ್ 2025 ಐರನ್ ಮ್ಯಾನ್ 70.3, ಗೋವಾ, ಶ್ರೀ ಹರ್ಷ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮ,ಶ್ರೀ ಆದಿಚುಂಚನಗಿರಿ ಕೃಷಿ ವಿಜ್ಞಾನ ಕಾಲೇಜಿನ, ಪ್ರಾಂಶುಪಾಲ ಶಿವಲಿಂಗೇಗೌಡ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ನಿರ್ದೇಶಕರಗಳು, ಪ್ರಾಂಶುಪಾಲರು, ಸಿಬ್ಬಂದಿಯ ವರ್ಗದವರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ರಾಜ್ಯ ಹಾಗೂ ರಾಷ್ಟ್ರ, ಅಂತರಾಷ್ಟ್ರ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಶಾಲಾ ಕಾಲೇಜಿನ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪೂಜ್ಯರಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಕೊನೆಯಲ್ಲಿ ಎಸಿಎಸ್ ಸಾಂಸ್ಕೃತಿಕ ಉತ್ಸವ ಮಕ್ಜಳಿಂದ ಜರುಗಿದವು
