Friday, September 25, 2026
Friday, September 25, 2026

Kuvempu “ಸುಂದರ ಕವಿ ಕಾಣೋ”ಕುವೆಂಪು ಸ್ಮರಣೆ.-ಡಾ.ಸುಧೀಂದ್ರ.

Date:

Kuvempu ಕುವೆಂಪು ಅವರ ಇಂಗ್ಲಿಷ್ ಕವಿತೆಗಳನ್ನು ಓದಿ ಪರಿಶೀಲಿಸಿದ ಐರಿಷ್ ಕವಿ ಕಸಿನ್ಸ್
“ಏನಿದೆಲ್ಲ ಕಗ್ಗ? .
ನಿಮ್ಮನ್ನ ನೋಡಿದರೆ ತಲೆಯಿಂದ ಕಾಲಿನವರೆಗೂ ಸ್ವದೇಶಿಯಾಗಿ ಕಾಣುತ್ತೀರಿ.. ಆದರೆ ಕವಿತೆ ಮಾತ್ರ ಸ್ವದೇಶಿಯಲ್ಲ. ನಿಮ್ಮ ಮಾತೇ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ? ಎಂದು ಕೇಳಿದರು.
ನಂತರ ಇಬ್ಬರ ನಡುವೆ ಕಾವ್ಯ, ಇಂಗ್ಲಿಷ್ ಭಾಷೆ ಮತ್ತು ಕನ್ನಡ ಭಾಷೆ ಮೊದಲಾದ ವಿಚಾರಗಳ ಮಾತುಕತೆ ನಡೆಯಿತು.
ಒಟ್ಟಾರೆ ಹೇಲಕಬೇಕೆಂದರೆ ’ಯಾವ ಭಾಷೆಯೂ ತನಗೆ ತಾನೆ ಅಸಮರ್ಥವಲ್ಲ. ಸಮರ್ಥನೊಬ್ಬನು ಬರುವತನಕ ಮಾತ್ರ ಅದು ಅಸಮರ್ಥವೆಂಬಂತೆ ತೋರಬಹುದು, ಸಮರ್ಥನು ಬಂದೊಡನೆ ಅವನ ಕೈಯಲ್ಲಿ ಅದು ಎಂತಹ ಅದ್ಭುತವನ್ನಾದರೂ ಸಾಧಿಸಬಲ್ಲದು’ ಎಂದು ಕಸಿನ್ಸ್ ‌ ಅಭಿಪ್ರಾಯ ಪಟ್ಟರಂತೆ.

ಆಗ ಇಪ್ಪತ್ತರ ಬಿಸಿ ವಯಸ್ಸಿನ ಯುವಕ ಕುವೆಂಪು, ಆಕ್ಷಣಕ್ಕೆ ಸಹಜವಾಗಿಯೇ ಸಿಟ್ಟುಗೊಂಡರಂತೆ. ಅಂತಹ ಕುಪಿತ ಮನಸ್ಥಿತಿಯಲ್ಲೇ ಅಲ್ಲಿಂದ ಜಾಗ ಖಾಲಿಮಾಡಿದರು.

” ಅದೊಂದು ಮಹತ್ವದ ಹಾಗೂ ಸ್ಮರಣೀಯವಾದ ದಿನ!”ಎಂದು ನೆನಪಿನ ದೋಣಿಯಲ್ಲಿ ಕುವೆಂಪು ಆ ಸಂದರ್ಭವನ್ನು ಕುರಿತು ಕಸಿನ್ಸ್ ಅವರ ಹಿತವಚನ ಮೇಲೆಮೇಲೆಕ್ಕೆ ತಿರಸ್ಕೃತವಾಗಿದ್ದರು ಸುದೈವದಿಂದ ನನ್ನ ಅಂತಃಪ್ರಜ್ಞೆ ಅದನ್ನು ಒಪ್ಪಿಕೊಂಡಿತ್ತೆಂದು ತೋರುತ್ತದೆ. ಕನ್ನಡ ವಾಗ್ದೇವಿಯ ಕೃಪೆಯೂ ಆ ಸುಸಂಧಿಯನ್ನು ಉಪಯೋಗಿಸಿಕೊಂಡು ತನ್ನ ಕಂದನನ್ನು ತನ್ನ ಹಾಲೆದೆಗೆ ಎಳೆದುಕೊಂಡಳು! ಹಿಂತಿರುಗಿ ಬರುವಾಗಲೇ ದಾರಿಯಲ್ಲಿ ಏನೋ ಒಂದು ಕನ್ನಡ ಕವಿತೆ ರಚಿಸುತ್ತಾ ಗುನುಗುತ್ತಾ ಬಂದೆ ಎಂದು ಬರೆದಿದ್ದಾರೆ.

Kuvempu ಈ ಬದಲಾವಣೆ ಹೊಂದಿದ ನಂತರ ಕುವೆಂಪು ಗಟ್ಟಿಯಾಗಿಯೇ ಬರೆದರು. ಗದ್ಯಧಾಟಿಯಲ್ಲಂತೂ ಅವರ ಶೈಲಿ
ಮನೋಜ್ಞ.ಅನನ್ಯ.
ಕವಿತೆಗಳಲ್ಲಿ ನಿಸರ್ಗ ನರ್ತಿಸುತ್ತದೆ. ನಿಸರ್ಗಕವಿ ಅಂತಲೇ ನಮಗೆ ಅವರು ಜನಜನಿತ.

ಪದವಿ, ಪದಕ, ಬಿರುದು, ಮಾನ‌ ಸಮ್ಮಾನಗಳು ಅವರನ್ನ ಅರಸಿಕೊಂಡು ಬಂದವು. ಕುವೆಂಪು ಅವರೇ ಹೇಳುವಂತೆ” ಛೀ, ಕೀರ್ತಿ ಶನಿ ತೊಲಗಾಚೆ” ಎಂದು ಅವುಗಳನ್ನ ದೂರ ಸರಿಸಿದರು. ಅಷ್ಟೇ ಮೇಲಕ್ಕೇರಿದರು.
ಇಂದವರ ಜನ್ಮದಿನ.
ಸೂರ್ಯೋದಯ,
ಚಂದ್ರೋದಯ ದೇವರ ದಯ ಕಾಣೋ
ಎಂಬಂತೆ ಮಹಾಕವಿಯ ನೆನಪೇ ನಮಗೆ ಒಂದು ಸುಂದರ
” ಅಕ್ಷರಗಳ ಕವಿ ಕಾಣೋ!” ಎಂಬ ಮಿಡಿತ ನಮಗೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...