D. K. Shivakumar ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ರೈತರು ಮತ್ತು ಬೆಂಗಳೂರು ನಗರ ಗ್ರಾಹಕರ ನಡುವಿನ ನೇರ ಸಂಪರ್ಕಕ್ಕೆ ವೇದಿಕೆಯಾಗಿ “ಕೃಷಿ ಸಂತೆ”ಯನ್ನು ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಆಯೋಜಿಸುತ್ತಾ ಬಂದಿದೆ. ಸತತವಾಗಿ ಎಂಟು ಯಶಸ್ವೀ ಸಂತೆಗಳ ನಂತರ, ಈಗ ೯ನೇ ಕೃಷಿ ಸಂತೆಯನ್ನು ಮತ್ತು “ರೈತ ದಿನಾಚರಣೆ”
ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಮೂರು ನೂತನ ಕಟ್ಟಡಗಳನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಡಿ.ಕೆ. ಶಿವಕುಮಾರ್, ಸನ್ಮಾನ್ಯ ಉಪ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ರವರು ನೆರವೇರಿಸಿ ರೈತರೇ ದೇಶದ ಬೆನ್ನೆಲಬು – ರೈತರ ಶ್ರಮ, ಬೆವರು ಮತ್ತು ಅತ್ಮವಿಶ್ವಾಸವೇ ನಮ್ಮ ದೇಶದ ಆಸ್ತಿ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ರೈತರ ದಿನಾಚರಣೆ/ ಕಿಸಾನ್ ದಿವಸ್ ಆಚರಿಸುತ್ತಿರುವುದು ನನಗೆ ಅಪಾರ ಸಂತೋಷ ನೀಡುತ್ತಿದೆ. ಈ ದಿನವು ರೈತರ ಹಕ್ಕುಗಳು ಮತ್ತು ಗೌರವವನ್ನು ನೆನಪಿಸುವ ಮಹತ್ವದ ದಿನವಾಗಿದೆ. ರೈತನು ದೇಶದ ಆಹಾರ ಭದ್ರತೆಯ ಹರಿಕಾರ. ಅನೇಕ ಸವಾಲುಗಳ ನಡುವೆಯೂ ರೈತನು ನಿರಂತರವಾಗಿ ಶ್ರಮಿಸಿ ದೇಶವನ್ನು ಪೋಷಿಸುತ್ತಿದ್ದಾನೆ. ಕೃಷಿಯಿಲ್ಲದೆ ಜೀವನ ಸಾಧ್ಯವಿಲ್ಲ ಎಂಬ ಸತ್ಯವನ್ನು ನಾವು ಎಲ್ಲರೂ ಅರಿಯಬೇಕು. ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆ, ನವೀನ ಕೃಷಿ ತಂತ್ರಜ್ಞಾನಗಳು ಮತ್ತು ರೈತ ಕೇಂದ್ರಿತ ತರಬೇತಿಗಳು ಕೃಷಿ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡುತ್ತಿವೆ. ರೈತ ಸಮೃದ್ಧನಾದರೆ ಗ್ರಾಮೀಣ ಭಾರತ ಸಮೃದ್ಧವಾಗುತ್ತದೆ. ಗ್ರಾಮೀಣ ಭಾರತ ಬಲಿಷ್ಠವಾದರೆ ರಾಜ್ಯ ಮತ್ತು ರಾಷ್ಟç D. K. Shivakumar ಎರಡೂ ಬಲಿಷ್ಠವಾಗುತ್ತವೆ. ಇದರ ಜೊತೆ ವಿ.ವಿ.ಯ ಹಲವು ತಳಿ ತಂತ್ರಜ್ಞಾನಗಳು ರಾಜ್ಯದ ಒಟ್ಟಾರೆ ಉತ್ಪಾದನೆ-ಉತ್ಪಾದಕತೆ ಹೆಚ್ಚಿಸುವಲ್ಲಿ ನೆರವಾಗಿದ್ದು, ಸಮೃದ್ಧ ಕೃಷಿಯತ್ತ ದಿಟ್ಟ ಹೆಜ್ಜೆಯಿಟ್ಟಿದೆ ಎಂದು ಹೇಳಲು ಹರ್ಷಿಸುತ್ತೇನೆ. ಬೆಂಗಳೂರು ವಿಶ್ವವಿದ್ಯಾನಿಲಯದ “ರೈತ ಸಂತೆ” ವಿನೂತನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ರೈತರ ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ಸ್ಪಷ್ಟವಾಗಿ ಸಾಬೀತುಪಡಿಸಿದೆ. ಈ ಸಂಸ್ಥೆ ಕೇವಲ ಶಿಕ್ಷಣ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಮಾತ್ರವಲ್ಲ, ರೈತರ ಬದುಕು, ಅವರ ಆದಾಯ ಮತ್ತು ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲೂ ಮುಂಚೂಣಿಯಲ್ಲಿದೆ. ರೈತರು ತಮ್ಮ ಬೆಳೆ, ಮಣ್ಣು, ನೀರಿನ ಬಳಕೆ, ಹವಾಮಾನದಿಂದ ಪ್ರಭಾವಿತ ಸಮಸ್ಯೆಗಳು ಮತ್ತು ಇತರ ಕೃಷಿ ಸಂಬAಧಿತ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಪಡೆಯಬಹುದಾಗಿದೆ. ಇದರಿಂದ ರೈತರ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಅವರು ತಮ್ಮ ಕೃಷಿಯನ್ನು ಲಾಭದಾಯಕ ವೃತ್ತಿ ಆಗಿ ರೂಪಿಸಿಕೊಳ್ಳಲು ಉತ್ತೇಜನ ಪಡೆಯುತ್ತಾರೆ ಎಂದು ತಿಳಿಸಿ ಮುಂಬರುವ ದಿನಗಳಲ್ಲಿ ಇಂದಿನ ನಗರ ಶಾಲಾ ವಿದ್ಯಾರ್ಥಿಗಳಿಗೆ ರೈತರ ಬದುಕನ್ನು ತೋರಿಸಲು ೨ ದಿನಗಳ ಪ್ರವಾಸವನ್ನು ಕೈಗೊಳ್ಳಲು ವಿಶ್ವವಿದ್ಯಾನಿಲಯಕ್ಕೆ ಸೂಚಿಸಿದರು.
D. K. Shivakumar ರೈತರದಿನವು ರೈತರ ಹಕ್ಕು ಮತ್ತು ಗೌರವವನ್ನ ನೆನೆಪಿಸುವ ದಿನ- ಡಿ.ಕೆ.ಶಿವಕುಮಾರ್
Date:
