Department of Kannada and Culture ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೇಂದ್ರ ಕಚೇರಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಡಿ. 22 ಮತ್ತು 23 ರಂದು ನಡೆದ ವಲಯ ಮಟ್ಟದ ಕಲಾ ಪ್ರತಿಭೋತ್ಸವದ ವಿವಿಧ ಸ್ಪರ್ಧೆಗಳ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಶಿವಮೊಗ್ಗ ಜಿಲ್ಲೆಯ ಕಲಾವಿದರು ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಬಾಲಪ್ರತಿಭೆ ಸ್ಪರ್ಧೆಯ ಚಿತ್ರಕಲೆಯಲ್ಲಿ ಮೌಂಟ್ ಕಾರ್ಮೆಲ್ ಶಾಲೆಯ ದಿಶಾಂತ್ ಎಂ.ಕೆ, ಜಾನಪದ ಗೀತೆಯಲ್ಲಿ ಪೋದಾರ್ ಇಂಟರ್‌ನ್ಯಾಷನಲ್ ಶಾಲೆಯ ಹೊನಲು ಎಸ್., ಹಿಂದೂಸ್ತಾನಿ/ಕ.ವಾದ್ಯ ಸಂಗೀತದಲ್ಲಿ ಸುಮೇರು ವಿ. ಸಕಲೇಶಪುರ, ಹಿಂದೂಸ್ತಾನಿ/ಕ. ಸಂಗೀತ ಹಾಡುಗಾರಿಕೆಯಲ್ಲಿ ಪಿ.ಇ.ಎಸ್. ಶಾಲೆಯ ಜೀವಿತ ಮೌನೇಶ್ ಆಯ್ಕೆಯಾದವರು.
Department of Kannada and Culture ಕಿಶೋರ ಪ್ರತಿಭೆ ಸ್ಪರ್ದೆಯ ಶಾಸ್ತ್ರೀಯ ನೃತ್ಯದಲ್ಲಿ ತೀರ್ಥಹಳ್ಳಿ ವಾಗ್ದೇವಿ ಪ್ರೌಢಶಾಲೆಯ ದಿತಿ ಹೆಚ್.ಎಸ್., ಸುಗಮ ಸಂಗೀತದಲ್ಲಿ ಪಿ.ಇ.ಎಸ್. ಶಾಲೆಯ ನವನೀತ ರಾಜ್ ಆಯ್ಕೆಯಾದವರು ಯುವಪ್ರತಿಭೆ ಸ್ಪರ್ಧೆಯ ಸುಗಮ ಸಂಗೀತ ದಲ್ಲಿ ಸೊರಬದ ಭುವನ್, ಆಶುಭಾಷಣದಲ್ಲಿ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಶಿವಮೊಗ್ಗದ ವಿಸ್ಮಿತ ವಿ., ಹಿಂದೂಸ್ತಾನಿ/ಕ. ಸಂಗೀತ ಹಾಡುಗಾರಿಕೆಯಲ್ಲಿ ಶಿವಮೊಗ್ಗದ ಚಿನ್ಮಯಿ ನಾಗೇಂದ್ರ ಆಯ್ಕೆಯಾದವರು.
