Shimoga Riverside Karnataka ರೋಟರಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುವ ಜತೆಯಲ್ಲಿ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಸೇವೆಯೊಂದಿಗೆ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ರೋಟರಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಹೇಳಿದರು.
ಶಿವಮೊಗ್ಗ ನಗರದಲ್ಲಿ ರೋಟರಿ ಜಿಲ್ಲೆ 3182ರ ಆಶ್ರಯದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಅವರ ಆತಿಥ್ಯದಲ್ಲಿ ಪಿಇಎಸ್ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮಲೆನಾಡು ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೋಟರಿ ಎಂದರೆ ಕೇವಲ ಸಭೆ ಅಥವಾ ಯೋಜನೆಗಳು ಅಲ್ಲ. ಶಿಸ್ತಿನ ಜೀವನ, ಸೇವಾಭಾವ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ವಿಶೇಷ ಸಂಸ್ಥೆ. ನಾಲ್ಕು ಜಿಲ್ಲೆಗಳ 87 ಕ್ಲಬ್‌ಗಳ ಸದಸ್ಯರು ಒಂದೇ ವೇದಿಕೆಯಲ್ಲಿ ಸೇರಿ ಕ್ರೀಡೋತ್ಸವ ಯಶಸ್ವಿಗೊಳಿಸಿರುವುದು ರೋಟರಿ ಬಂಧುತ್ವದ ಜೀವಂತ ಸಾಕ್ಷಿ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಕ್ರೀಡೆಯನ್ನು ಕೇವಲ ಪದಕ, ಬಹುಮಾನ ಅಥವಾ ಸ್ಪರ್ಧೆ ಮಿತಿಗೆ ಸೀಮಿತಗೊಳಿಸದೆ, ಆರೋಗ್ಯಕರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿ ನೋಡಬೇಕು. ನಿಯಮಿತ ವ್ಯಾಯಾಮ, ಕ್ರೀಡಾಸಕ್ತಿ ಮತ್ತು ಶಿಸ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅವಶ್ಯ. ಈ ಮೌಲ್ಯಗಳನ್ನು ರೋಟರಿ ಕ್ರೀಡೆಗಳ ಮೂಲಕ ಜನರಿಗೆ ತಲುಪಿಸುತ್ತಿರುವುದು ಶ್ಲಾಘನೀಯ ಎಂದರು.
Shimoga Riverside Karnataka ಜಿಲ್ಲಾ ಕ್ರೀಡಾ ಸಮಿತಿಯ ಚೇರ್ಮನ್ ರವಿ ಕೋಟೋಜಿ ಮಾತನಾಡಿ, ಸೇವೆ ಮತ್ತು ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳು. ಆರೋಗ್ಯವಿಲ್ಲದೆ ಸೇವೆಯೂ ಸಂಪೂರ್ಣವಾಗುವುದಿಲ್ಲ ಎಂದು ಹೇಳಿದರು. ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಪೃಥ್ವಿ ಕೆ.ರಾಯ್ ಅವರನ್ನು ಸನ್ಮಾನಿಸಲಾಯಿತು.
ಇವೆಂಟ್ ಚೇರ್ಮನ್ ಸಿ.ಎನ್.ಮಲ್ಲೇಶ್, ಜಿಲ್ಲಾ ಮಾಜಿ ಗವರ್ನರ್ ರಾಜಾರಮ್ ಭಟ್, ನಿಯೋಜಿತ ಜಿಲ್ಲಾ ಗವರ್ನರ್ ವಂಸತ್ ಹೋಬಳಿದಾರ್, ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಜಿ.ಎಸ್., ವಲಯ 10ರ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಲಕ್ಷ್ಮಣ್ ಗೌಡ, ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ, ಇವೆಂಟ್ ಸೆಕ್ರೆಟರಿ ಬಸವರಾಜ, ಎಂ.ಆರ್.ನಿತಿನ್ ಯಾದವ್, ಮಾಜಿ ಸಹಾಯಕ ಗವರ್ನರ್ ಎಂ.ಪಿ.ಆನಂದ್ ಮೂರ್ತಿ, ರೋಟರಿ ಜಿಲ್ಲಾ ಸೆಕ್ರೆಟರಿ (ಅಡ್ಮಿನ್) ಜಲೇಂದ್ರ ಡಿ.ಎಂ., ಜಿಲ್ಲಾ ಮಾಜಿ ಗವರ್ನರ್‌ಗಳು, ಮಾಜಿ ಸಹಾಯಕ ಗವರ್ನರ್‌ಗಳು, ಜಿಲ್ಲಾ ಹಾಗೂ ಕ್ಲಬ್ ಮಟ್ಟದ ನಾಯಕರು ಉಪಸ್ಥಿತರಿದ್ದರು.
Shimoga Riverside Karnataka ರೋಟರಿ ಸಂಸ್ಥೆಯು ಸೇವೆಯೊಂದಿಗೆ ಸದೃಢ ಆರೋಗ್ಯ ರಕ್ಷಣೆಯನ್ನೂ ಪ್ರೋತ್ಸಾಹಿಸುತ್ತದೆ- ಕೆ.ಪಾಲಾಕ್ಷ
Date:
