BhadravatiNews ಮಾನ್ಯ ಭಾರತ ಚುನಾವಣಾ ಆಯೋಗ, ನವದೆಹಲಿ ಹಾಗೂ ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು, ಬೆಂಗಳೂರು ರವರ ನಿರ್ದೇಶನದ ಮೇರೆಗೆ ಮುಂಬರುವ ದಿನಗಳಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕಾರ್ಯ(ಎಸ್‌ಐಆರ್-ಸ್ಪೆಷಲ್ ಇಂಟೆನ್ಸಿವ್ ರಿವಿಷನ್) ಪ್ರಾರಂಭವಾಗಲಿದ್ದು, ಇದಕ್ಕೆ ಪೂರಕವಾಗಿ 112-ಭದ್ರಾವತಿ ವಿಧಾನ ಸಭಾ ಕ್ಷೇತ್ರದಲ್ಲಿ 2002 ಮತ್ತು 2025ರ ಮತದಾರರ ಪಟ್ಟಿಯ ಮ್ಯಾಪಿಂಗ್ ಮತ್ತು ಪ್ರೋಜಿನಿ (ಸಂತತಿ ಸೇರ್ಪಡೆ-18 ವರ್ಷ ಮೇಲ್ಪಟ್ಟ 40 ವರ್ಷದೊಳಗಿನ ಮತದಾರರು) ಕಾರ್ಯ ನಡೆಯುತ್ತಿದೆ.
BhadravatiNews 2002 ರಲ್ಲಿ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು 2025 ರ ಮತದಾರರ ಪಟ್ಟಿಯೊಂದಿಗೆ ಗುರುತಿಸಿ ಮ್ಯಾಪಿಂಗ್ ಮತ್ತು ಪ್ರೊಜಿನಿ ಕಾರ್ಯ ನಡೆಸಬೇಕಾಗಿರುತ್ತದೆ. ಆದ್ದರಿಂದ 112-ಭದ್ರಾವತಿ ವಿಧಾನ ಸಭಾ ಮತಕ್ಷೇತ್ರದಲ್ಲಿರುವ ಮತದಾರರು ತಾವು ಮತದಾನ ಮಾಡುವ ಕೇಂದ್ರದಲ್ಲಿ ಬಿ.ಎಲ್.ಓ ರವರನ್ನು ಭೇಟಿಯಾಗಿ ಪ್ರಸ್ತುತ ತಮ್ಮ ಮತದಾರರ ಗುರುತಿನ ಚೀಟಿಯೊಂದಿಗೆ 2002 ರಲ್ಲಿ ನೀವು ಮತದಾನ ಮಾಡಿದ ಗುರುತಿನ ಚೀಟಿ, ಮತದಾನ ಮಾಡಿದ ಮತಕ್ಷೇತ್ರ, ಮತದಾನ ಕೇಂದ್ರ, ಕ್ರಮ ಸಂಖ್ಯೆಯನ್ನು ಸಂಬAಧಪಟ್ಟ ಬಿ.ಎಲ್.ಓ ರವರಿಗೆ ತಿಳಿಸಿ ಅಥವಾ ಹಾಜರುಪಡಿಸಿ ಮ್ಯಾಪಿಂಗ್ ಮಾಡಿಸಿಕೊಳ್ಳಲು ಈ ಮೂಲಕ 112-ಭದ್ರಾವತಿ ವಿಧಾನ ಸಭಾ ಮತಕ್ಷೇತ್ರದ ಮತದಾರರಲ್ಲಿ ಸಹಾಯಕ ಮತದಾರರ ನೊಂದಣಾಧಿಕಾರಿ 112-ಭದ್ರಾವತಿ ವಿಧಾನ ಸಭಾ ಕ್ಷೇತ್ರ ಹಾಗೂ ತಹಶೀಲ್ದಾರ್, ಭದ್ರಾವತಿ ತಾಲ್ಲೂಕು ಇವರು ಕೋರಿದ್ದಾರೆ.
Bhadravati News ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ: ತಹಶೀಲ್ದಾರ್ ಪ್ರಕಟಣೆ.
Date:
