Shivamogga City Corporation ಆಹಾರ ಸುರಕ್ಷತಾ ಕಾಯ್ದೆಯಂತೆ ಹೋಟೆಲ್, ತಿಂಡಿ ಅಂಗಡಿಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಮಾರಕವಾದ ರಾಸಾಯನಿಕ ಬಣ್ಣಗಳನ್ನು ಮತ್ತು ಟೇಸ್ಟಿಂಗ್ ಪೌಡರ್ (ಅಜಿನಮೋಟೋ) ಬಳಸುವಂತಿಲ್ಲ. ಇವುಗಳನ್ನು ಬಳಕೆ ಮಾಡಿದ ಆಹಾರವನ್ನು ತಿನ್ನುವುದರಿಂದ ಕ್ಯಾನ್ಸರ್‌ನಂತಹ ಮಾರಕರೋಗಗಳು ಬರುತ್ತವೆ ಎನ್ನುವ ಕಾರಣದಿಂದ ಸರ್ಕಾರ ಇವುಗಳನ್ನು ಬಳಕೆ ಮಾಡುವುದನ್ನು ನಿಷೇಧಿಸಿದೆ. ಆದರೆ, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವು ಹೋಟೆಲ್‌ಗಳು, ತಿಂಡಿಗಾಡಿಗಳಲ್ಲಿ ಟೇಸ್ಟಿಂಗ್ ಪೌಡರ್ ಅನ್ನು ವ್ಯಾಪಕ ಬಳಕೆ ಮಾಡುತ್ತಿದ್ದು, ಇದನ್ನು ತಡೆಯಬೇಕಿರುವ ಮಹಾನಗರ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಸುಮ್ಮನಿರುವುದನ್ನು ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ತೀವ್ರವಾಗಿ ಖಂಡಿಸುತ್ತದೆ.
ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ನಾನ್‌ವೆಜ್ ಹೋಟೆಲ್‌ಗಳು, ಚಾಟ್ಸ್ ಅಂಗಡಿಗಳು ತಲೆಯೆತ್ತಿವೆ. ಫುಟ್‌ಪಾತ್‌ಗಳಲ್ಲಿಯೂ ಚಿಕ್ಕ ಚಿಕ್ಕ ಗಾಡಿಗಳಲ್ಲಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ. ಇಂತಹ ಅಂಗಡಿಗಳಿಗೆ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ, ಅಲ್ಲಿನ ತಿನಿಸುಗಳಿಗೆ ಟೇಸ್ಟಿಂಗ್ ಪೌಡರ್, ರಾಸಾಯನಿಕ ಬಣ್ಣಗಳನ್ನು ಬಳಸದಂತೆ ನೋಡಿಕೊಳ್ಳಬೇಕು. ಆದರೆ, ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ನಿಗಾ ವಹಿಸುತ್ತಿಲ್ಲ.
ಶಿವಮೊಗ್ಗದ ಫುಡ್ ಕೋರ್ಟ್ ಸೇರಿದಂತೆ ಬಹುತೇಕ ತಿಂಡಿ-ತಿನಿಸು ಅಂಗಡಿಗಳಲ್ಲಿ ಟೇಸ್ಟಿಂಗ್ ಪೌಡರ್ ಬಳಕೆ ಮಾಡಿದ Shivamogga City Corporation ಪದಾರ್ಥಗಳನ್ನು ತಿನ್ನುತ್ತಿರುವ ಸಾರ್ವಜನಿಕರ ಆರೋಗ್ಯ ಹದಗೆಡುತ್ತಿದೆ. ಆದ್ದರಿಂದ ಕೂಡಲೇ ಪಾಲಿಕೆ ಆಯುಕ್ತರು ಎಲ್ಲಾ ಹೋಟೆಲ್, ತಿನಿಸು ಅಂಗಡಿಗಳಲ್ಲಿ ಟೇಸ್ಟಿಂಗ್ ಪೌಡರ್ ಬಳಸದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಟೇಸ್ಟಿಂಗ್ ಪೌಡರ್ ಬಳಕೆ ಮಾಡುತ್ತಿರುವವರ ವಿರುದ್ಧ ದಂಡ ವಿಧಿಸಬೇಕು. ಈ ಬಗ್ಗೆ ನಿಗಾ ವಹಿಸಬೇಕಿದ್ದ ಪಾಲಿಕೆ ಆರೋಗ್ಯಾಧಿಕಾರಿಗಳು ಕರ್ತವ್ಯಲೋಪ ಎಸಗಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ. ಈ ಸಂದರ್ಭದಲ್ಲಿ NSUI ನಗರಾಧ್ಯಕ್ಷರಾದ ರವಿಕುಮಾರ್ ನಗರ ಉಪಾಧ್ಯಕ್ಷರಾದ ಆದಿತ್ಯ, ಸುಭಾನ್ ಮತ್ತು ಪದಾಧಿಕಾರಿಗಳಾದ ವರುಣ್ ಪಂಡಿತ್, ಶ್ರೀಕಾಂತ್, ವಿಕ್ರಂ, ಅಭಿಷೇಕ್, ವಿಕಾಸ್, ಪ್ರಮೋದ್,ಥೌಪಿಕ್, ಹಾಲಸ್ವಾಮಿ, ಸೃಜನ್, ಕೌಶಿಕ್, ಯೂಸೋಫ್, ರಿಹಾನ್, ಕಿರಣ್, ಪ್ರಜ್ವಲ್, ಸಾದ್ ಇನ್ನೂ ಸಾಕಷ್ಟು NSUI ಪದಾಧಿಕಾರಿಗಳು ಪಾಲ್ಗೊಂಡಿ ಆಯುಕ್ತರಿಗೆ ಮನವಿ ಸಲ್ಲಿಸಿದರು
Shivamogga City Corporation ಹೋಟೆಲ್ & ತಿಂಡಿ ಗಾಡಿಗಳಲ್ಲಿ ತಿನಿಸುಗಳಿಗೆ ರಾಸಾಯನಿಕ ಬಣ್ಣ, ಟೇಸ್ಟಿಂಗ್ ಪುಡಿ ಬಳಕೆ ವಿರುದ್ಧ ಕ್ರಮಕ್ಕೆ ಮಹಾನಗರ ಪಾಲಿಕೆಗೆ ಮನವಿ
Date:
