Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, , ಪ್ರಾದೇಶಿಕ ಕಛೇರಿ, ಹುಬ್ಬಳ್ಳಿ ಇವರುಗಳ ಸಂಯುಕ್ತ ಸಹಭಾಗಿತ್ವದಲ್ಲಿ ದಿನಾಂಕ:06.12.2025ನೇ ಶನಿವಾರ ಸಂಜೆ 4.45ಕ್ಕೆ ಸಂಘದ ಶಾಂತಲಾ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ ಯೋಜನೆ ಅಡಿಯಲ್ಲಿ ಸಾಮಾಜಿಕ ಭದ್ರಾತಾ ಸೌಲಭ್ಯ ವಿಸ್ತರಣಾ ಅರಿವು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮವನ್ನು ಶ್ರೀ ಕೆ.ರಘುರಾಮನ್,ಜಂಟಿ ನಿರ್ದೇಶಕರು, ಇ.ಎಸ್.ಐ ಪ್ರಾದೇಶಿಕ ಕಛೇರಿ ಹುಬ್ಬಳ್ಳಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಿ.ಗೋಪಿನಾಥ್‌ರವರು ವಹಿಸಲಿರುವರು ಮತ್ತು ಇ.ಎಸ್.ಐ ಕಾರ್ಪೊರೇಶನ್ ಶಿವಮೊಗ್ಗ ಶಾಖಾ ಕಚೇರಿಯ ವ್ಯವಸ್ಥಾಪಕರಾದ ಶ್ರೀಮತಿ ಎಂ.ಎ ಆಶಾದೇವಿಯವರು ಉಪಸ್ಥಿತರಿರುತ್ತಾರೆ. ಯೋಜನೆ ಕಾಯಿದೆಯಡಿಯಲ್ಲಿ ಸಾಮಾಜಿಕ ಭದ್ರತಾ ವ್ಯಾಪ್ತಿಗೊಳಪಡುವ ಉಪಯುಕ್ತ ವಿಶೇಷ ಉಪಕ್ರಮವಾಗಿದೆ. ಈ ಯೋಜನೆ 31ನೇ ಡಿಸೆಂಬರ್ 2025ವರೆಗೂ ಸಕ್ರೀಯವಾಗಿದ್ದು ದಂಡ ರಹಿತವಾಗಿ ನೊಂದಣಿ ಮಾಡಲಾಗುವುದಾಗಿರುತ್ತದೆ. Shivamogga District Chamber of Commerce and Industry, ಇ.ಎಸ್.ಐ ವ್ಯಾಪ್ತಿಗೊಳಪಡುವ ಶಿವಮೊಗ್ಗ ಜಿಲ್ಲೆಯ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಅರಿವು ಕಾರ್ಯಾಗಾರದಲ್ಲಿ ಭಾಗಿಗಳಾಗಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆದು ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ ಹಾಗೂ ಕಾರ್ಯಕ್ರಮಕ್ಕೆ ಸಂಘದ ಸದಸ್ಯ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ಲೆಕ್ಕಪರಿಶೋಧಕರು, ತೆರಿಗೆ ಸಲಹೆಗಾರರು, ವೃತ್ತಿಪರರು, ಸಂಸ್ಥೆಯ ಸದಸ್ಯರುಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಗೌರವ ಕಾರ್ಯದರ್ಶಿ ಶ್ರೀ ಎ.ಎಂ. ಸುರೇಶ್‌ರವರು ಸಂಘದ ಪ್ರಕಟಣೆಯಲ್ಲಿ ಕೋರಿದ್ದಾರೆ.
ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ
Date:
