ಶಿವಮೊಗ್ಗದ ವಕೀಲರಾದ ಶ್ರೀಯುತ ಕೆ.ಸಿ.ಬಸವರಾಜ್ ಮತ್ತು ಶ್ರೀಮತಿ ವಿನೋದ ರವರ ಪುತ್ರ ದನರಾಜ್ ಎಸ್. ಬಿ. ರವರು ಸ್ವೀಡಜ್ ರ್ ಲ್ಯಾಂಡ್ ನ ಯೂರೋಪಿಯನ್ ಸೋಸೈಟಿ ಫಾರ್ ಮೆಡಿಕಲ್ ಅನ್ಕೊಲಜಿ ರವರು ಈ ವರ್ಷ ಡಿಸೆಂಬರ್ 5 ರಿಂದ 7 ನೆಯ ತಾರೀಕಿನ ವರೆಗೆ ಸಿಂಗಾಪುರ್ ದೇಶದಲ್ಲಿ ಏರ್ಪಡಿಸಿರುವ ಏಷ್ಯಾ ಆದಿವೇಶನಕ್ಕೆ ” ಕ್ಯಾನ್ಸರ್ ಕಾಯಿಲೆ ” ಬಗ್ಗೆ ತಾವು ಕೈಗೊಂಡ ಸಂಶೋಧನೆಯ ಅಂಶಗಳ ಕುರಿತು ವಿಚಾರ ಮಂಡಿಸಲು ತೆರಳಿದ್ದಾರೆ. YHAI ಸದಸ್ಯರಾಗಿರುವ ಅವರು ಈಗಾಗಲೇ ರಾಜ್ಯ – ರಾಷ್ಟ್ರ ಮಟ್ಟದ ಅನೇಕ ಚಾರಣಗಳಲ್ಲಿ ಪಾಲ್ಗೊಂಡಿದ್ದಾರೆ, ಎಂ. ಎಸ್ಸಿ, ಬಿಎಡ್ ಪದವೀದರರಾದ ಧನ್ ರಾಜ್ ರವರು ಪ್ರಸ್ತುತ ಮಣಿಪಾಲ್ ಅಕಾಡೆಮಿ ಆಫ಼್ ಹೈಯೆರ್ ಎಜುಕೇಶನ್ ನಲ್ಲಿ ಓರಲ್ ಕ್ಯಾನ್ಸರ್ ಕುರಿತು ಸಂಶೋದನೆಯಲ್ಲಿ ತೊಡಗಿದ್ದಾರೆ ( PhD) . ವಿವಿಧ ದೇಶಗಳ ಹೆಸರಾಂತ ವಿಜ್ಞಾನಿಗಳು ಪಾಲ್ಗೊಳ್ಳಲಿರುವ ಏಷ್ಯಾ ಮಟ್ಟದ ಅಂತರ್ ರಾಷ್ಟ್ರೀಯ ಸಮಾವೇಶಕ್ಕೆ ಶಿವಮೊಗ್ಗದ ಪ್ರತಿಬಾವಂತ ಯುವಕ ಶ್ರೀ ಧನ್ ರಾಜ್ ಎಸ್. ಬಿ. ರವರಿಗೆ ಆಮಂತ್ರಣ ದೊರಕಿರುವುದಕ್ಕೆ ಅವರಿಗೆ ಶುಭಾಷಯಗಳು.
ಕ್ಯಾನ್ಸರ್ ಬಗ್ಗೆ ಸಂಶೋಧನಾ ಪ್ರಬಂಧ ಮಂಡಿಸಲು ಶಿವಮೊಗ್ಗದ ಎಸ್.ಬಿ.ಧನರಾಜ್ ಸಿಂಗಾಪುರಕ್ಕೆ ಪ್ರಯಾಣ
Date:
