Shivamogga District Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿರುವ ನೊಂದಾಯಿತ ಬೌದ್ಧ ವಿಹಾರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಧಮ್ಮಾಚಾರಿಗಳು ಮತ್ತು ಸಹಾಯಕ ಧಮ್ಮಾಚಾರಿಗಳಿಗೆ ಮಾಸಿಕ ಗೌರವಧನವನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಜಿ ನಮೂನೆಯನ್ನು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಬೌದ್ದ ವಿಹಾರ ನೊಂದಣಿ ಪ್ರತಿ, ಆಡಳಿತ ಮಂಡಳಿಯ ಪ್ರತಿ, ಧಮ್ಮಾಚಾರಿಗಳ ಭಾವಚಿತ್ರ, ನಿವಾಸ ದೃಢೀಕರಣ, ಬ್ಯಾಂಕ್ ಖಾತೆ ವಿವರ, ಆಧಾರ್ ಕಾರ್ಡ್ ಪ್ರತಿ, ಸೇವಾ ದೃಢಿಕರಣ ಪತ್ರ ಹಾಗೂ ಧಾರ್ಮಿಕ ವಿದ್ಯಾರ್ಹತೆ ಕುರಿತು ಅಗತ್ಯ ದಾಖಲೆಗಳೊಂದಿಗೆ ಡಿ.12 ರೊಳಗಾಗಿ ಸಲ್ಲಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ:08182-220206 ಗೆ ಸಂಪರ್ಕಿಸಬಹುದು.
Shivamogga District Minority Welfare Department ಬೌದ್ಧವಿಹಾರಗಳಲ್ಲಿನ ಧಮ್ಮಾಚಾರಿ ಮತ್ತು ಸಹ ಧಮ್ಮಾಚಾರಿಗಳ ಮಾಸಿಕ ಗೌರವ ಧನಕ್ಕೆ ಅರ್ಜಿ ಆಹ್ವಾನ
Date:
