Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು ಎಂದು ಉಷಾ ನರ್ಸಿಂಗ್ ಹೋಂ ವೈದ್ಯೆ ಡಾ. ರಕ್ಷಾ ರಾವ್ ಹೇಳಿದರು.
ಶಿವಮೊಗ್ಗ ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ದೈವಜ್ಞ ಮಹಿಳಾ ಮಂಡಳಿ ವತಿಯಿಂದ ಭಾರತೀಯ ವೈದ್ಯಕೀಯ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಮತ್ತು ಜೀವ ಸುರಕ್ಷತೆ ತಿಳವಳಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು ಮೂರು ವರ್ಷಕ್ಕೆ ಒಂದು ಬಾರಿ ಮಾಡಿಸಿಕೊಳ್ಳಬೇಕು ಹಾಗೂ ಮ್ಯಾಮೊಗ್ರಫಿ ಟೆಸ್ಟ್ ಅನ್ನು ಎರಡು ವರ್ಷಗಳಿಗೆ ಒಂದು ಬಾರಿ ಮಾಡಿಸಬೇಕು ಎಂದು ತಿಳಿಸಿದರು.
Indian Medical Association ದೈವಜ್ಞ ಮಹಿಳಾ ಮಂಡಳಿ ಶಿವಮೊಗ್ಗ ಅಧ್ಯಕ್ಷೆ ಸೀಮಾ ಸದಾನಂದ್ ಮಾತನಾಡಿ, ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅದರ ಬಗ್ಗೆ ಮುಂಚಿತವಾಗಿ ಜಾಗ್ರತೆ ವಹಿಸಲು ಅದಕ್ಕೆ ಸಂಬಂಧಿಸಿದ ತಪಾಸಣೆ ಪ್ಯಾಪ್ಸ್ ಮಿಯರ್ ಮತ್ತು ಮ್ಯಾಮೋಗ್ರಫಿ ತಪಾಸಣೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
117 ಮಹಿಳೆಯರು ಆರೋಗ್ಯ ತಪಾಸಣೆ ಮಾಡಿಕೊಂಡರು. ಮಹಿಳೆಯರು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಲು ಡಾ. ರಕ್ಷಾ ರಾವ್ ಅಗತ್ಯ ಮಾರ್ಗದರ್ಶನ ನೀಡಿ ಕ್ಯಾನ್ಸರ್ ಬಗ್ಗೆ ವಿವರಿಸಿದರು.
ದೈವಜ್ಞ ಮಹಿಳಾ ಮಂಡಳಿ ಶಿವಮೊಗ್ಗ ಕಾರ್ಯದರ್ಶಿ ವಾಣಿ ಪ್ರವೀಣ್, ಉಪಾಧ್ಯಕ್ಷೆ ಪ್ರೇಮ ರಮೇಶ್, ಅರ್ಚನಾ ಅಣ್ಣಪ್ಪ, ಸಹ ಕಾರ್ಯದರ್ಶಿ ಸುಧಾ ಸುರೇಶ್, ಚೇತನಾ ವಾದಿರಾಜ್, ಖಜಾಂಚಿ ರೂಪ ರವಿ, ನಿರ್ದೇಶಕರು, ಮಾಜಿ ಅಧ್ಯಕ್ಷರು ಹಾಗೂ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.
Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ ಮಾಡಿಸಬೇಕು- ಡಾ.ರಕ್ಷಾರಾವ್
Date:
