DC Shivamogga ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ಮುಜರಾಯಿ ದೇವಾಲಯಗಳಲ್ಲಿ ಕಡ್ಡಾಯವಾಗಿ ಧಾರ್ಮಿಕ ದತ್ತಿ ಇಲಾಖೆ ಮುಜರಾಯಿ ದೇವಾಲಯ ಕರ್ನಾಟಕ ಸರ್ಕಾರ ಎಂದು ನಾಮಫಲಕ ಅಳವಡಿಸಲು ಕ್ರಮ ವಹಿಸಬೇಕೆಂದು ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ತಹಶೀಲ್ದಾರ್‌ಗಳಿಗೆ ಸೂಚಿಸಿದರು.
ದಿನಾಂಕ:02.12.2025 ರಂದು ಜಿಲ್ಲಾ ವ್ಯಾಪ್ತಿಯ ಮುಜರಾಯಿ “ಸಿ” ವರ್ಗದ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ರಚನೆ, ಜೀರ್ಣೋದ್ದಾರ ಹಾಗೂ ಅರ್ಚಕರ ನೇಮಕಾತಿ ಹಾಗೂ ಇತರೆ ವಿಚಾರಗಳ ಕುರಿತು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ಮುಜರಾಯಿ ದೇವಾಲಯಗಳಿಗೆ ಕಡ್ಡಾಯವಾಗಿ ಸಿ.ಸಿ ಟಿ.ವಿ ಅಳವಡಿಸುವಂತೆ, ಅಧಿಸೂಚಿತ ದೇವಾಲಯಗಳಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇದಿತ ದೇವಾಲಯದ ಎಂದು ನಾಮಫಲಕ ಅಳವಡಿಸುಂತೆ ಸೂಚಿಸಿದರು.
ಶ್ರೀ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯ ಮುಜರಾಯಿ ಅಧಿಸೂಚಿತ ಸಂಸ್ಥೆಯಾಗಿದ್ದು, ದೇವಾಲಯದ ಅರ್ಚಕರು / ನೌಕರರು ಇಲಾಖಾ ಹೆಸರನ್ನು ಹೊರತು ಪಡಿಸಿ ಸ್ವ-ಇಚ್ಛೆಯ ಅನುಸಾರ ಸೇವಾದರಗಳನ್ನು ಮುದ್ರಿಸಿ ಭಕ್ತಾಧಿಗಳು / ಸಾರ್ವಜನಿಕರಿಗೆ ಹಂಚಿಕೆ ಮಾಡಿದ್ದು, ಈ ಬಗ್ಗೆ ತಹಶೀಲ್ದಾರ್ ರವರಿಗೆ ಸೂಕ್ತ ಕ್ರಮ ಜರುಗಿಸಲು ಸೂಚಿಸಿದ ಅವರು ಅಧಿಸೂಚಿತ ದೇವಾಲಯಗಳು/ದೇವಾಲಗಳ ಆಸ್ತಿಯನ್ನು ಸರ್ವೆ ಮಾಡಿಸಿ ವರದಿಯನ್ನು ಸಲ್ಲಿಸುವಂತೆ ತಹಶೀಲ್ದಾರಿಗೆ ತಿಳಿಸಿದರು.
DC Shivamogga ಭದ್ರಾವತಿ ತಾಲ್ಲೂಕು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವೈಕುಂಟ ಏಕಾದಶಿಯ ಕಾರ್ಯಕ್ರಮದಲ್ಲಿ ನಡೆದ ಹಣ ದುರುಪಯೋಗದ ಕುರಿತು ತಕ್ಷಣದಲ್ಲಿ ವರದಿಯನ್ನು ಸಲ್ಲಿಸಲು ತಹಶೀಲ್ದಾರ್, ಭದ್ರಾವತಿ ಇವರಿಗೆ ಸೂಚಿಸಿದರು.
ಶ್ರೀ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರು ಸೇವಾದರ ಪಟ್ಟಿಯನ್ನು ಅಳವಡಿಸದೇ ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆಯದೇ ಭಕ್ತಾಧಿಗಳಿಗೆ ರಶೀದಿಯನ್ನು ನೀಡದೇ ದೇವಾಲಯದ ಆದಾಯಕ್ಕೆ ಕುಂಟಿತರಾಗಿರುತ್ತಾರೆ. ದೇವಸ್ಥಾನದ ರಥೋತ್ಸವದ ಆಮಂತ್ರಣ ಪತ್ರಿಕೆಯನ್ನು ಅನುಮತಿ ಇಲ್ಲದೆ ಮುದ್ರಿಸಿದ್ದು, ಹಾಗೂ ಪತ್ರಿಕೆಯಲ್ಲಿ ಸೇವಾವಿವರದ ಮೊತ್ತವನ್ನು ಸ್ವ- ಇಚ್ಛೆಯಿಂದ ಮುದ್ರಿಸಿರುತ್ತಾರೆ ಈ ರೀತಿಯಾಗಿ ಸಾರ್ವಜನಿಕರಿಂದ ಸಾಕಷ್ಟು ಹಣ ಪಡೆಯುತ್ತಿದ್ದು, ದೇವಸ್ಥಾನದ ಖಾತೆ ಜಮಾ ಮಾಡದೇ ಇರುವ ಕುರಿತು ಗಮನಕ್ಕೆ ಬಂದಿರುವುದಾಗಿ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ವಿವರವಾದ ವರದಿಯನ್ನು ನೀಡಲು ತಹಶೀಲ್ದಾರ್, ಶಿವಮೊಗ್ಗ ಇವರಿಗೆ ಸೂಚಿಸಿದರು.
ಸೊರಬ ತಾಲ್ಲೂಕಿನ ಶ್ರೀ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಭ ದೇವಾಲಯದ ಕಾರ್ಯನಿರ್ವಹಣಾಧಿಕಾರಿಗಳು ದೇವಾಲಯಕ್ಕೆ ಹರಿಕೆ ರೂಪದಲ್ಲಿ ಬಂದಂತಹ ಸೀರೆಗಳನ್ನು ಶಿಷ್ಠಾಚಾರದ ನೆಪದಲ್ಲಿ ಮನಬಂದಂತೆ ಹಂಚಿಕೆ ಮಾಡುತ್ತಿರುವುದು ಹಾಗೂ ಹರಕೆ ರೂಪದಲ್ಲಿ ಸ್ವೀಕೃತವಾದ ಸೀರೆ, ಅಕ್ಕಿ, ಎಣ್ಣೆ ಇತರೆ ವಸ್ತುಗಳ ಬಗ್ಗೆ ಯಾವುದೇ ರಿಜಿಸ್ಟರ್‌ಗಳ ನಿರ್ವಹಣೆ ಇಲ್ಲದೇ ಇರುವ ಬಗ್ಗೆ ದೇವಾಲಯದಲ್ಲಿ ಬರುವಂತಹ ಭಕ್ತಾಧಿಗಳಿಗೆ ತುಂಬಾ ವರಟಾಗಿ ವರ್ತಿಸುತ್ತಿರುತ್ತಾರೆ. ಎಂಬ ಕುರಿತು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ವಿವರವಾದ ವರದಿಯನ್ನು ನೀಡುವಂತೆ ಸೊರಬದ ತಹಶೀಲ್ದಾರಿಗೆ ಸೂಚಿಸಿದರು.
ಸಾಗರ ತಾಲ್ಲೂಕಿನ ಮಹಾಗಣಪತಿ ದೇವಾಲಯದ 2024-25ನೇ ಸಾಲಿನ ಜಾತ್ರಾ ಹೆಚ್ಚುವರಿ ಖರ್ಚು ಕುರಿತು ಹಾಗೂ 2025-26ನೇ ಸಾಲಿನಲ್ಲಿ ಸ್ಪಾಲ್ ಹರಾಜಿನಿಂದ ಸಂಗ್ರಹವಾದ ಮೊತ್ತವನ್ನು ವಿಳಂಬವಾಗಿ ದೇವಾಲಯದ ಖಾತೆಗೆ ಜಮಾ ಮಾಡಿರುವ ಕುರಿತು ವಿವರವಾದ ವರದಿಯನ್ನು ಸಲ್ಲಿಸುವ ಬಗ್ಗೆ ಸೂಚನೆ ನೀಡಿದರು.
ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿ ‘ಸಿ’ ವರ್ಗದ ದೇವಸ್ಥಾನಗಳ ಸುಗಮ ಆಡಳಿತ ನಿರ್ವಹಣೆಗೆ ವ್ಯವಸ್ಥಾಪನಾ ಸಮಿತಿಯನ್ನು ರಚನೆ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಶ್ರೀ ಜೇನುಕಲ್ಲಮ್ಮ ದೇವಸ್ಥಾನ, ಹಾಗೂ “ಸಿ” ವರ್ಗದ 27 ಸಂಸ್ಥೆಗಳ ವ್ಯವಸ್ಥಾಪನಾ ಸಮಿತಿಯನ್ನ ರಚಿಸಲಾಯಿತು.
ಸಭೆಯಲ್ಲಿ ಧಾರ್ಮಿಕ ಪರಿಷತ್ ಸದಸ್ಯರಾದ ಸೆಲ್ವಕುಮಾರ್.ಸಿ, ನಿವೃತ್ತ ನ್ಯಾಯಾದೀಶರು, ವಿಧೂಶಿ ಗೀತಾದಾತಾರ್, ಎಂ.ಶಿವಲಿಂಗಪ್ಪ, ವರಲಕ್ಷ್ಮೀ, ಎನ್. ಉಮಾಪತಿ, ಎಸ್.ಡಿ ಪ್ರವೀಣ್ ಕುಮಾರ್, ಮುಜರಾಯಿ ತಹಶೀಲ್ದಾರರು ಹಾಜರಿದ್ದರು.
DC Shivamogga ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇಗುಲಗಳಲ್ಲಿ ” ಮುಜರಾಯಿ ದೇವಾಲಯ” ನಾಮಫಲಕ & ಸಿಸಿಟಿವಿ ಅಳವಡಿಕೆ ಕಡ್ಡಾಯ -‘ ಡೀಸಿ’ ಗುರುದತ್ತ ಹೆಗಡೆ
Date:
