Department of Kannada and Culture ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಾಜ್ಯಾದ್ಯಂತ ಮತ್ತು ಹೊರರಾಜ್ಯಗಳಲ್ಲಿ ಕ್ರಿಯಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ನಾಡಿನ ಭಾಷಾ ಸಂವರ್ಧನ, ಕಲೆ, ಸಾಹಿತ್ಯ, ಸಂಗೀತ, ಜಾನಪದ, ನೃತ್ಯ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಸಂಘ-ಸಂಸ್ಥೆಗಳಿಗೆ ಧನಸಹಾಯ ನೀಡಲು ಹಾಗೂ ಕಲಾವಿದರಿಗೆ ವಾದ್ಯ ಪರಿಕರ ಮತ್ತು ವೇಷಭೂಷಣಗಳ ಖರೀದಿಗೆ ಸಹಾಯಧನ ಹಾಗೂ ಚಿತ್ರಕಲೆ/ಶಿಲ್ಪಕಲಾಕೃತಿಗಳ ಪ್ರದರ್ಶನಕ್ಕೆ ಸಹಾಯಧನ ನೀಡಲು 2025-26ನೇ ಸಾಲಿನ ಸಾಮಾನ್ಯ/ಪ.ಜಾ/ಪ.ಪಂ. ಉಪಯೋಜನೆಯಡಿ ಸೇವಾಸಿಂದು ಮುಖಾಂತರ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಸೇವಾಸಿಂಧು sevesindhu.karnataka.gov.in ಮೂಲಕ ಡಿ.30ರೊಳಗಾಗಿ ಅರ್ಜಿ ನ್ನು ಸಲ್ಲಿಸುವುದು ಹಾಗೂ ಮಾರ್ಗ ಸೂಚಗಾಗಿ ಇಲಾಖೆ ವೆಬ್ಸೈಟ್ www.kannadasiri.karnataka.gov.in ನ್ನು ಮತ್ತು ಸೇವಾಸಿಂದು ಪೋರ್ಟಲ್‌ನ್ನು ಸಂಪರ್ಕಿಸುವುದು.
Department of Kannada and Culture ಹೆಚ್ಚಿನ ಮಾಹಿತಿಗಾಗಿ 08024410547/8792662814/8792662816/08022213530/9986837037/9900337738/9449436877/9480197511/9916600027/08022241325 ಗಳನ್ನು ಹಾಗೂ ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಆಯಾ ಜಿಲ್ಲೆಯ ವ್ಯವಸ್ಥಾಪಕರು, ಸೇವಾಸಿಂಧು ಇವರನ್ನು ಸಂಪರ್ಕಿಸುವಂತೆ ಶಿವಮೊಗ್ಗ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ .
