Shivaganga Yoga Center ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆ, ವಿನೋಬ ನಗರ ಶಿವಮೊಗ್ಗ ಇದರ ಬೆಳ್ಳಿ ಹಬ್ಬವನ್ನು ಕುವೆಂಪು ರಂಗಮಂದಿರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಶಿವಗಂಗಾ ಯೋಗ ಕೇಂದ್ರದ ಗುರುಗಳಾದ ಯೋಗಾಚಾರ್ಯ ಶ್ರೀ ಸಿ.ವಿ. ರುದ್ರಾರಾಧ್ಯ ಅವರು ಮಾತನಾಡಿ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಿದರೆ ಅವರ ಕೆಲಸ ಮುಗಿಯುವುದಿಲ್ಲ, ಪ್ರತಿದಿನ ಮಕ್ಕಳಿಗೆ ಸಮಯ ನೀಡಬೇಕು ಮತ್ತು ಪರೀಕ್ಷೆ ಬಂದಾಗ ಮಾತ್ರ ಓದುವ ಬದಲು ವರ್ಷಪೂರ್ತಿ ಓದಿ ಪರೀಕ್ಷೆಯನ್ನು ಉತ್ತಮವಾಗಿ ಎದುರಿಸಿ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು. ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯು ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುತ್ತಿದ್ದು ಪಟ್ಟೇತರ ಚಟುವಟಿಕೆಗಳಲ್ಲೂ ಹೆಚ್ಚಿನ ಗಮನ ವಹಿಸುತ್ತಿರುವುದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಡಾ. ರಾಹುಲ್ ದೇವರಾಜ್ ವೈದ್ಯರು ಹಾಗೂ ಪ್ರೇರಕ ಭಾಷಣಕಾರರು ಇವರು ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧ ಹೇಗಿರಬೇಕು ಎಂಬುದನ್ನು ಮನಮುಟ್ಟುವ ರೀತಿ ತಿಳಿಸಿಕೊಟ್ಟರು. ಪೋಷಕರ ನಡೆ ನುಡಿ ಮಕ್ಕಳ ಜೀವನದ ಮೇಲೆ ತುಂಬಾ ಪರಿಣಾಮವನ್ನು ಬೀರುತ್ತದೆ ಮಕ್ಕಳು ಪೋಷಕರ ನಡೆನುಡಿಯನ್ನು ಗಮನಿಸುತ್ತಾ ಅದೇ ರೀತಿ ಅವರು ಅನುಕರಿಸಲು ಆರಂಭಿಸುವ ಕಾರಣ ನಮ್ಮ ನಡೆ ನುಡಿ ಬಹಳ ಮುಖ್ಯ. ನಾವು ಬೇರೆಯವರಿಗೆ ಎಷ್ಟು ಗೌರವವನ್ನು ನೀಡುತ್ತೇವೆಯೋ, ಅಷ್ಟು ಗೌರವ ನಮಗೆ ಮರಳಿ ಬರುತ್ತದೆ ಎಂಬುದನ್ನು ಮಕ್ಕಳಿದ್ದಾಗಲೇ ನಾವು ಕಲಿಸಿಕೊಡಬೇಕು. ಸಾಮಾಜಿಕ ಜವಾಬ್ದಾರಿ, ಹಿರಿಯರಿಗೆ ಗೌರವ ಕೊಡುವುದು, ಪರಿಸರ ಸಂರಕ್ಷಣೆ, ಎಲ್ಲರೊಡನೆ ಪ್ರೀತಿಯಿಂದ ಇರುವುದು ಈ ರೀತಿಯ ಮೌಲ್ಯಗಳನ್ನು ಮಕ್ಕಳಿದ್ದಾಗಲೇ ನಾವು ಶಾಲೆಯಲ್ಲಿ ಕಲಿಸಿಕೊಡುವುದರ ಜೊತೆ ಮನೆಯಲ್ಲಿಯೂ ಅಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು. Shivaganga Yoga Center ನಮ್ಮ ದೇಶ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡುವ ದೇಶವಾಗಿದ್ದು ನಮ್ಮ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ ದೇಶ ಸೇವೆಯನ್ನು ಬಾಲ್ಯದಿಂದಲೇ ಅಳವಡಿಸಿಕೊಳ್ಳಲು ಪೋಷಕರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಹೇಳಿದರು. ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವ ಹಾಗೆ ಚಿಕ್ಕಂದಿನಿಂದಲೇ ಒಳ್ಳೆಯ ಗುಣಗಳನ್ನು ಅಭ್ಯಾಸ ಮಾಡಿಕೊಂಡರೆ ಮನೆಗೆ ಮತ್ತು ಸಮಾಜಕ್ಕೆ ಆಸ್ತಿ ಆಗುವರು. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವ ಹೊಣೆಗಾರಿಕೆ ಪೋಷಕರದ್ದಾಗಿರುತ್ತದೆ. ಶಾಲೆಯಲ್ಲಿ ಶಿಕ್ಷಕರು ಎಷ್ಟೇ ಪ್ರಾಮಾಣಿಕ ಪ್ರಯತ್ನ ಮಾಡಿ ಹೇಳಿಕೊಟ್ಟರೂ ತಂದೆ ತಾಯಿಯ ಜವಾಬ್ದಾರಿಯು ಅಷ್ಟೇ ಇರುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು ಎಂದು ತಿಳಿಸಿದರು. ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯ ಶಿಕ್ಷಣ ಸಲಹೆಗಾರರಾದ ಡಾ. ನಾಗರಾಜ್ ಪರಿಸರ ಮಾತನಾಡಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದಂತಹ ಎಲ್ಲಾ ರೀತಿಯ ಪಟ್ಟೇತರ ಚಟುವಟಿಕೆಗಳಾದ ಯೋಗ, ಚಿತ್ರಕಲೆ, ಅಬಾಕಸ್, ಕರಾಟೆ ವ್ಯಕ್ತಿತ್ವ ವಿಕಸನ, ಸ್ಪೋಕನ್ ಇಂಗ್ಲೀಷ್, ಸಾಂಸ್ಕೃತಿಕ, ಕ್ರೀಡೆ ಹೀಗೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ನೀರೆರೆಯುವ ಕೆಲಸವನ್ನು ಈ ಸಂಸ್ಥೆಯು ಮಾಡುತ್ತಾ ಬಂದಿರುವುದು ಈ ಸಂಸ್ಥೆಯ ಹೆಗ್ಗಳಿಕೆ ಎಂದರು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ತಿಪ್ಪೇಸ್ವಾಮಿ, ಗೌರವ ಅಧ್ಯಕ್ಷರಾದ ಶ್ರೀ ಎಸ್. ಎಸ್ ಜ್ಯೋತಿಪ್ರಕಾಶ್, ಆಡಳಿತ ಮಂಡಳಿಯ ಶ್ರೀಮತಿ ಪೂಜಾ ನಾಗರಾಜ್ ಪರಿಸರ, ಶ್ರೀಮತಿ ಶೈಲಜಾ, ಶ್ರೀಮತಿ ವೀಣಾ ಸತೀಶ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಶ್ರೀ ಮಂಜುನಾಥ ಶಾಲೆಯ ವಾರ್ಷಿಕ ವರದಿ ಓದಿದರು. ಸಾಂಸ್ಕೃತಿಕ ಸಂಯೋಜಕರಾದ ಶಿಕ್ಷಕಿ ಸೋನಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಶಿಕ್ಷಕಿ ಶ್ರೀಮತಿ ಅನುರಾಧ ಕಾರ್ಯಕ್ರಮ ನಿರೂಪಿಸಿ, ಕುಮಾರಿ ತೇಜಲ್ ಎಲ್ಲರನ್ನೂ ಸ್ವಾಗತಿಸಿ , ಶಿಕ್ಷಕಿ ಅರ್ಪಿತ ಎಲ್ಲರನ್ನು ವಂದಿಸಿದರು.
Shivaganga Yoga Center ಪೋಷಕರು ಮಕ್ಕಳಿಗೆ ಪ್ರತಿ ದಿನ ಸಮಯ ನೀಡಿ ಓದಿನ ಬಗ್ಗೆ ವಿಚಾರಿಸಬೇಕು- ಸಿ.ವಿ.ರುದ್ರಾರಾಧ್ಯ
Date:
