ಶಿವಮೊಗ್ಗ ನಗರದ ಕೋಟೇ ಶ್ರೀ ಭೀಮೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಗುರು ಗೀತಾ, ದತ್ತಾತ್ರೇಯ ಹಾಗೂ ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಜಯಂತಿ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಜ.05ರವರೆಗೆ ನಡೆಯಲಿದೆ.
ಸಂಪ್ರದಾಯದಂತೆ ನಿತ್ಯ ಬೆಳಿಗ್ಗೆ 05 ರಿಂದ ಕಾಕಡಾರತಿ, ನಗರ ಸಂಕೀರ್ತನೆ ನಡೆಯಲಿದ್ದು, ಪ್ರತಿ ದಿನ ಸಂಜೆ ಪೂಜೆ, ಉಪಾನ್ಯಾಸ ಹಾಗೂ ಮಹಾ ಮಂಗಳಾರತಿ ನಡೆಯಲಿದೆ.
ಡಿ. 03ರ ಬುಧವಾರ ಹಂದಲಸು ವಾಸುದೇವ ಭಟ್ಟರಿಂದ ಶ್ರೀ ದತ್ತ ಸಂದೇಶ ಉಪನ್ಯಾಸ, ಡಿ. 04ರಂದು ದತ್ತ ಜನನ, ೦೫ರಂದು ದತ್ತಾತ್ರೇಯ ಮೂಲ ಮಂತ್ರ ಹೋಮ ನಡೆಯಲಿದೆ.
ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.
ಶಿವಮೊಗ್ಗದಲ್ಲಿ ಶ್ರೀದತ್ತ ಜಯಂತಿ & ಶ್ರೀಧರ ಸ್ವಾಮಿಗಳ ಜಯಂತಿಗೆ ಸರ್ವ ಸಿದ್ಧತೆ
Date:
