Adarsh Super Specialty Eye Hospital ಸಕ್ಕರೆ ಕಾಯಿಲೆಯಿಂದ ನಿಮ್ಮ ದೃಷ್ಟಿ ಹಾನಿಯಾಗದಂತೆ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.
ಶಿವಮೊಗ್ಗ ನಗರದ ಆದರ್ಶ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ವತಿಯಿಂದ ಲಕ್ಷ್ಮೀದೇವಿ ಚಿಟ್ಟ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಡಯಾಬಿಟಿಸ್ ಸಂಬಂಧಿತ ಕಣ್ಣಿನ ರೆಟಿನಾ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು. ಪೂರಕವಾದ ಆಹಾರಕ್ರಮವನ್ನು ಪಾಲಿಸಬೇಕು ಎಂದು ತಿಳಿಸಿದರು.
ಆದರ್ಶ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ರೆಟಿನಾ ತಜ್ಞೆ ಡಾ. ದೀಪಾ ಎಂ.ಜೆ. ಮಾತನಾಡಿ, ದೀರ್ಘಕಾಲದ ಸಕ್ಕರೆ ಕಾಯಿಲೆಯಿಂದ ಕಣ್ಣಿನ ರೆಟಿನಾದ ರಕ್ತನಾಳಗಳು ಹಾನಿಗೊಳ್ಳುತ್ತವೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ದೃಷ್ಟಿ ಹಾನಿಯಾಗಬಹುದು ಅಥವಾ ಕುರುಡುತನ ಉಂಟಾಗಬಹುದು ಎಂದು ಹೇಳಿದರು.
ಟೈಪ್ 1 ಅಥವಾ ಟೈಪ್ 2 ಡಯಾಬಿಟಿಸ್ ಇರುವವರಿಗೆ, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದರೆ, ಬಿಪಿ ನಿಯಂತ್ರಣದಲ್ಲಿ ಇಲ್ಲದಿದ್ದರೆ, ದೀರ್ಘಕಾಲದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರೆ, ಧೂಮಪಾನಿಗಳು ಮತ್ತು ರಕ್ತದಲ್ಲಿ ಕೊಬ್ಬಿನಾಂಶ ಇದ್ದರೆ ಅಪಾಯ ಹೆಚ್ಚಿರುತ್ತದೆ ಎಂದರು.
Adarsh Super Specialty Eye Hospital ಏಕಾಏಕಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ದೃಷ್ಟಿ ಅಸ್ಪಷ್ಟವಾಗುವುದು ಅಥವಾ ಬದಲಾವಣೆ ಕಾಣುವುದು. ಕಣ್ಣ ಮುಂದೆ ಕಪ್ಪು ಕಲೆಗಳು ಕಾಣುವುದು. ರಾತ್ರಿ ಸಮಯದಲ್ಲಿ ದೃಷ್ಟಿ ಕಡಿಮೆ ಆಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.
ಆರಂಭಿಕ ಹಂತಗಳಲ್ಲಿ ಯಾವುದೇ ಲಕ್ಷಣಗಳು ಕಾಣಿಸದೇ ಇರಬಹುದು. ಆದರೆ ನಿಯಮಿತ ಕಣ್ಣಿನ ತಪಾಸಣೆ ಮುಖ್ಯ ಎಂದರು. ಮಧುಮೇಹ ಇರುವ ರೋಗಿಗಳಿಗೆ ಕಣ್ಣಿನ ತಪಾಸಣೆ, ಡಯಾಬಿಟಿಕ್ ರೆಟಿನೋಪತಿ ಬಗ್ಗೆ ತಜ್ಞ ವೈದ್ಯರಿಂದ ಉಚಿತ ಸಮಾಲೋಚನೆ ನಡೆಸಲಾಯಿತು.
ಡಾ. ಮೇಘರಾಜ್ ಚಿಟ್ಟ, ಡಾ. ಅಶೋಕ್ ಟಿ., ಮಲ್ಲಿಕಾರ್ಜುನ್ ಕಾನೂರು ಮತ್ತಿತರರು ಉಪಸ್ಥಿತರಿದ್ದರು.
