B.Y.Raghavendra ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರಯವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಘೋಷಣೆ ಮಾಡಿದ್ದರು.ಆ 2024-25 ಪ್ರಕಾರ ಜಿಲ್ಲೆಯ 89,611ರೈತರಿಗೆ 113 ಕೋಟಿ 25 ಲಕ್ಷ ಪರಿಹಾರ ಬಿಡುಗಡೆ ಆಗಿದೆ ಎಂದರು.
ಅಡಕೆ, ಮಾವು, ಕಾಳು ಮೆಣಸು ಬೆಳೆಗಳಿಗೆ ವಿಮೆ ಸಿಕ್ಕಿದೆ.ಅದರೆ ಕೆಲವೆಡೆ ದೂರು ಬರುತ್ತಿದೆ.ರೈತರು ತಾವು ಕಟ್ಟಿದ ಪ್ರಿಮೀಯಂ ಕಂತಿನ ಹಣದಷ್ಟೂ ಪರಿಹಾರ ಸಿಕ್ಕಿಲ್ಲ ಎಂದು ದೂರುತ್ತಿದ್ದಾರೆ.
ಈ ಬಗ್ಗೆ ರೈತರೊಂದಿಗೆ ಸಭೆ ನಡೆಸಿದಾಗ ಶಿವಮೊಗ್ಗ ಕ್ಷೇತ್ರಕ್ಕೆ ಇನ್ನೂ 100 ಕೋಟಿಯಷ್ಟು ಪರಿಹಾರ ಬೇಕಿತ್ತು ಎಂದು ಹೇಳಿದರು.
ಪ್ರತಿ ೩ ವರ್ಷಕ್ಕೊಮ್ಮೆ ಸಿದ್ಧಪಡಿಸುವ ಟರ್ಮ್ ಶೀಟ್ ನಲ್ಲಿ ೩ ಸೆ.ಮೀ. ಮಳೆ ೧೦ ದಿನ ನಿಗದಿಪಡಿಸಲಾಗಿದೆ.
ಆದರೆ ಅದಕ್ಕಿಂತ ಹಿಂದೆ ೩ ಸೆ.ಮೀ.ಮಳೆ ೫ ದಿನ ಬೀಳಬೇಕು ಎಂದಿತ್ತು.
ಜಿಲ್ಲೆಯ ಬಹಳಷ್ಟು ಮಳೆ ಮಾಪನ ಕೇಂದ್ರಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.
ಇದರಿಂದಾಗಿ ವಿಮೆ ಕಂಪನಿಗಳಿಗೆ ಲಾಭ ಅಗುತ್ತಿದೆ, ರೈತರಿಗೆ ಅನ್ಯಾಯ ಆಗುತ್ತಿದೆ.
ನಮ್ಮ ಪಕ್ಷದ ವತಿಯಿಂದ ಈ ಬಗ್ಗೆ ಗಮನ ಹರಿಸಲಾಗುತ್ತದೆ.
ನಾನೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು.
ಉತ್ತರ ಕರ್ನಾಟಕ ರೈತರಿಗೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಪ್ರೀಮಿಯಂನ್ನು ನಮ್ಮ ಜಿಲ್ಲೆಯ ರೈತರು ಪಾವತಿಸಿದ್ದಾರೆ.
ಕೆಡಿಪಿ ಸಭೆಯಲ್ಲಿ ಮಳೆ ಮಾಪನ ಕೇಂದ್ರದ ಸ್ಥಿತಿಗತಿ ಬಗ್ಗೆ ಚರ್ಚೆ ನಡೆದಿದೆ.
ಆದರೂ ಯಾವುದೇ ದುರಸ್ತಿ ಕೆಲಸ ಆಗಿಲ್ಲ.ಇದರಿಂದಾಗಿ ನಮ್ಮ ರೈತರಿಗೆ ಅನ್ಯಾಯ ಆಗುತ್ತಿದೆ, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
B.Y.Raghavendra ವಿಐಎಸ್ಎಲ್ ಅಭಿವೃದ್ಧಿ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಕಾರ್ಖಾನೆಗೆ ಭೇಟಿ ನೀಡಿದ್ದಾರೆ.ಅಭಿವೃದ್ಧಿ ಕುರಿತು ಮೆಕಾನ್ ಸಂಸ್ಥೆಗೆ ವಹಿಸಲಾಗಿದೆ. ಅದೇ ರೀತಿ ಮೆಟಿರಿಯಲ್ಸ್ ಖರೀದಿಗೆ ಮೆಗಾನೆ ಸಂಸ್ಥೆಯನ್ನು ನಿಗದಿ ಮಾಡಿದೆ. ಕಾರ್ಖಾನೆಯ ವಿವಿಧ ವಿಭಾಗವನ್ನು ಏಕ ಕಾಲಕ್ಕೆ ಆರಂಭಿಸುವ ಚಿಂತನೆ ಇದೆ ಎಂದರು.
