Kuvempu University ಕುವೆಂಪು ವಿಶ್ವವಿದ್ಯಾಲಯವು 2025-26ನೇ ಸಾಲಿಗೆ ವಿವಿಧ ಸ್ನಾತಕೋತ್ತರ ಪದವಿ/ಡಿಪ್ಲೊಮಾ ಕೊರ್ಸ್‌ಗಳ ಪ್ರವೇಶಾತಿಗಾಗಿ ಮತ್ತು ಶಂಕರಘಟ್ಟ ಜ್ಞಾನ ಸಹ್ಯಾದ್ರಿ ಹಾಗೂ ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎಂ.ಬಿ.ಎ. ಪದವಿಗೆ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ಹಾಗೂ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಮೂಲಕ ಪ್ರವೇಶಾತಿಗಾಗಿ ಖಾಲಿ ಉಳಿದಿರುವ ಸೀಟುಗಳಿಗೆ ಮತ್ತೊಮ್ಮೆ ಪ್ರವೇಶ ಪರೀಕ್ಷೆ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
Kuvempu University ಆಸಕ್ತ ಅರ್ಹ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವೆಬ್‌ಸೈಟ್ www.kuvempu.ac.inರಲ್ಲಿ ಪ್ರಕಟಿಸಲಾದ ಆಪ್‌ಲೈನ್ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಶುಲ್ಕ ರೂ. 400/-(ಸಾ.ವ), ರೂ. 200/- (ಎಸ್‌ಸಿ/ಎಸ್‌ಟಿ/ಪ್ರವರ್ಗ-1) ಮತ್ತು ಪ್ರವೇಶ ಪರೀಕ್ಷೆ ಶುಲ್ಕ ರೂ. 400/-(ಸಾ.ವ), ರೂ. 200/- (ಎಸ್‌ಸಿ/ಎಸ್‌ಟಿ/ಪ್ರವರ್ಗ-1)ಗಳನ್ನು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಜ್ಞಾನ ಸಹ್ಯಾದ್ರಿ ಶಾಖೆ, ಶಂಕರಘಟ್ಟ, ಎಸ್.ಬಿ.ಐ. ಸಾಮಾನ್ಯ ಖಾತೆ QR Code ಮೂಲಕ ಪಾವತಿಸಿ ಎಂ.ಬಿ.ಎ. ಅಧ್ಯಯನ ವಿಭಾಗ, ಶಂಕರಘಟ್ಟ, ಇಲ್ಲಿ ದಾಖಲೆಗಳ ಪ್ರತಿಗಳನ್ನು ಹಾಗೂ ಶುಲ್ಕ ಪಾವತಿಸಿದ ಚಲನ್‌ನ್ನು ಲಗತ್ತಿಸಿ ಡಿ. 06 ರೊಳಗಾಗಿ ಸಲ್ಲಿಸುವಂತೆ ವಿಶ್ವವಿದ್ಯಾಲಯದ ಕುಲಸಚಿವರು ತಿಳಿಸಿದ್ದಾರೆ.
