Rotary Jubilee Club ನಮ್ಮ ದೇಶದ ಪರಿಸರವನ್ನು ಬಗರಹುಕುಂ, ಅಭಿವೃದ್ಧಿ ಹೆಸರಿನಲ್ಲಿ ಬಹಳಷ್ಟು ಹಾನಿಮಾಡುತ್ತಿದ್ದೇವೆ. ಪ್ರಕೃತಿ ಇಲ್ಲದೆ ಮಳೆ ಬೆಳೆ ಇಲ್ಲ. ಮುಂದೆ ಜೀವನ ಸಾಗಿಸುವುದು ಹೇಗೆ? ಆದ್ದರಿಂದ ನನ್ನ ಕೈಲಾದ ಮಟ್ಟಿಗೆ ಪುಟ್ಟ ಪ್ರಯತ್ನದಿಂದ ‘ಈಶ್ವರವನ’ ಸ್ಥಾಪಿಸಿರುವುದಾಗಿ, ರೋಟರಿ ಜ್ಯೂಬಿಲಿ ಕ್ಲಬ್ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ನಾನೇನು ಹೆಚ್ಚು ಓದಿದವನಲ್ಲ, ವಾರನ್ನ ಮಾಡಿಕೊಂಡು ಬೆಳೆದವನು. ಪದವಿ ಪಡೆದು ಕೆಲಸವು ಸಿಕ್ಕಿತ್ತು. ಆದರೆ ನನ್ನದೆ ಸ್ವಂತ ಉದ್ಯೋಗ ಮಾಡಬೇಕೆಂದು ಬಯಸಿ ಚಿಕ್ಕದಾಗಿ ಪ್ರಾರಂಭಿಸಿದ ಉದ್ಯಮ, ಶಿವಮೊಗ್ಗದ ಜನರ ಪ್ರೀತಿಗೆ ಪಾತ್ರರಾಗಿ ಇಂದು ತಕ್ಕಮಟ್ಟಿಗೆ ಉತ್ತಮ ಗಳಿಕೆಕಂಡು ಹಲವರಿಗೆ ಉದ್ಯೋಗ ನೀಡಿದ್ದೇನೆ.
ಸಮಾಜಕ್ಕೆ ಹಲವು ಋಣ ತೀರಿಸುವ ಜವಾಬ್ದಾರಿ ಎಲ್ಲರ ಮೇಲು ಇರುತ್ತದೆ. ಹಿಂದೆ ‘ದೇವರ ವನ’ ಎಂದು ಗಿಡಮರ ಬೆಳೆಸಿ ಪೂಜಿಸುತ್ತಿದ್ದರು. ಅದರಂತೆ ನನ್ನ ದುಡಿಮೆಯಲ್ಲಿ ಸ್ವಲ್ಪ ವ್ಯಯಿಸಿ, ನಶಿಸುತ್ತಿರುವ ಗಿಡಮರಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದೇನೆ.
ಈಗಾಗಲೇ ನೂರೈವತ್ತಕ್ಕಿಂದ ಹೆಚ್ಚಿನ ಗಿಡಗಳನ್ನು ಗುರ್ತಿಸಿ ಬೆಳೆಸುತ್ತಿದ್ದೇನೆ. ಸಾವಿರಾರುಮಕ್ಕಳಿಗೆ ಅವುಗಳ ಪರಿಚಯ ಪ್ರತೀ ವರ್ಷ ಮಾಡಿಸುತ್ತಿದ್ದೇನೆ, ಅವರಿಂದ ಪ್ರಮಾಣಸಹ ಮಾಡಿಸುತ್ತಿದ್ದೇವೆ.
ಇದು ಚಿಕ್ಕ ಪ್ರಯತ್ನ. ಸಾರ್ವಜನಕರಿಗೆ ಪ್ರತಿ ವರ್ಷ ಶಿವರಾತ್ರಿಯಂದು ವಿಶೇಷ ಪೂಜೆ ಏರ್ಪಡಿಸಿ ಸಸ್ಯರಾಶಿಯ ಪರಿಚಯ ಈಶ್ವರನ ಆರಾಧನೆಗೆ ಅವಕಾಶ ಮಾಡಿಕೊಡುತ್ತಿದ್ದೇನೆ.
ಹಲವು ಸಂಘ ಸಂಸ್ಥೆ, ದಾನಿಗಳ ಸಹಕಾರದಿಂದ ಸರ್ಕಾರಿ ಆಸ್ವತ್ರೆಗೆ ಬರುವ ರೋಗಿಗಳ ಸಂಬಂದಿಗಳಗೆ ಪ್ರತಿದಿನ ಉಚಿತ ಆಹಾರ ನೀಡುವ ಕಾರ್ಯವನ್ನು ಪ್ರಾರಂಭಿಸಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿ.ಎಸ್.ಅಶ್ವಥ್ ಮಾತನಾಡಿ ಕಷ್ಟದಿಂದ ಓದಿ ಮುಂದೆ ಸ್ವಂತ ಉದ್ಯಮಸ್ಥಾಪಿಸಿ, ಹಲವರಿಗೆ ಬದುಕುನೀಡಿ, ಎಲೆಮರೆ ಕಾಯಿಯಂತೆ ಬೆಳೆದಿ ಇಂದು ನಗರದಲ್ಲಿ ಅತ್ಯುತ್ತಮ ಕಾರ್ಯಮಾಡುತ್ತಿರುವ ನವ್ಯಶ್ರಿನಾಗೇಶ್ ಮನೆ ಮಾತಾಗಿದ್ದಾರೆ.
Rotary Jubilee Club ಅವರ ಸಮಾಜಮುಖಿ ಕಾರ್ಯ ಹೀಗೆ ಮುಂದುವರಿದು, ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದರು.
ಭಾರದ್ವಾಜ್ ಸ್ವಾಗತಿಸಿದರು, ಲಕ್ಷ್ಮೀನಾರಾಯಣ್ ಪ್ರಾಸ್ತಾವಿಕವಾಗಿ ಮಾತನಾಡಿದರು ಲಕ್ಷ್ಮೀನಾರಾಯಣ್ ವಂದಿಸಿದರು.
