Bhadravati VISL ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾವತಿ ವಿಐಎಸ್ಎಲ್ ನಿವೃತ್ತ ಉದ್ಯೋಗಿಗಳ ಕಲ್ಯಾಣ ಕೇಂದ್ರದ ಮುಂದಿನ ಐದು ವರ್ಷ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯ ಚುನಾವಣೆ ಡಿ.28ಕ್ಕೆ ಸಿಲ್ವರ್ ಜ್ಯುಬಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಸ್ವೇಡಿಯಂ ಪಕ್ಕ ನ್ಯೂಟೌನ್ ಭದ್ರಾವತಿಯಲ್ಲಿ ನಡೆಸಲು ನ.25ರಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಮಹೇಶ್ವರಪ್ಪ ತಿಳಿಸಿದ್ದಾರೆ.
Bhadravati VISL ಚುನಾವಣಾಧಿಕಾರಿಯಾಗಿ ಎಸ್.ಸುಮಂತ್‌ಕುಮಾರ್ ಕಾರ್ಯನಿರ್ವಹಿಸಲಿದ್ದಾರೆ. ಈ ಚುನಾವಣೆಯಲ್ಲಿ ಪ್ರತಿಯೊಬ್ಬ ನಿವೃತ್ತ ಸದಸ್ಯರು ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸುವಂತೆ ಮನವಿ ಮಾಡಿದ್ದಾರೆ.
